ಬೆಂಗಳೂರು: ಕೇರಳದಲ್ಲಿ ದಿನೇ ದಿನೇ ಝೀಕಾ ವೈರಸ್ ಹೆಚ್ಚಾಗುತ್ತಿದ್ದು, ಹೀಗಾಗಿ ದಕ್ಷಿಣ ಕನ್ನಡ, ಉಡುಪಿ ಮತ್ತು ಚಾಮರಾಜನಗರ ಗಡಿ ಜಿಲ್ಲೆಗಳಲ್ಲಿ ಹೆಚ್ಚಿನ ನಿಗಾ ವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಯಾವ ರೀತಿ ಹರಡುತ್ತದೆ.?
ಝೀಕಾ ವೈರಸ್ ಸೊಳ್ಳೆಗಳ ಮೂಲಕ ಹರಡುತ್ತದೆ. ಈಡಿಸ್ ಸೊಳ್ಳೆಗಳ ಮೂಲಕ ಹರಡುತ್ತದೆ. ಇವು ಹಗಲಿನ ವೇಳೆಯಲ್ಲಿ ಕಚ್ಚುತ್ತವೆ ಹಾಗೂ ಹೆಚ್ಚಾಗಿ ಉಷ್ಣವಲಯದ ಮತ್ತು ಉಪೋಷ್ಣವಲಯದ ಪ್ರದೇಶಗಳಲ್ಲಿ ಕಂಡುಬರುತ್ತದೆ.
ಇದು ಕೇವಲ ಸೊಳ್ಳೆ ಕಡಿತದಿಂದ ಮಾತ್ರವಲ್ಲ, ರಕ್ತದ ವರ್ಗಾವಣೆ, ಅಸುರಕ್ಷಿತ ಲೈಂಗಿಕತೆ ಮುಂತಾದ ದೇಹದ ದ್ರವಗಳ ವಿನಿಮಯದ ಮೂಲಕವೂ ಸೋಂಕಿತ ಪಾಲುದಾರರ ನಡುವೆ ಹರಡುತ್ತದೆ. ಗರ್ಭಿಣಿಗೆ ಝೀಕಾ ವೈರಸ್ ಸೋಂಕಿಗೆ ಒಳಗಾಗಿದ್ದರೆ ಹುಟ್ಟಲಿರುವ
ಮಗುವಿಗೆ ಸೋಂಕು ರವಾನಿಸಬಹುದು.
ವೈರಸ್ ನ ಲಕ್ಷಣಗಳೇನು?.:
ಈ ಸೋಂಕು ಕಾಣಿಸಿಕೊಂಡ ವ್ಯಕ್ತಿಯಲ್ಲಿ ಜ್ವರ, ಸಣ್ಣ ಸಣ್ಣ ಗುಳ್ಳೆಗಳು, ಕಣ್ಣಲ್ಲಿ ನೀರು ಸೋರುವುದು ಮತ್ತು ಸಂಧಿವಾತ ಮೊದಲಾದ ಲಕ್ಷಣಗಳು ಕಂಡುಬರುತ್ತವೆ.
ಗರ್ಭಿಣಿಯಲ್ಲಿ ಈ ವರ್ಷದ ಮೊದಲ ಪ್ರಕರಣ ಪತ್ತೆಯಾಗಿದ್ದರೆ, ನಂತರ ಮತ್ತೆ 13 ಝೀಕಾ ವೈರಸ್ ಪ್ರಕರಣಗಳು ಸಹ ಪತ್ತೆಯಾಗಿದೆ. ಈ ಎಲ್ಲಾ ಮಾದರಿಗಳನ್ನು ಈಗ ಎನ್ಐವಿ ಪುಣೆಗೆ ಕಳುಹಿಸಲಾಗಿದೆ.
ಹೀಗಾಗಿ ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ಶಿಕ್ಷಣ, ಕೈಗಾರಿಕೆ, ಪಂಚಾಯತಿ ರಾಜ್, ಪುರಸಭೆಯ ನಿಗಮಗಳ ಇಲಾಖೆಗಳೊಂದಿಗೆ ಸಭೆ ನಡೆಸಿ, ರೋಗ ಹರಡದಂತೆ ಎಚ್ಚರವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಹಾಯಕರಿಗೂ ನಿಗಾ ವಹಿಸುವಂತೆ ಆದೇಶಿಸಲಾಗಿದೆ.