ಮಣಿಪಾಲ: ಶ್ರೀ ಶಾರದಾಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ಪೂರ್ವ ಪ್ರಾಥಮಿಕ/ಮಾಂಟೆಸ್ಸೆರಿ ಶಿಕ್ಷಕಿಯರಿಗೆ “ನಾರಿ ಶೃಂಗ” ಎಂಬ ಶೀರ್ಷಿಕೆಯ ಆಡಿಯಲ್ಲಿ ಮೂರು ದಿವಸಗಳ ಕಾರ್ಯಾಗಾರವನ್ನು ಆಸರೆ ಟ್ರಸ್ಟನ ಅಧ್ಯಕ್ಷ ಜೈವಿಠಲ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಮಕ್ಕಳ ಪ್ರತಿಭೆಯನ್ನು ಗುರುತಿಸುವಲ್ಲಿ ಹಾಗೂ ವಿಶೇಷ ಚೇತನ ಮಕ್ಕಳ ಹೆತ್ತವರಿಗೆ ಉತ್ತಮ ಮಾರ್ಗದರ್ಶನ ನೀಡುವಲ್ಲಿ ಶಿಕ್ಷಕಿಯರ ಪಾತ್ರವನ್ನು ತಿಳಿಸಿದರು.
ಮಣಿಪಾಲ ಠಾಣೆಯ ಪೊಲೀಸ್ ನಿರೀಕ್ಷಕ ದೇವರಾಜ್ ಟಿ.ವಿ. ಮಾತನಾಡಿ, ಇತ್ತೀಚೀನ ದಿನಗಳಲ್ಲಿ ಸೈಬರ್ ಕ್ರೈಂ ಹೆಚ್ಚುತ್ತಿದ್ದು, ಜನರು ಹೇಗೆ ಮೋಸ ಹೋಗುತ್ತಾರೆ ಎಂದು ತಿಳಿಸಿ ಮುನ್ನೆಚ್ಚರಿಕೆಯ ಬಗ್ಗೆ ಜಾಗೃತಿಯನ್ನು ಮೂಡಿಸಿದರು.
ಪ್ರಕಾಶ್ ನಾಯಕ್ ಯೋಗ, ಪ್ರಾಣಾಯಾಮ ಹಾಗೂ ಆಹಾರ ಪದ್ಧತಿಯ ಬಗ್ಗೆ ಮಾಹಿತಿ ಹಂಚಿಕೊಂಡರು.
ಎಂ.ಸಿ.ಹೆಚ್.ಪಿ. ಮಣಿಪಾಲದ ಅಸಿಸ್ಟೆಂಟ್ ಪ್ರೊಪೆಸರ್ ಕು.ನೀಲಾಕ್ಷಿ ಕಲಿಕಾ ಅಸಮರ್ಥತೆಯ ವಿಧಗಳು, ಕಾರಣಗಳು ಹಾಗೂ ಲಕ್ಷಣಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.
ಎರಡನೆಯ ದಿನ ಜಿ.ಎಮ್.ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ನ ದೈಹಿಕ ಶಿಕ್ಷಕಿ ಜಯಶ್ರೀ ನಾಯಕ್ ಮಕ್ಕಳಿಗೆ ದೈಹಿಕ ಶಿಕ್ಷಣದ ಅಗತ್ಯತೆಯ ಬಗ್ಗೆ ಹಾಗೂ ತರಬೇತಿ ಬಗ್ಗೆ ತಿಳಿಸಿದರು.
ಆಸ್ಕ್ ಹಬ್ನ ಸಹ-ಸಂಸ್ಥಾಪಕ ರಾಜೇಶ್ ಶೆಣೈ ‘ಟೀಚರ್ಸ್ ಎನ್ರಿಚ್ ಮೆಂಟ್ ಪ್ರೋಗ್ರಾಮ್’ಎಂಬ ವಿಷಯದ ಬಗ್ಗೆ ಮಾತನಾಡಿದರು.
ವಿದ್ಯಾರತ್ನ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸ್ ನ ಪ್ರಾಂಶುಪಾಲೆ ಡಾ.ಇಂದಿರಾ ಶ್ಯಾನ್ಭಾಗ್ ಮಹಿಳೆಯರ ಆರೋಗ್ಯದ ಬಗ್ಗೆ ಹಾಗೂ ಮುನ್ನೆಚ್ಚರಿಕೆಯ ಸೂಕ್ತ ಮಾಹಿತಿ ನೀಡಿದರು.
ಮೂರನೆಯ ದಿನದ ಮಣಿಪಾಲದ ಎಡ್ವಕೇಟ್ ವಿಜಯಲಕ್ಷ್ಮಿ ಮಾತನಾಡಿ, ಕಾರ್ಯಸ್ಥಳದಲ್ಲಿ ಲೈಂಗಿಕ ಕಿರುಕುಳದ ಬಗ್ಗೆ ಹಾಗೂ ಕಾನೂನುಗಳ ಸೂಕ್ತ ಮಾಹಿತಿ ನೀಡಿದರು.
ಎಲ್.ಐ.ಸಿ.ಯ ನಿವೃತ್ತಅಧಿಕಾರಿ ಡಾ.ಎನ್.ವಿ. ಕಾಮತ್ ಕೌಟುಂಬಿಕ ಹಿಂಸೆ ಹಾಗೂ ಕಾನೂನುಗಳ ಅರಿವು ಮೂಡಿಸಿದರು.
ಮುನಿಯಾಲು ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಉಪನ್ಯಾಸಕ ವಿದ್ವಾನ್ ಹರಿಪ್ರಸಾದ್ ಭಟ್ ಸಂಸ್ಕಾರ ಹಾಗೂ ಸಂಸ್ಕೃತಿಯ ಬಗ್ಗೆ ಅತೀ ಸೂಕ್ಷ್ಮವಾಗಿ ಮಾತನಾಡಿ, ಶಿಸ್ತು ಜೀವನದಲ್ಲಿಅತೀ ಮುಖ್ಯ ಹಾಗೂ ಈ ವಿಷಯದಲ್ಲಿ ಸಮಾಜಕ್ಕೆ ಶಿಕ್ಷಕಿಯರ ಕೊಡುಗೆಯನ್ನು ವಿವರಿಸಿದರು.
ಅಧ್ಯಕ್ಷೆ ಚಂದ್ರಕಲಾರವರು ಸ್ವಾಗತಿಸಿ, ಪ್ರಾಂಶುಪಾಲೆ ಸುನೀತಾ ಸ್ಮರಣಿಕೆ ನೀಡಿ ಗೌರವಿಸಿದರು. ದಿವ್ಯಾಕೋಟ್ಯಾನ್ ವಂದಿಸಿದರು. ಸಂಸ್ಥೆಯಲ್ಲಿ ಪ್ರಶಿಕ್ಷಣ ಪಡೆಯುತ್ತಿರುವ ಎಲ್ಲಾ ವಿದ್ಯಾರ್ಥಿನಿಯರು ಒಗ್ಗೂಡಿ ನಿರೂಪಿದರು.