ಉಡುಪಿ: ರೋಟರಿ ಉಡುಪಿ ಪ್ರಾಯೋಜಿತ ಸೈಂಟ್ ಮೇರಿಸ್ ಇಂಟರಾಕ್ಟ ಕ್ಲಬ್ ನ ಪದಗ್ರಹಣ ಸಮಾರಂಭ ವು ಶಾಲಾವಠಾರದಲ್ಲಿ ನೆರವೇರಿತು.
ಮಾಜಿ ಅಸಿಸ್ಟೆಂಟ್ ಗವರ್ನರ್ ರೋ. ಡಾ. ಸುರೇಶ್ ಶೆಣೈ ಅವರು ಇಂಟರಾಕ್ಟ್ ಅಧ್ಯಕ್ಷ ರಚನ್ ಮತ್ತು ಕಾರ್ಯದರ್ಶಿ ನಾಗರಾಜ್ ಅವರಿಗೆ ಪದಪ್ರಧಾನ ನೆರೆವೆರಿಸಿ ಶುಭಹಾರೈಸಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಜೋಯ್ಸ್ ಡೀಸ ಎಲ್ಲರನ್ನೂ ಸ್ವಾಗತಿಸಿದರು. ರೋಟರಿ ಅದ್ಯಕ್ಷ ರೋ. ಗುರುರಾಜ ಭಟ್, ಇಂಟರಾಕ್ಟ ಸಭಾಪತಿ ರೋ. ಸಾದನಾ ಮುಂಡ್ಕೂರ್, ಶುಭ ಹಾರೈಸಿದರು. ರೋ.ಡಾ. ಸುರೇಶ್ ಶೆಣೈ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷೆ ಬಗ್ಗೆ ಮಾಹಿತಿ ನೀಡಿದರು. ಶಾಲಾ ಶಿಕ್ಷಕಿ ಪ್ರತಿಮಾ ಅವರು ಧನ್ಯವಾದ ಸಮರ್ಪಿಸಿದರು.
ಇಂಟರಾಕ್ಟ ಶಿಕ್ಷಕ ಸಂಯೋಜಕ ಜಯಪ್ರಕಾಶ್ ಶೆಟ್ಟಿ ಯವರು ಕಾರ್ಯಕ್ರಮ ಸಂಯೋಜಿಸಿದ್ದರು. ರೋ.ರಾಮಚಂದ್ರ ಉಪಾಧ್ಯಾಯ, ಕಾರ್ಯದರ್ಶಿ ರೋ. ವೈಷ್ಣವಿ ಆಚಾರ್ಯ, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.