ಉಡುಪಿ : ಉಡುಪಿ ತೆಂಕಪೇಟೆಯ ಯುವಕಲಾವಿದರ ಝೇಂಕಾರ ಟ್ರೂಪ್ನ 10 ನೇ ವಾರ್ಷಿಕೋತ್ಸವ ಜೂ.9 ರಂದು ಉಡುಪಿಯ ಪುರಭವನದಲ್ಲಿ ನಡೆಯಿತು.
ಗುರುವಂದನೆ ; ತಂಡದ ಸದಸ್ಯರಿಗೆ ಸಂಗೀತ ವಿದ್ಯೆ ಕಲಿಸಿಕೊಟ್ಟು ಸದಾ ಯುವ ಸಂಗೀತ ದಾರಿಗೆ ಪ್ರೋತ್ಸಹ ನೀಡುತ್ತಿರುವ ಗುರುಗಳಿಗೆ ಗುರುವಂದನೆಯ ಗೌರವ ಅರ್ಪಣೆ ನಡೆಯಿತು. ಗುರುಗಳಾದ ಸುಧೀರ್ ನಾಯಕ್ , ಶ್ರೀ ಶಂಕರ್ ಶೆಣೈ , ಸತ್ಯವಿಜಯ ಭಟ್ , ಮಾಧವ ಆಚಾರ್ಯ , ಮಹಾಬಲೇಶ್ವರ ಭಾಗವತ್ , ಸತ್ಯಚರಣ್ ಶೆಣೈ , ವಿಠ್ಠಲದಾಸ ಭಟ್ , ನರಸಿಂಹ ಕಿಣಿ , ರಾಮ ಭಟ್ , ಯೋಗೀಶ್ ಕಿಣಿ ರವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.
ಬೆಳ್ಳಿಗೆಯಿಂದ ರಾತ್ರಿ ತನಕ ಪ್ರಸಿದ್ಧ ಸಂಗೀತಜ್ಞರುಗಳಿಂದ ವೈವಿಧ್ಯಮ ಮಯ ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಅವಧೂತ್ ಗಾಂಧಿ ಹಾಗೂ ತಂಡದವರಿಂದ ಮಹಾರಾಷ್ಟ್ರದ ಋಷಿ ಸಾಹಿತ್ಯದಲ್ಲಿ ಜಾನಪದ ಸಂಗೀತ , ಅಪರಾಹ್ನ 3.30 ಕ್ಕೆ ಸ್ವರಾಂಜಲಿ ಕಾರ್ಯಕ್ರಮದಲ್ಲಿ ಸಿದ್ಧಾರ್ಥ ಬೆಳ್ಮಣ್ಣು ಅವರಿಂದ ಹಿಂದೂಸ್ತಾನಿ ಸಂಗೀತ ನಡೆಸಿಕೊಟ್ಟರು. ಸಾವಿರಾರು ಸಂಗೀತ ಅಭಿಮಾನಿಗಳು ವೈವಿಧ್ಯಮಯ ಸಂಗೀತ ಕಾರ್ಯಕ್ರಮಗಳನ್ನು ಆನಂದಿಸಿ ಖುಷಿಪಟ್ಟರು.