ಉಡುಪಿ: ಟ್ಯಾಂಕರ್ ಸ್ಕೂಟರ್ ನಡುವೆ ಅಪಘಾತ – ಸಿಟಿ ಬಸ್ ಚಾಲಕ ಮೃತ್ಯು

ಉಡುಪಿ: ನೀರಿನ ಟ್ಯಾಂಕರ್ ವೊಂದು ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟ ಘಟನೆ ಉಡುಪಿ ದೊಡ್ಡಣಗುಡ್ಡೆ ಎಂಬಲ್ಲಿ ಇಂದು ಸಂಜೆ ನಡೆದಿದೆ. ಮೃತರನ್ನು ಎಪಿಎಂ ಸಿಟಿ ಬಸ್ ಚಾಲಕ ಮಂಜುನಾಥ್ (36) ಎಂದು ಗುರುತಿಸಲಾಗಿದೆ. ಇವರು ಇಂದು ಸಂಜೆ ತಮ್ಮ ಸ್ಕೂಟರ್ ನಲ್ಲಿ ಬಾಳಿಗ ಹಾಸ್ಪಿಟಲ್ ದೊಡ್ಡಣಗುಡ್ಡೆಯಿಂದ ಪೆರಂಪಳ್ಳಿಯ ತಮ್ಮ ಬಾಡಿಗೆ ಮನೆಗೆ ಹೋಗುತ್ತಿದ್ದರು. ಈ ವೇಳೆ ನೀರಿನ ಟ್ಯಾಂಕರ್ ವೊಂದು ಡಿಕ್ಕಿ ಹೊಡೆದಿದ್ದು, ಇದರ ಪರಿಣಾಮ ಮಂಜುನಾಥ್ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆಸ್ಪತ್ರೆಗೆ […]

ಹೆಬ್ರಿ: ವಿದ್ಯಾರ್ಥಿ ನಾಪತ್ತೆ

ಹೆಬ್ರಿ: ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿ ಕೆಲಸದ ಹುಡುಕಾಟದಲ್ಲಿದ್ದ ಹೆಬ್ರಿಯ ಆಕಾಶ ಎಸ್.(26) ಎಂಬವರು ಫೆ.10ರಂದು ಮನೆಯಿಂದ ಬೈಕಿನಲ್ಲಿ ಹೆಬ್ರಿ ಪೇಟೆ ಕಡೆಗೆ ಹೋದವರು ಈವರೆಗೆ ಮನೆಗೆ ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮಲ್ಪೆ ವಡಭಾಂಡ ಬಲರಾಮ ದೇವಸ್ಥಾನ ಪುನಃ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಲೋಕಾರ್ಪಣೆ 

ಮಲ್ಪೆ: ಇಲ್ಲಿನ ಇತಿಹಾಸ ಪ್ರಸಿದ್ದ ವಡಭಾಂಡ ಬಲರಾಮ ದೇವಸ್ಥಾನದ ಪುನಃ ಪ್ರತಿಷ್ಠೆ ಬಹ್ಮಕಲಶೋತ್ಸವದ ಅಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಫೆ.11 ರಂದು ದೇವಸ್ಥಾನದಲ್ಲಿ ನಡೆಯಿತು. ಶಾಸಕ ಯಶ್‌ಪಾಲ್ ಸುವರ್ಣ ಅವರು ಅಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಗ್ರಾಮದ ಭಕ್ತರ ಒಮ್ಮತಡಾ ಸಹಕಾರದಿಂದ ಎಲ್ಲ ಕಾರ್ಯಕ್ರಮಗಳು ಯಶಸ್ವಿಯಾಗಿ ಸಾಗಲಿ ಎಂದರು. ಬ್ರಹ್ಮಕಲಶೋತ್ಸವ ಸಮಿತಿಯ ಸಮಿತಿಯ ಅಧ್ಯಕ್ಷ ಸಾಧು ಸಾಲ್ಯಾನ್‌, ಗೌರವಾಧ್ಯಕ್ಷ ಆನಂದ ಪಿ. ಸುವರ್ಣ, ಹರಿಯಪ್ಪ ಕೋಟ್ಯಾನ್, ಕಾರ್ಯಾಧ್ಯಕ್ಷ ನಾಗರಾಜ್ ಮೂಲಿಗಾರ್, ಪ್ರಧಾನಕಾರ್ಯದರ್ಶಿ ಪ್ರಕಾಶ್ ಜಿ. ಕೊಡವೂರು, ಕೋಶಾಧಿಕಾರಿ ಟಿ. […]

ಫೆಬ್ರವರಿ 14: ತ್ರಿಶಾ ಕ್ಲಾಸಸ್ ಸಿ.ಎ ಇಂಟರ್ಮೆಡಿಯೇಟ್ ಓರಿಯೆಂಟೇಷನ್ ಕಾರ್ಯಕ್ರಮ; ಕಾರ್ಮರ್ಸ್ ವಿದ್ಯಾರ್ಥಿಗಳಿಗೆ ಆನ್ ಲೈನ್ ಕ್ರ್ಯಾಶ್ ಕೋರ್ಸ್

ಕಟಪಾಡಿ: ಸಿ.ಎ ಪದವಿಯ ಎರಡನೆಯ ಹಂತವಾದ ಸಿ.ಎ ಇಂಟರ್ಮೆಡಿಯೇಟ್ ನ ಕಾರ್ಯವೈಖರಿ ಹಾಗೂ ಯೋಜನೆಯ ಕುರಿತಾದ ವಿವರಣೆಯ ಕಾರ್ಯಕ್ರಮವು ಫೆಬ್ರವರಿ 14, ಬುಧವಾರದಂದು ಮಧ್ಯಾಹ್ನ 1:30 ರಿಂದ ತ್ರಿಶಾ ವಿದ್ಯಾ ಕಾಲೇಜು ಕಟಪಾಡಿಯಲ್ಲಿ ನಡೆಯಲಿದ್ದು ಸಿ.ಎ ಇಂಟರ್ಮೆಡಿಯೇಟ್ ತರಬೇತಿಯ ಕುರಿತು ಮಾಹಿತಿ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳು ಹಾಜರಾಗಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಜೊತೆಗೆ ಫೆ.14 ರಿಂದ 20 ರವರೆಗೆ ದ್ವಿತೀಯ ಪಿಯುಸಿ ಕಾಮರ್ಸ್ ವಿದ್ಯಾರ್ಥಿಗಳಿಗೆ ಆನ್ ಲೈನ್ ಕ್ರ್ಯಾಶ್ ಕೋರ್ಸುಗಳು ನುರಿತ ತಜ್ಞರಿಂದ ಲಭ್ಯವಿದೆ. ಬೇಸಿಕ್ […]

ಉಡುಪಿ: ಪ್ರಸಿದ್ಧ ದೈವ ನರ್ತಕ ಸಾಧು ಪಾಣರ ನಿಧನ

ಉಡುಪಿ: ಉಡುಪಿ ಜಿಲ್ಲೆಯ ಪ್ರಸಿದ್ಧ ದೈವ ನರ್ತಕ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಜಾನಪದ ಕಲಾವಿದ ಸಾಧು ಪಾಣಾರ ಮಂಚಿಕೆರೆ ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನ ಹೊಂದಿದರು.