ಮಂಗಳೂರು: ಕೊಡಿಯಾಲ್ ಗುತ್ತಿನಲ್ಲಿ ನ. 19 ರಿಂದ 25 ರವರೆಗೆ ವಿಶ್ವ ಪರಂಪರೆಯ ಸಪ್ತಾಹ

ಮಂಗಳೂರು: ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್ (INTACH) ನ ಮಂಗಳೂರು ವಿಭಾಗವು 2023 ರ ನವೆಂಬರ್ 19 ರಿಂದ ನವೆಂಬರ್ 25 ರವರೆಗೆ ವಿಶ್ವ ಪರಂಪರೆಯ ಸಪ್ತಾಹವನ್ನು ಮಂಗಳೂರಿನ ಕೊಡಿಯಾಲ್ ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ಆಚರಿಸಲಿದೆ.

ನವೆಂಬರ್ 19 ರಂದು ಭಾನುವಾರ ಬೆಳಿಗ್ಗೆ 10:30 ಕ್ಕೆ ಮಂಗಳೂರಿನ ಜಿಲ್ಲಾ ಕಾರಾಗೃಹದ ಅಧೀಕ್ಷಕ ಬಿ.ಟಿ. ಓಬಳೇಶಪ್ಪ ಅವರು “ಕೆಡಹುವಿಕೆ ತೀರ್ಪಿನಿಂದ ಬದುಕುಳಿದ ಉಡುಪಿ ಉಪ ಕಾರಾಗೃಹ” ಎಂಬ ವಸ್ತುಪ್ರದರ್ಶನವನ್ನು ಉದ್ಘಾಟಿಸುವುದರೊಂದಿಗೆ ಒಂದು ವಾರದ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುವುದು.

ಜನಾರ್ದನ ಹಾವಂಜೆ ಪ್ರಾಸ್ತಾವಿಕವಾಗಿ ಮಾತನಾಡಲಿದ್ದು, ಶರ್ವಾಣಿ ಭಟ್ ಉಡುಪಿ ಉಪ ಕಾರಾಗೃಹದ ಕುರಿತು ನಿರೂಪಣೆ ಮಾಡಲಿದ್ದಾರೆ. ಪ್ರದರ್ಶನವು ನವೆಂಬರ್ 19 ರಿಂದ ನವೆಂಬರ್ 25 ರವರೆಗೆ, 11:00 ರಿಂದ ಮಧ್ಯಾಹ್ನ 1:00 ರವರೆಗೆ ಮತ್ತು ಸಂಜೆ 4:00 ರಿಂಡ 7:00 ರವರೆಗೆ ನಡೆಯುತ್ತದೆ. ಪ್ರತಿದಿನ ಸಂಜೆ 5:30 ರ ಬಳಿಕ ವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮ ನಡೆಯಲಿದೆ.