ಉಡುಪಿ: ಜಯಲಕ್ಷ್ಮೀ ಸಿಲ್ಕ್ಸ್ ನಲ್ಲಿ ಮಿಸ್ ಫೈರಿಂಗ್ ಪ್ರಕರಣ: ಪಿಸ್ತೂಲ್ ವಾರಸುದಾರರ ಪತ್ತೆ.

ಉಡುಪಿ: ಉಡುಪಿಯ ಪ್ರತಿಷ್ಠಿತ ಜಯಲಕ್ಷ್ಮೀ ಸಿಲ್ಕ್ಸ್ ಬಟ್ಟೆ ಮಳಿಗೆಯಲ್ಲಿ ಇಂದು ಮಧ್ಯಾಹ್ನ ಪತ್ತೆಯಾದ ಪಿಸ್ತೂಲಿನ ವಾರಿಸುದಾರರನ್ನು ಪೊಲೀಸರು ಪತ್ತೆ ಹಚ್ಚಿದ್ದು, ಅದೊಂದು ಪರವಾನಿಗೆ ಹೊಂದಿದ ಪಿಸ್ತೂಲ್ ಎಂದು ತಿಳಿದುಬಂದಿದೆ.

ಮಂಗಳೂರಿನ ಜಯಪ್ರಕಾಶ್ ಎಂಬವರಿಗೆ ಸೇರಿದ ಪಿಸ್ತೂಲ್ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಇವರು ಬಟ್ಟೆ ಮಳಿಗೆಯ ಮೊದಲನೇ ಮಹಡಿಯ ಪುರುಷರ ಶೌಚಾಲಯದ ಬಳಿ ಪಿಸ್ತೂಲನ್ನು ಮರೆತು ಬಿಟ್ಟು ಹೋಗಿದ್ದರು ಎನ್ನಲಾಗಿದೆ.

ಸ್ವಚ್ಛತಾ ಸಿಬ್ಬಂದಿಯೋರ್ವರಿಗೆ ಪಿಸ್ತೂಲ್ ಸಿಕ್ಕಿದ್ದು, ಇನ್ನೋರ್ವ ಸಿಬ್ಬಂದಿ ಪರೀಕ್ಷಿಸಲು ಪಡೆದುಕೊಂಡು ಕಾಕ್‌ ಮಾಡಿದ್ದಾನೆ. ಈ ವೇಳೆ ಆಕಸ್ಮಿಕವಾಗಿ ಟ್ರಿಗರ್‌ ಕೈ ತಾಗಿದಾಗ ಗುಂಡು ಸಿಡಿದು ಇನ್ನೊಬ್ಬ ಸಿಬ್ಬಂದಿಯ ಎಡಕೈ ತೋಳಿಗೆ ಗಾಯವಾಗಿತ್ತು. ಪಿಸ್ತೂಲ್‌ ಬಿಟ್ಟು ಹೋದ ಜಯಪ್ರಕಾಶ್ ವಿರುದ್ಧ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.