ಉಡುಪಿ:ಕೆ.ಎಸ್.ಆರ್.ಟಿ.ಸಿ ನಿಗಮವು ವಿದ್ಯಾರ್ಥಿ ಸ್ನೇಹಿ ಸಾರಿಗೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು: ಡಾ. ತಿಪ್ಪೇಸ್ವಾಮಿ

ಉಡುಪಿ: ಮಕ್ಕಳಿಗೆ ಶಿಕ್ಷಣ ಮೂಲಭೂತ ಹಕ್ಕು. ಕೇವಲ ಹಕ್ಕುಗಳನ್ನು ನೀಡಿದರೆ ಸಾಲದು, ಅದನ್ನು ಪಡೆಯಲು ಅಗತ್ಯವಾದ ಪೂರಕ ವ್ಯವಸ್ಥೆಗಳನ್ನು ಕಲ್ಪಿಸಿದಾಗ ಮಾತ್ರ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಶಿಕ್ಷಣವನ್ನು ಪಡೆದುಕೊಳ್ಳಲು ಸಾರಿಗೆ ವ್ಯವಸ್ಥೆ ಬಹುಮುಖ್ಯ ಪಾತ್ರವಹಿಸುತ್ತದೆ. ಆದರೆ ಇತ್ತೀಚೆಗೆ ಸಾರಿಗೆ ಸಂಬಂಧಿತ ಸಮಸ್ಯೆಗಳನ್ನು ಮಕ್ಕಳು ಎದುರಿಸುತ್ತಿದ್ದು ಈ ಬಗ್ಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ವಿದ್ಯಾರ್ಥಿ ಸ್ನೇಹಿ ಸಾರಿಗೆಗೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಡಾ. […]

ಉಡುಪಿ:ಹೊಂಬೆಳಕು ಕ್ರೀಡಾ ಹಾಗೂ ಸಾಂಸ್ಕೃತಿಕ ಉತ್ಸವದಲ್ಲಿ ಸಾಲಿಗ್ರಾಮ ಪ.ಪಂ.ಗೆ ನಾಲ್ಕು ಬಹುಮಾನ

ಉಡುಪಿ: ಮಂಗಳೂರಿನ ಅಡ್ಯಾರು ಸಹ್ಯಾದ್ರಿ ಕ್ರೀಡಾಂಗಣದಲ್ಲಿ ನಡೆದ ಪಂಚಾಯತ್ ರಾಜ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಹಾಗೂ ಸಿಬ್ಬಂದಿಗಳ ಕ್ರೀಡಾಕೂಟದಲ್ಲಿ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಮಹಿಳೆಯರ ವಿಭಾಗವು ಜಾನಪದ ನೃತ್ಯದಲ್ಲಿ ದ್ವಿತೀಯ ಸ್ಥಾನ, ಮಹಿಳೆಯರ ಹಗ್ಗ ಜಗ್ಗಾಟದಲ್ಲಿ ದ್ವಿತೀಯ ಸ್ಥಾನ, ಪುರುಷರ ಹಗ್ಗ ಜಗ್ಗಾಟದಲ್ಲಿ ತೃತೀಯ ಸ್ಥಾನ ಹಾಗೂ ಪಥಸಂಚಲನದಲ್ಲಿ 5 ನೇ ಸ್ಥಾನ ಸೇರಿದಂತೆ ಒಟ್ಟು 4 ಬಹುಮಾನವನ್ನು ಗೆದ್ದು, ಪಾರಿತೋಷಕ, ಪ್ರಮಾಣಪತ್ರ ಹಾಗೂ ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿತು. ಪಥ ಸಂಚಲನದಲ್ಲಿ ಬ್ರಹ್ಮಾವರ ತಾಲೂಕು […]

ಉಡುಪಿ: ವೈದ್ಯಾಧಿಕಾರಿ ಹುದ್ದೆ : ಅರ್ಜಿ ಆಹ್ವಾನ

ಉಡುಪಿ: ಆರೋಗ್ಯ ಇಲಾಖೆಯ ವತಿಯಿಂದ ಜಿಲ್ಲೆಯ ಕಾರ್ಕಳ ಸಾರ್ವಜನಿಕ ಆಸ್ಪತ್ರೆಯಲ್ಲಿ ಖಾಲಿ ಇರುವ ತುರ್ತು ಚಿಕಿತ್ಸಾ ವೈದ್ಯಾಧಿಕಾರಿ-1 ಹುದ್ದೆ, ಬೈಂದೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಖಾಲಿ ಇರುವ ಹಿರಿಯ ವೈದ್ಯಾಧಿಕಾರಿ-1 ಹುದ್ದೆ ಹಾಗೂ ಮೂಡುಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಲಿ ಇರುವ ಸಾಮಾನ್ಯ ಕರ್ತವ್ಯದ ವೈದ್ಯಾಧಿಕಾರಿ-1 ಹುದ್ದೆಯನ್ನು ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಲು ಎಂ.ಬಿ.ಬಿ.ಎಸ್ ವಿದ್ಯಾರ್ಹತೆ ಹೊಂದಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ […]

ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ, ಕಾಲಭೈರವ ಸ್ವಾಮಿ ದೇವಸ್ಥಾನ: ನಾಳೆ (ಫೆ.26) ಸಹಸ್ರ ಬಿಲ್ವಾರ್ಚನೆ, ಜಾಗರಣೆ ಕಾರ್ಯಕ್ರಮ

ಉಡುಪಿ: ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ ಹಾಗೂ ಕಾಲಭೈರವ ಸ್ವಾಮಿ ದೇವಸ್ಥಾನದಲ್ಲಿ ಸಾಯಿ ಈಶ್ವರ್ ಗುರೂಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ನಾಳೆ (ಫೆ.26) ಸಹಸ್ರ ಬಿಲ್ವಾರ್ಚನೆ ಮತ್ತು ಜಾಗರಣೆ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 6.30ಕ್ಕೆ ಶ್ರೀ ಸಾಯಿನಾಥ ದೇವರಿಗೆ ಅಭಿಷೇಕ, 7:30 ಕ್ಕೆ ಕಾಲಭೈರವ ಸ್ವಾಮಿಗೆ ಸಿಯಾಳ ಅಭಿಷೇಕ, 8ಕ್ಕೆ ಅಲಂಕಾರ ಪೂಜೆ, 9.30ಕ್ಕೆ ಸಹಸ್ರ ಬಿಲ್ವಾರ್ಚನೆ, ಮಧ್ಯಾಹ್ನ 12:30ಕ್ಕೆ ಮಧ್ಯಾಹ್ನ ಆರತಿ ಹಾಗೂ 1 ಗಂಟೆಗೆ ಅನ್ನಸಂತರ್ಪಣೆ ನೆರವೇರಲಿದೆ. […]

ಟೀಂ ಇಂಡಿಯಾದ ಈ ಮಾಜಿ ವೇಗಿ ಪಾಕಿಸ್ತಾನ ತಂಡಕ್ಕೆ ಕೋಚ್ ಆಗ್ತಾರಾ? ವೈರಲ್ಲಾಯ್ತು ವಿಡಿಯೋ

ಚಾಂಪಿಯನ್ಸ್ ಟ್ರೋಫಿಯ ಆತಿಥ್ಯ ವಹಿಸಿಕೊಂಡು ಪಾಕಿಸ್ತಾನ ತಂಡ ಮುಗ್ಗರಿಸಿದ ಬೆನ್ನಲ್ಲೇ ಎಲ್ಲೆಡೆಯೂ ಪಾಕಿಸ್ತಾನ ತಂಡದ ಕುರಿತು ಚರ್ಚೆಯಾಗುತ್ತಿದೆ. ಭಾರತ ತಂಡ ಪಾಕ್ ಅನ್ನು ಮಣಿಸಿದ್ದು ಒಳ್ಳೆಯ ಕಾರಣಕ್ಕಾಗಿ ಸುದ್ದಿಯಲ್ಲಿದೆ. ಕೆಲವು ಸಮಯದ ಹಿಂದೆ ಭಾರತ ಟೆಸ್ಟ್ ಸರಣಿ ಹೀನಾಯವಾಗಿ ಸೋತಾಗ ಭಾರತ ತಂಡದ ಕೋಚ್ ಅನ್ನು ಬದಲಾಯಿಸಬೇಕು ಎನ್ನುವ ಕೂಗು ಬಲವಾಗಿ ಕೇಳಿ ಬಂದಿತ್ತು. ಇದೀಗ ಅದೇ ಸ್ಥಿತಿ ಪಾಕಿಸ್ತಾನ ತಂಡದ್ದು ಹೌದು ಪಾಕಿಸ್ತಾನ ತಂಡದಲ್ಲಿ ಕೋಚ್ ಬದಲಾವಣೆ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಲಭಿಸಿದೆ. ಆದ್ರೆ  ಪಾಕಿಸ್ತಾನದ […]