2019 ವಿಶ್ವಕಪ್: ನ್ಯೂಜಿಲೆಂಡ್- ಇಂಗ್ಲೆಂಡ್ ಫೈನಲ್ ಕದನ, ವಿಶ್ವಕಪ್ ನಿಂದ ಹೊರಬಿದ್ದ ಬಲಿಷ್ಠ ತಂಡಗಳು

ಬರ್ಮಿಂಗ್ಹ್ಯಾಂ: 2019ರ ವಿಶ್ವಕಪ್ ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಅಚ್ಚರಿಯ ಫಲಿತಾಂಶದಿಂದ ಹೊರಬಿದ್ದ ಬೆನ್ನಲ್ಲೇ ಗುರುವಾರದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ದ ಬಲಿಷ್ಠ ಆಸ್ಟ್ರೇಲಿಯಾ ತಂಡವೂ ಹೊರಬಿದ್ದಿದೆ.
ಆ ಮೂಲಕ ಲೀಗ್ ಹಂತದ ಪಂದ್ಯಗಳಲ್ಲಿ ಅದ್ಬುತ ಪ್ರದರ್ಶನ ನೀಡಿ ಪಾಯಿಂಟ್ ಟೇಬಲ್ ನಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸಿದ್ದ, 2011ರ ವಿಶ್ವಕಪ್ ಚ್ಯಾಂಪಿಯನ್ ಭಾರತ ಹಾಗೂ 2015 ಚ್ಯಾಂಪಿಯನ್ ಆಸ್ಟ್ರೇಲಿಯಾ ತಂಡಗಳ ವಿಶ್ವಕಪ್ ಆಸೆ ಕಮರಿಹೋಗಿದೆ.
ಹೀಗಾಗಿ ಲೀಗ್ ಹಂತದಲ್ಲಿ‌ ಸಾಧಾರಣ ಪ್ರದರ್ಶನ ನೀಡಿದ್ದ ನ್ಯೂಜಿಲೆಂಡ್ ಈ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅತಿಥೇಯ ಇಂಗ್ಲೆಂಡ್ ತಂಡವನ್ನು ಜು. 14ರಂದು ಎದುರಿಸಲಿದೆ. ಇಂಗ್ಲೆಂಡ್ ತಂಡ ಲೀಗ್ ಹಂತದಲ್ಲಿ ಮೂರು ಪಂದ್ಯಗಳನ್ನು ಸೋತಿದ್ದರೂ ಆ ತಂಡವನ್ನು ಕಡೆಗಣನೆ ಮಾಡುವಂತಿಲ್ಲ.‌ ಈ ಬಾರಿಯ ವಿಶ್ವಕಪ್ ಟಾಪ್ ಫೇವರಿಟ್ ತಂಡ ಇದೇ ಇಂಗ್ಲೆಂಡ್.
ಫೈನಲ್ ಪಂದ್ಯದಲ್ಲಿಯೂ ನ್ಯೂಜಿಲೆಂಡ್ ಗಿಂತ ಇಂಗ್ಲೆಂಡ್ ತಂಡವೇ ಬಲಿಷ್ಠ ವಾಗಿದೆ. ನ್ಯೂಜಿಲೆಂಡ್ ಈ ವಿಶ್ವಕಪ್ ನ ಸಾಧಾರಣ ತಂಡವಾಗಿದ್ದು, ಫೈನಲ್ ಪ್ರವೇಶಿಸಿದ್ದು ಕೂಡ ಅನೇಕ ಕ್ರಿಕೆಟ್ ದಿಗ್ಗಜರ ಲೆಕ್ಕಾಚಾರ ವನ್ನು‌ ತಲೆಕೆಳಗಾಗಿಸಿದೆ.