ಮಾಹೆ ಗಾಂಧಿಯನ್ ಸೆಂಟರ್ ವತಿಯಿಂದ ಯೂಥ್ ಪಾರ್ಲಿಮೆಂಟ್ ಕಾರ್ಯಕ್ರಮ

ಮಣಿಪಾಲ: ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (GCPAS) ಆಶ್ರಯದಲ್ಲಿ ಸಂಸದೀಯ ಕಾರ್ಯವಿಧಾನ ಮತ್ತು ಚರ್ಚೆಗಳ ಉತ್ತಮ ತಿಳುವಳಿಕೆಗಾಗಿ ‘ಯೂಥ್ ಪಾರ್ಲಿಮೆಂಟ್’ ನ್ನು ಶನಿವಾರ ಹಮ್ಮಿಕೊಳ್ಳಲಾಯಿತು. ಇದನ್ನು ವಿಭಾಗದ ಬಿಎ- ಎಸ್ಥೆಟಿಕ್ಸ್ ಅಂಡ್ ಪೀಸ್ ಸ್ಟಡೀಸ್ ನ ವಿದ್ಯಾರ್ಥಿಗಳು ಆಯೋಜಿಸಿದ್ದರು, ಇತರ ಎಲ್ಲ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದರು.

ವಿದ್ಯಾರ್ಥಿಗಳು ಸಂಸತ್ತಿನ ಕಲಾಪವನ್ನು ಪ್ರಶ್ನೋತ್ತರ ಅವಧಿ, ವಿಧೇಯಕಗಳ ಮಂಡನೆ ಇತ್ಯಾದಿಗಳೊಂದಿಗೆ ಮರುಸೃಷ್ಟಿಸಿದರು ಮತ್ತು ಆರೋಗ್ಯ-ಕುಟುಂಬ ಕಲ್ಯಾಣ, ಕೃಷಿ, ಮಹಿಳೆ, ಗೃಹ ವ್ಯವಹಾರ ಇತ್ಯಾದಿ ವಿಷಯಗಳ ಚರ್ಚೆ ನಡೆಯಿತು. ಮಹಿಳಾ ಮೀಸಲಾತಿ ಮಸೂದೆ, UAPA (ತಿದ್ದುಪಡಿ) ಮಸೂದೆ, ಸಲಿಂಗ ವಿವಾಹ ಗುರುತಿಸುವಿಕೆ ಮತ್ತು ರಕ್ಷಣೆ ಮಸೂದೆಯನ್ನು “ವಿದ್ಯಾರ್ಥಿ ಸಂಸತ್ತಿನಲ್ಲಿ” ಚರ್ಚಿಸಲಾಯಿತು.

ವಿದ್ಯಾರ್ಥಿಗಳಾದ ಅಪೂರ್ವ, ಇನಿಯನ್, ಹರ್ಷಿತಾ, ಯಶಸ್ವಿನಿ ಕಾರ್ಯಕ್ರಮವನ್ನು ಸಂಯೋಜಿಸಿದರು. ಮತ್ತು ಪ್ರಾಧ್ಯಾಪಕಿ ತನಿಷ್ಕಾ ಕೋಟ್ಯಾನ್ ಮತ್ತು ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಮಾರ್ಗದರ್ಶನ ನೀಡಿದರು.