ಉಡುಪಿ,ಮೇ 8: ನಗರದ ಕನಕದಾಸ ರಸ್ತೆಯಲ್ಲಿ ಇರುವ ಸುಸಜ್ಜಿತ ವಿಶಾಲ ಶೋರೂಮ್ ‘ಮಾರುತಿ ಜ್ಯುವೆಲರ್ಸ್’ ನಲ್ಲಿ ಅಕ್ಷಯ ತೃತೀಯದ ಪ್ರಯುಕ್ತ ಸ್ಪೆಶಲ್ ಡಿಸ್ಕೌಂಟ್ ಸೇಲ್ ಆಯೋಜಿಸಲಾಗಿದೆ.
ಸ್ವರ್ಣಭರಣ ಉದ್ಯಮದಲ್ಲಿ 30 ವರ್ಷಗಳ ಅಪಾರ ಅನುಭವ ಹೊಂದಿರುವ ನಾಜೂಕು ಕೆಲಸಕ್ಕೆ ಹೆಸರುವಾಸಿಯಾದ ಈ ಮಳಿಗೆಗಳಲ್ಲಿ ಪ್ರತಿ 1 ಗ್ರಾಂ ಚಿನ್ನ ಖರೀದಿಗೆ 300 ರೂ.ಡಿಸ್ಕೌಂಟ್ ನೀಡಲಾಗುವುದು. ಎಲ್ಲ ಮಾದರಿಯ, ಎಲ್ಲ ವಿನ್ಯಾಸದ ಪಾರಂಪರಿಕ ಮತ್ತು ಫ್ಯಾಶನೇಬಲ್ ಚಿನ್ನಾಭರಣಗಳು ಇಲ್ಲಿ ದೊರೆಯಲಿವೆ.
ಸಂಸ್ಥೆಯು ಈಗಾಗಲೇ ಉಡುಪಿಯಲ್ಲಿ ಎರಡು, ಕುಂದಾಪುರದ ಮುನ್ಸಿಪಲ್ ರಸ್ತೆ ಮತ್ತು ಭಟ್ಕಳದ ಮುಖ್ಯರಸ್ತೆಯಲ್ಲಿ 1 ಮಳಿಗೆಯನ್ನು ಹೊಂದಿದ್ದು, ಮಾಲಕರೇ ಖುದ್ದಾಗಿ ಗ್ರಾಹಕರೊಂದಿಗೆ ವ್ಯವಹಾರದಲ್ಲಿ ತೊಡಗಿಕೊಳ್ಳುವುದು ಸಂಸ್ಥೆಯ ವಿಶೇಷತೆಯಾಗಿದೆ.
ಇಲ್ಲಿ 916 ಬಿಐಎಸ್ ಹಾಲ್ ಮಾರ್ಕ್ ನ ಚಿನ್ನಭರಣಗಳು ಲಭ್ಯವಿದ್ದು, ಗ್ರಾಹಕರ ಅನುಕೂಲಕ್ಕಾಗಿ ತಿಂಗಳ ಅದೃಷ್ಟ ಯೋಜನೆಯ ಸೌಲಭ್ಯವಿದೆ. ಇಲ್ಲಿ ಉತ್ಕೃಷ್ಟ ಗುಣಮಟ್ಟದ ಬೆಳ್ಳಿಯನ್ನು ಶೇ. 85ರಷ್ಟು ದರದಲ್ಲಿ ಖರೀದಿಸಲಾಗುವುದು.
ಈ ವಿಶೇಷ ರಿಯಾಯಿತಿಯು ಮೇ 8 ರಿಂದ 12ರವರೆಗೆ ಮಾತ್ರ ಇರಲಿದೆ ಎಂದು ಮಳಿಗೆಯ ಮಾಲಕರ ಪ್ರಕಟಣೆ ತಿಳಿಸಿದೆ.
ಗುಣಮಟ್ಟದ, ಪರಿಶುದ್ಧ ಚಿನ್ನಾಭರಣಗಳು ಲಭ್ಯ
ಮಾಲಕರೇ ಖುದ್ದಾಗಿ ಚಿನ್ನಾಭರಣ ತಯಾರಿಕೆಯಲ್ಲಿ ಮುತುವರ್ಜಿ ವಹಿಸುವುದು ಈ ಮಳಿಗೆಯ ವಿಶೇಷತೆ. ಸ್ಥಳೀಯವಾಗಿ ಮತ್ತು ಕೊಲ್ಕತ್ತಾದ ಕುಸುರಿ ಕೆಲಸಗಳನ್ನು ಮಾತ್ರ ಇಲ್ಲಿ ಮಾಡಲಾಗುತ್ತಿದ್ದು, ಬಹುತೇಕ ಚಿನ್ನಾಭರಣಗಳು ಮ್ಯಾನ್ ಮೇಡ್ ಆಗಿರುತ್ತದೆ. ಅತ್ಯಂತ ನಾಜೂಕು, ಬಾಳಿಕೆಯ ದೃಷ್ಟಿಯಿಂದ ಗಟ್ಟಿಮುಟ್ಟಾಗಿ ಚಿನ್ನಾಭರಣ ತಯಾರಿಸಿ ಕೊಡುವ ಮಳಿಗೆಯನ್ನು ಸಾಕಷ್ಟು ಗ್ರಾಹಕರು ಮೆಚ್ಚಿಕೊಂಡಿರುವುದು ಮಳಿಗೆಯ ಗುಣಮಟ್ಟದ ಕೆಲಸ ಮತ್ತು ಪರಿಶುದ್ಧ ಚಿನ್ನಾಭರಣಗಳು ಸಾಕ್ಷಿಯಾಗಿವೆ. ಗ್ರಾಹಕರ ಅಪೇಕ್ಷೆಗೆ ತಕ್ಕಂತೆ ಎಲ್ಲ ಬಗೆಯ ಆಭರಣ ಸಕಾಲದಲ್ಲಿ ಒದಗಿಸುವುದಲ್ಲದೆ ಗ್ರಾಹಕರಿಗೆ ಅನುಕೂಲವಾಗುವಂತೆ ಸೂಕ್ತ ಮಾರ್ಗದರ್ಶನವನ್ನು ನೀಡುತ್ತಾ ಬಂದಿದೆ. ಇಲ್ಲಿ ಒಮ್ಮೆ ಚಿನ್ನ ಖರೀದಿಸಿದವರು ಮತ್ತೊಮ್ಮೆ ಅರಸಿ ಬರುವ ಮಳಿಗೆ ಎಂಬ ಪ್ರಸಿದ್ದಿಗೆ ಈ ಮಳಿಗೆ ಪಾತ್ರವಾಗಿದೆ.