Home » ಕುಂದಾಪುರ: ಕಟ್ಟಡದಿಂದ ಬಿದ್ದು ವ್ಯಕ್ತಿ ಮೃತ್ಯು.
ಕುಂದಾಪುರ: ತಾಲೂಕಿನ ಕುಂಭಾಶಿ ಗ್ರಾಮದಲ್ಲಿ ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಕಾರ್ಕಳದ ಕಾರ್ತಿಕ್ ರಾವ್ (46) ಮೃತಪಟ್ಟಿದ್ದಾರೆ.
ಅವರು ಮಣಿಪಾಲದ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, ನಿರ್ಮಾಣ ಹಂತದ ಅಪಾರ್ಟ್ಮೆಂಟ್ನ ಕಾಂಕ್ರೀಟ್ ಕೆಲಸದ ಉಸ್ತುವಾರಿ ನೋಡಿಕೊಂಡಿದ್ದರು.
ಮೃತರ ಪುತ್ರ ಕೀರ್ತಿವರ್ಧನ್ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.