ಬನ್ನಂಜೆ ಮಹಾಲಿಗೇಶ್ವರ ದೇವಸ್ಥಾನದಲ್ಲಿ ಯೋಗ ಸತ್ಸಂಗ ಕಾರ್ಯಕ್ರಮ

ಉಡುಪಿ: ಬೆಂಗಳೂರು ಮಹರ್ಷಿ ರಾಮದಾಸ್ ಆಶ್ರಮ ಶ್ರೀಧರ್ಮಶಾಸ್ತ್ರಗಿರಿ ಶ್ರೀ ಶಕ್ತಿ ಶಾಂತಾನಂದ ಸ್ವಾಮಿಗಳು ಆದಿತ್ಯವಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು.

ಶ್ರೀಪಾದರನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು.

ಶ್ರೀಗಳು ಶ್ರೀದೇವರ ದರ್ಶನ ಮಾಡಿ ಆರತಿ ಬೆಳಗಿಸಿ ಬಳಿಕ ಸಭಾಂಗಣಕ್ಕೆ ಆಗಮಿಸಿ ವಿವೇಕಾನಂದ ಯೋಗ ವಿಜ್ಞಾನ ಕೇಂದ್ರ ಬನ್ನಂಜೆ ಉಡುಪಿ ವತಿಯಿಂದ ಆಯೋಜಿಸಿದ್ದ ಯೋಗ ಸತ್ಸಂಗವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಸಂಸ್ಥೆಯ ವತಿಯಿಂದ ಶ್ರೀಪಾದರನ್ನು ಫಲಪುಷ್ಪ ನೀಡಿ ಗೌರವಿಸಲಾಯಿತು.

ಶ್ರೀಗಳು ಮಾತನಾಡಿ, ನಿತ್ಯ ನಿರಂತರ ಯೋಗ ಸತ್ಸಂಗದಿಂದ ಉತ್ತಮ ಅರೋಗ್ಯ, ಉಲ್ಲಾಸ ಭರಿತ ಜೀವನ ನಡೆಸಲು ಸಾಧ್ಯ, ಉತ್ತಮ ಸಮಾಜ ನಿರ್ಮಾಣಕ್ಕೂ ಯೋಗ ಸಹಕಾರಿಯಾಗಿದೆ ಶುಭ ಹಾರೈಸಿದರು.

ಯೋಗ ಶಿಕ್ಷಕ ರಾಜೇಶ್ ಶೆಟ್ಟಿ ಯೋಗಾಸನದ ಭಂಗಿಗಳನ್ನು ಮಾಡಿ ಅದರ ಪ್ರಯೋಜನ ಸಭೆಗೆ ತಿಳಿಸಿದರು. ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರೀಶ್ ರಾಮ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಕೊಡವೂರು ವಾರ್ಡನ ನಗರಸಭಾ ಸದಸ್ಯ ವಿಜಯ ಕೊಡವೂರು, ಶ್ರೀ ಅಯ್ಯಪ್ಪ ಸ್ವಾಮೀ ಸೇವಾ ಸಮಿತಿಯ ಜಿಲ್ಲಾ ಅಧ್ಯಕ್ಷ ರಾಧಾ ಕೃಷ್ಣ ಮೆಂಡನ್ , ಯೋಗ ಶಿಕ್ಷಕರಾದ ಪಿ ವಿ ಭಟ್, ಆನಂದ ಶೆಟ್ಟಿ ಕೊಡವೂರು, ಪುತ್ತೂರು ಯೋಗ ಕೇಂದ್ರದ ಶಿಕ್ಷಕಿ ಸುನೀತಾ ಹಾಗೂ ನೂರಾರು ಯೋಗ ಪಟುಗಳು ಉಪಸ್ಥಿತರಿದ್ದರು. ಯೋಗ ಶಿಕ್ಷಕ ಸತೀಶ್ ಕುಂದರ್ ಸ್ವಾಗತಿಸಿದರು, ಸಿದ್ದರಾಜು ನಿರೂಪಿಸಿ ವಂದಿಸಿದರು.