ಅಜೆಕಾರು: ಮುಂಬೈನ ಅಜೆಕಾರು ಕಲಾಭಿಮಾನಿ ಬಳಗ ವತಿಯಿಂದ ಅಜೆಕಾರು ಬಾಲಕೃಷ್ಣ ಶೆಟ್ಟಿ ಮತ್ತು ವಿಜಯ ಶೆಟ್ಟಿ ಅವರ ನೇತೃತ್ವದಲ್ಲಿ ಸಂಪಾ ಎಸ್. ಶೆಟ್ಟಿ ಅವರ ಐದನೇ ವರ್ಷದ ಸಂಸ್ಮರಣೆ ಮತ್ತು ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮ ಅಜೆಕಾರು ಶ್ರೀರಾಮ ಮಂದಿರದಲ್ಲಿ ಭಾನುವಾರ ನಡೆಯಿತು.
ಬಳಿಕ ನಡೆದ ‘ಶಲ್ಯ ಸಾರಥ್ಯ – ಕರ್ಣಾರ್ಜುನ’ ತಾಳಮದ್ದಲೆಯಲ್ಲಿ ಜಿಲ್ಲೆಯ ಪ್ರಸಿದ್ದ ಕಲಾವಿದರಾದ ಶಂಭು ಶರ್ಮ ವಿಟ್ಲ, ಭಾಸ್ಕರ ರೈ ಕುಕ್ಕುವಳ್ಳಿ, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಹರೀಶ್ ಬೊಳಂತಿಮೊಗರು, ಸದಾಶಿವ ಆಳ್ವ ತಲಪಾಡಿ ಮತ್ತು ಗಣೇಶ್ ಕುಂಜತ್ತೂರು ಅರ್ಥಧಾರಿಗಳಾಗಿದ್ದರು.
ದೇವಿಪ್ರಸಾದ್ ಆಳ್ವ ತಲಪಾಡಿ, ಧೀರಜ್ ರೈ ಸಂಪಾಜೆ, ಪ್ರಶಾಂತ್ ಶೆಟ್ಟಿ ವಗೆನಾಡು, ಮಯೂರ್ ನಾಯಗ ಮಾಡೂರು ಮತ್ತು ರಮೇಶ್ ಕಜೆ ಹಿಮ್ಮೇಳದಲ್ಲಿ ಭಾಗವಹಿಸಿದರು.