ಅಕ್ಷಯ ತೃತೀಯ ಪ್ರಯುಕ್ತ ಉಡುಪಿ ಮಾರುತಿ ಜ್ಯುವೆಲ್ಲರ್ಸ್ ನಲ್ಲಿ ಡಿಸ್ಕೌಂಟ್ ಸೇಲ್ಸ್

ಉಡುಪಿ,ಮೇ 8: ನಗರದ ಕನಕದಾಸ ರಸ್ತೆಯಲ್ಲಿ ಇರುವ ಸುಸಜ್ಜಿತ ವಿಶಾಲ ಶೋರೂಮ್ ‘ಮಾರುತಿ ಜ್ಯುವೆಲರ್ಸ್’ ನಲ್ಲಿ ಅಕ್ಷಯ ತೃತೀಯದ ಪ್ರಯುಕ್ತ ಸ್ಪೆಶಲ್ ಡಿಸ್ಕೌಂಟ್ ಸೇಲ್ ಆಯೋಜಿಸಲಾಗಿದೆ.ಸ್ವರ್ಣಭರಣ ಉದ್ಯಮದಲ್ಲಿ 30 ವರ್ಷಗಳ ಅಪಾರ ಅನುಭವ ಹೊಂದಿರುವ ನಾಜೂಕು ಕೆಲಸಕ್ಕೆ ಹೆಸರುವಾಸಿಯಾದ ಈ ಮಳಿಗೆಗಳಲ್ಲಿ ಪ್ರತಿ 1 ಗ್ರಾಂ ಚಿನ್ನ ಖರೀದಿಗೆ 300 ರೂ.ಡಿಸ್ಕೌಂಟ್ ನೀಡಲಾಗುವುದು. ಎಲ್ಲ ಮಾದರಿಯ, ಎಲ್ಲ ವಿನ್ಯಾಸದ ಪಾರಂಪರಿಕ ಮತ್ತು ಫ್ಯಾಶನೇಬಲ್ ಚಿನ್ನಾಭರಣಗಳು ಇಲ್ಲಿ ದೊರೆಯಲಿವೆ.ಸಂಸ್ಥೆಯು ಈಗಾಗಲೇ ಉಡುಪಿಯಲ್ಲಿ ಎರಡು, ಕುಂದಾಪುರದ ಮುನ್ಸಿಪಲ್ ರಸ್ತೆ ಮತ್ತು […]

ಬೈಂದೂರು: ವ್ಯಕ್ತಿ ನಾಪತ್ತೆ

ಉಡುಪಿ, ಮೇ 9: ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಬೈಂದೂರು ತಾಲೂಕು ಹೇರೂರು ಗ್ರಾಮದ ರಾಗಿಹಕ್ಲು ಕಟ್ಕೇರಿ ನಿವಾಸಿ ಹೆಚ್ ಶೇಖರ್ ಗೌಡ (40) ಎಂಬ ವ್ಯಕ್ತಿಯು ಮೇ 5 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ 2 ಇಂಚು ಎತ್ತರ, ಕೋಲು ಮುಖ, ಎಣ್ಣೆಗಪ್ಪು ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದು, ಕನ್ನಡ ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಬೈಂದೂರು ಪೊಲೀಸ್ ಠಾಣೆಯ ಉಪನಿರೀಕ್ಷಕರು ದೂ.ಸಂಖ್ಯೆ: 08254-251033 […]

“ಮಣಿಪಾಲ ಜ್ಞಾನಸುಧಾ” ವಾಣಿಜ್ಯ ವಿಭಾಗದ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ.

ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿಲಾಷೆಗೆ ನೀರೆರೆದು ಪೋಷಿಸುತ್ತ ಬಂದಿದೆ. ಈ ನಿಟ್ಟಿನಲ್ಲಿ ಹೊಸ ಹೆಜ್ಜೆಯನ್ನಿಟ್ಟು ಮುಂದೆ ಸಾಗುತ್ತ ಮಣಿಪಾಲದ ವಿದ್ಯಾನಗರದಲ್ಲಿ “ಮಣಿಪಾಲ ಜ್ಞಾನಸುಧಾ” ಎಂಬ ನಾಮಾಂಕಿತದ ನೂತನ ಪದವಿಪೂರ್ವ ಕಾಲೇಜನ್ನು ಆರಂಭಿಸಿದ್ದು 2024-25ನೇ ಶೈಕ್ಷಣಿಕ ವರ್ಷದಿಂದ ಕಾರ್ಯನಿರ್ವಹಿಸಲಿದೆ. ಈ ಕಾಲೇಜಿನಲ್ಲಿ ವಾಣಿಜ್ಯ ವಿಭಾಗಕ್ಕೆ ಸೇರಲ್ಪಡುವ ಅರ್ಹ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಮತ್ತು ಶೇ 50 ಶುಲ್ಕ ವಿನಾಯಿತಿಯೊಂದಿಗೆ ಶಿಕ್ಷಣವನ್ನು ನೀಡಲಿದ್ದು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ವಿಜ್ಞಾನ […]

ಉಡುಪಿ: ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠ; ನಾಳೆ(ಮೇ.10) ಬಾಲಭೋಜನಾಲಯ, ಧ್ಯಾನ ಮಂದಿರ ಲೋಕಾರ್ಪಣೆ

ಉಡುಪಿ: ಉಡುಪಿ ಕವಿ ಮುದ್ದಣ ಮಾರ್ಗದ ಸನಿಹದಲ್ಲಿರುವ ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠದ ಮೊದಲ ಮಹಡಿಯಲ್ಲಿ ಸಂಪ್ರದಾಯದಂತೆ ಪ್ರತೀ ಗುರುವಾರ ನಡೆಯುತ್ತಿರುವ ಬಾಲ ಭೋಜನ, ಅನ್ನದಾನ ಸೇವೆಗಳಿಗೆ ಅನುಕೂಲವಾಗಲು ನಿರ್ಮಿಸಲಾದ ಬಾಲಭೋಜನಾಲಯ ಮತ್ತು ಧ್ಯಾನ ಮಂದಿರದ ಲೋಕಾರ್ಪಣೆ ಮೇ.10ರ ಬೆಳಗ್ಗೆ 9 ಗಂಟೆಗೆ ನಡೆಯಲಿದೆ. ಬೆಳಗ್ಗೆ 8.30ಕ್ಕೆ ಗಣಪತಿ ಹೋಮ, 9.30ರಿಂದ ಮಕ್ಕಳ ಕುಣಿತ ಭಜನ ಸ್ಪರ್ಧೆ, ಮಧ್ಯಾಹ್ನ 12ಕ್ಕೆ ಮಹಾಪೂಜೆ,12.30 ರಿಂದ ಅನ್ನಸಂತರ್ಪಣೆ ಜರಗಳಲಿದೆ. ಸಂಜೆ 6 ಗಂಟೆಗೆ ನಡೆಯಲಿರುವ ಧಾರ್ಮಿಕ ಸಭಾ […]

ಕಾರ್ಕಳ ಜ್ಞಾನಸುಧಾ ವಿದ್ಯಾರ್ಥಿನಿ ಸಹನಾ ರಾಜ್ಯಕ್ಕೆ ತೃತೀಯ

ಕಾರ್ಕಳ: ಎಸ್ಸ್ ಸೆಲ್ಸಿ ಫಲಿತಾಂಶ ಪ್ರಕಟವಾಗಿದ್ದು, ಕಳೆದ ಸಾಲಿನಲ್ಲಿ 18ನೇ ಸ್ಥಾನ ಪಡೆದಿದ್ದ ಉಡುಪಿ ಜಿಲ್ಲೆ ಈ ಬಾರಿ 94% ಫಲಿತಾಂಶದೊಂದಿಗೆ ಪ್ರಥಮ ಸ್ಥಾನಕ್ಕೇರಿದೆ. ಕಾರ್ಕಳ ಜ್ಞಾನಸುಧಾ ವಿದ್ಯಾರ್ಥಿನಿ ಸಹನಾ 623 ಅಂಕಗಳೊಂದಿಗೆ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದಿದ್ದಾರೆ. ಈಕೆ ಕಾರ್ಕಳ ತಾಲೂಕು ಹಿರ್ಗಾನ ಗ್ರಾಮದ ಜೋಡು ರಸ್ತೆಯ ಶಂಕರ್ ಹಾಗೂ ಪ್ರಭಾಕರ್ ಅವರ ಪುತ್ರಿ.