ಬೆಂಗಳೂರು: ಬೆಂಗಳೂರಿನ ಕದುರುಗೆರೆ ಎಂಬಲ್ಲಿ ಯುವತಿಯೊಬ್ಬಳು ನಿಶ್ಚಿತಾರ್ಥವಾದ ಎರಡೇ ದಿನಕ್ಕೆ ಆತ್ಮಹತ್ಯೆಗೆ ಶರಣಾದ ಘಟನೆ ಸಂಭವಿಸಿದೆ.
ಕದುರುಗೆರೆ ನಿವಾಸಿ ರೇಖಾ(23) ಆತ್ಮಹತ್ಯೆ ಮಾಡಿಕೊಂಡ ಯುವತಿ. ಈಕೆಗೆ ನೆಲಮಂಗಲದ ಯುವಕನೊಂದಿಗೆ ವಿವಾಹ ಫಿಕ್ಸ್ ಆಗಿತ್ತು. ಇನ್ನೇನು ಕೆಲ ದಿನಗಳಲ್ಲಿ ವಿವಾಹವಾಗಿ ಹೊಸ ಬದುಕಿಗೆ ಪಾದಾರ್ಪಣೆ ಮಾಡಬೇಕಿದ್ದ ಈಕೆ ಆತ್ಮಹತ್ಯೆ ಮಾಡಿಕೊಂಡಿರುವುದು ಅನುಮಾನಕ್ಕೆ ಎಡಿಮಾಡಿಕೊಟ್ಟಿದೆ.
ಮೃತ ರೇಖಾ ಎಂಬಿಎ ವ್ಯಾಸಂಗ ಮಾಡಿದ್ದಳು. ನಿಶ್ಚಿತಾರ್ಥದ ನಂತರವೂ ಭಾವೀ ಪತಿಯೊಂದಿಗೆ ಅನ್ಯೋನ್ಯತೆಯಿಂದ ಇದ್ದಳು ಎನ್ನಲಾಗಿದೆ.
ಆದರೆ ಮನೆಯವರು ಆಕೆ ಹೊಟ್ಟೆನೋವು ಸಮಸ್ಯೆಯಿಂದ ಬಳಲುತ್ತಿದ್ದಳು. ನೋವು ಸಹಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿಕೆ ನೀಡಿದ್ದಾರೆ. ಮನೆಯವರ ಹೇಳಿಕೆ ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ಆತ್ಮಹತ್ಯೆಗೆ ನಿಜವಾದ ಕಾರಣ ಪೊಲೀಸ್ ತನಿಖೆಯಿಂದ ತಿಳಿಯಬೇಕಾಗಿದೆ.