ನಿಮ್ಮ ಕಣ್ಣುಗಳು ಸುಂದರ ಮತ್ತು ಆರೋಗ್ಯವಾಗಿರಬೇಕೆಂದರೆ ಹೆಚ್ಚೇನು ಕಷ್ಟ ಪಡುವ ಅಗತ್ಯವಿಲ್ಲ. ಉತ್ತಮ ಆಹಾರ ಕ್ರಮ, ಒಳ್ಳೆ ನಿದ್ದೆ ಮತ್ತು ಕೆಲವು ನೈಸರ್ಗಿಕ ವಿಧಾನ ಅನುಸರಿಸಿದರೆ ಸಾಕು, ನಿಮ್ಮ ಕಣ್ಣನ್ನು ಹಲವು ಸೋಂಕುಗಳಿಂದ ದೂರವಿರಿಸಿ ಕಣ್ಣಿನ ದೃಷ್ಟಿ ದೀರ್ಘಕಾಲ ಚೈತನ್ಯವಾಗಿರುವಂತೆ ನೋಡಿಕೊಳ್ಳಬಹುದು.
ಆರೋಗ್ಯಕರ ಕಣ್ಣುಗಳಿಗೆ ಯಾವ ಆಹಾರ ಸೇವಿಸಬೇಕೆಂದು ತಿಳಿದುಕೊಳ್ಳೋಣ:
ಬಾದಾಮಿ: ಬಾದಾಮಿ (ನೀರಿನಲ್ಲಿ ಸೋಕಿಸಿ ಸಿಪ್ಪೆ ತೆಗೆದದ್ದು), ಕರ್ಜೂರ, ಸೊಯಾ ಬೀನ್, ಹಸಿರು ಬಟಾಣಿಯಲ್ಲಿ ಹೇರಳವಾಗಿರುವ ವಿಟಮಿನ್ ಎ ಕಣ್ಣಿನ ಪೋಷಣೆಗೆ ಅಗತ್ಯವಾದ ಪೋಷಕಾಂಶ ನೀಡುತ್ತದೆ.
ಪಾಲಾಕ್ : ಹಸಿರು ಸೊಪ್ಪುಗಳಾದ ಪಾಲಾಕ್ ಸೊಪ್ಪು, ಹೂಕೋಸು, ಟರ್ನಿಪ್ ಮುಂತಾದವು ಕೆಂಪು ರಕ್ತ ಕಣಗಳನ್ನು ಹೆಚ್ಚಿಸಿ ಕಣ್ಣಿನ ದೃಷ್ಠಿ ಚುರುಕುಗೊಳ್ಳುವಂತೆ ಮಾಡುತ್ತದೆ. ಈ ಸೊಪ್ಪುಗಳು ನಿಮ್ಮ ಆಹಾರದಲ್ಲಿದ್ದರೆ ನೀವು ಕಣ್ಣಿನ ಆರೋಗ್ಯದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ.
ಹಾಲು: ಡೈರಿ ಉತ್ಪನ್ನಗಳಾದ ಹಾಲು, ಬೆಣ್ಣೆ, ಚೀಸ್ ಮುಂತಾದುವು ಕಣ್ಣಿನ ಆರೋಗ್ಯದ ಆಹಾರದ ಲಿಸ್ಟ್ ನಲ್ಲಿರಲಿ. ಕಣ್ಣಿನ ದಣಿವನ್ನು ನೀಗಿಸಿ ರಿಲ್ಯಾಕ್ಸ್ ಆಗುವಂತೆ ಮಾಡುತ್ತದೆ. ಅಷ್ಟೇ ಅಲ್ಲ ಕಣ್ಣಿಗೆ ಅಗತ್ಯವಾದ ಪೋಷಕಾಂಶವನ್ನೂ ಹೆಚ್ಚಾಗಿ ಒದಗಿಸುತ್ತದೆ.