ಚಾಂಪಿಯನ್ಸ್ ಟ್ರೋಫಿಯ ಆತಿಥ್ಯ ವಹಿಸಿಕೊಂಡು ಪಾಕಿಸ್ತಾನ ತಂಡ ಮುಗ್ಗರಿಸಿದ ಬೆನ್ನಲ್ಲೇ ಎಲ್ಲೆಡೆಯೂ ಪಾಕಿಸ್ತಾನ ತಂಡದ ಕುರಿತು ಚರ್ಚೆಯಾಗುತ್ತಿದೆ. ಭಾರತ ತಂಡ ಪಾಕ್ ಅನ್ನು ಮಣಿಸಿದ್ದು ಒಳ್ಳೆಯ ಕಾರಣಕ್ಕಾಗಿ ಸುದ್ದಿಯಲ್ಲಿದೆ. ಕೆಲವು ಸಮಯದ ಹಿಂದೆ ಭಾರತ ಟೆಸ್ಟ್ ಸರಣಿ ಹೀನಾಯವಾಗಿ ಸೋತಾಗ ಭಾರತ ತಂಡದ ಕೋಚ್ ಅನ್ನು ಬದಲಾಯಿಸಬೇಕು ಎನ್ನುವ ಕೂಗು ಬಲವಾಗಿ ಕೇಳಿ ಬಂದಿತ್ತು. ಇದೀಗ ಅದೇ ಸ್ಥಿತಿ ಪಾಕಿಸ್ತಾನ ತಂಡದ್ದು ಹೌದು ಪಾಕಿಸ್ತಾನ ತಂಡದಲ್ಲಿ ಕೋಚ್ ಬದಲಾವಣೆ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಲಭಿಸಿದೆ.
ಆದ್ರೆ ಪಾಕಿಸ್ತಾನದ ತಂಡ ಮಾಜಿ ಕ್ರಿಕೆಟರ್ ಗಳ್ಯಾರೂ ಕೋಚ್ ಆಗ್ತಿಲ್ಲವಂತೆ, ಭಾರತ ತಂಡದ ಮಾಜಿ ಕ್ರಿಕೆಟರ್ ಯುವರಾಜ್ ಸಿಂಗ್ ಅವರ ತಂದೆ ಭಾರತ ತಂಡದ ಮಾಜಿ ವೇಗಿ ಯೋಗರಾಜ್ ಸಿಂಗ್ ಅವರ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಅದರಲ್ಲಿ ಅವರು ತಮ್ಮನ್ನು ಪಾಕಿಸ್ತಾನದ ಕೋಚ್ ಆಗಿ ನೇಮಿಸಿದರೆ, ಈ ತಂಡದ ಸ್ಥಿತಿ ಮತ್ತು ದಿಕ್ಕನ್ನು ಬದಲಾಯಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ. ಈ ಕುರಿತು ಅವರು ಹೇಳಿಕೆ ನೀಡಿದ್ದು ಭಾರತ-ಪಾಕಿಸ್ತಾನ ಸೋದರರಂತೆ. ಕ್ರೀಡೆಯಲ್ಲಿ ತಪ್ಪಿಲ್ಲ, ನಾನು ಪಾಕಿಸ್ತಾನ ತಂಡವನ್ನು ನನಗೆ ಒಂದು ವರ್ಷ ಕೊಟ್ಟರೂ ಸಾಕು ಆ ತಂಡವನ್ನು ವಿಶ್ವಮಟ್ಟದಲ್ಲಿ ಬೆಳೆಸುತ್ತೇನೆ. ಒಂದಲ್ಲ ಒಂದು ದಿನ ಭಾರತ-ಪಾಕಿಸ್ತಾನ ಮತ್ತೆ ಒಂದಾಗಬಹುದು.ಅದು ಕ್ರೀಡೆಯ ಮೂಲಕವೂ ಆಗಬಹುದಲ್ವಾ ಎನ್ನುವ ಹೇಳಿಕೆ ನೀಡಿದ್ದಾರೆ. ಭಾರತದ ಯಶಸ್ವಿ ಕ್ರಿಕೆಟ್ ಆಟಗಾರರಲ್ಲಿ ಯೋಗರಾಜ್ ಸಿಂಗ್ ಕೂಡ ಒಬ್ಬರಾಗಿದ್ದು ಅವರ ಹೇಳಿಕೆ ಮುಂದಿನ ದಿನಗಳಲ್ಲಿ ಯಾವ ರೀತಿ ತಿರುವು ಪಡೆದುಕೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.












