ನವದೆಹಲಿ: ವಾಟ್ಸ್ಆಯಪ್ನಲ್ಲಿ ಜನ ತಾವು ಫಾಲೋ ಮಾಡುವ ಜನರು, ಸಂಸ್ಥೆಗಳು ಮತ್ತು ತಂಡಗಳಿಂದ ನಿರಂತರವಾಗಿ ಅಪ್ಡೇಟ್ಗಳನ್ನು ಪಡೆಯಲು ಚಾನೆಲ್ ಫೀಚರ್ ಹೊಸ ಮಾರ್ಗವಾಗಿದೆ.ಇತ್ತೀಚೆಗೆ ಆರಂಭಿಸಲಾದ ವಾಟ್ಸ್ಆಯಪ್ ಚಾನೆಲ್ ಫೀಚರ್ ಮಾಸಿಕ 500 ಮಿಲಿಯನ್ ಬಳಕೆದಾರರನ್ನು ಮೀರಿದೆ ಎಂದು ಮೆಟಾ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಜೂಕರ್ಬರ್ಗ್ ಬುಧವಾರ ಘೋಷಿಸಿದರು.ಇತ್ತೀಚೆಗೆ ಜಾರಿಯಾದ ವಾಟ್ಸ್ಆಪ್ ಚಾನೆಲ್ 500 ಮಿಲಿಯನ್ಗೂ ಅಧಿಕ ಸಕ್ರಿಯ ಬಳಕೆದಾರರನ್ನು ಪಡೆದು ಕೊಂಡಿದೆ.
“ನಾವು ಚಾನೆಲ್ ಗಳಲ್ಲಿ ಸ್ಟಿಕ್ಕರ್ ಗಳನ್ನು ಪ್ರಾರಂಭಿಸಿದ್ದೇವೆ. ಬಳಕೆದಾರರು ತಾವು ಫಾಲೋ ಮಾಡುವ ಚಾನೆಲ್ ಗಳಿಂದ ಅಪ್ಡೇಟ್ಗಳನ್ನು ಪಡೆಯುವುದನ್ನು ಆನಂದಿಸುತ್ತಿದ್ದಾರೆ ಮತ್ತು ಅಡ್ಮಿನ್ಗಳು ತಮ್ಮ ಫಾಲೋವರ್ಸ್ಗಳೊಂದಿಗೆ ಹೊಸ ಸ್ವರೂಪದಲ್ಲಿ ಸಂಪರ್ಕ ಸಾಧಿಸುವ ಮಾರ್ಗವಾಗಿ ಚಾನೆಲ್ಗಳನ್ನು ಬಳಸುತ್ತಿದ್ದಾರೆ” ಎಂದು ವಾಟ್ಸ್ಆಯಪ್ ಹೇಳಿದೆ.
ವಾಯ್ಸ್ ಚಾಟ್ ವೈಶಿಷ್ಟ್ಯ: ವಾಟ್ಸ್ಆಯಪ್ ಅಧಿಕೃತವಾಗಿ ಹೊಸ ವಾಯ್ಸ್ ಚಾಟ್ ವೈಶಿಷ್ಟ್ಯ ಬಿಡುಗಡೆ ಮಾಡಿದೆ. ಇದು ಬಳಕೆದಾರರಿಗೆ ದೊಡ್ಡ ಗ್ರೂಪ್ಗಳೊಂದಿಗೆ ಹೆಚ್ಚು ತಡೆರಹಿತ ರೀತಿಯಲ್ಲಿ ಲೈವ್ ಸಂಭಾಷಣೆ ನಡೆಸಲು ಅನುವು ಮಾಡಿಕೊಡುತ್ತದೆ. ಧ್ವನಿ ಕರೆಗಳು ಮತ್ತು ಧ್ವನಿ ನೋಟ್ಸ್ಗಳಿಗಿಂತ ಭಿನ್ನವಾಗಿ, ಹೊಸ ವೈಶಿಷ್ಟ್ಯವು ವಾಯ್ಸ್ ಚಾಟ್ ಪ್ರಾರಂಭಿಸಿದಾಗ ಪ್ರತಿ ಗುಂಪಿನ ಸದಸ್ಯರನ್ನು ಪ್ರತ್ಯೇಕವಾಗಿ ರಿಂಗ್ ಮಾಡುವುದಿಲ್ಲ. ಬದಲಾಗಿ, ಬಳಕೆದಾರರು ಸೈಲೆಂಟ್ ನೋಟಿಫಿಕೇಶನ್ಗಳನ್ನು ಪಡೆಯುತ್ತಾರೆ ಮತ್ತು ಯಾವುದೇ ಸಮಯದಲ್ಲಿ ವಾಯ್ಸ್ ಚಾಟ್ಗೆ ಸೇರಲು ಆಯ್ಕೆ ಮಾಡಬಹುದು.
ವಾಟ್ಸ್ ಆಯಪ್ ಮುಂದಿನ ದಿನಗಳಲ್ಲಿ ಸ್ಟೋರೀಸ್ ಮತ್ತು ಚಾನೆಲ್ಗಳಲ್ಲಿ ಜಾಹೀರಾತು ತೋರಿಸಲು ಆರಂಭಿಸಲಿದೆ ಎಂದು ಕಳೆದ ವಾರ ಕಂಪನಿಯ ಮುಖ್ಯಸ್ಥ ವಿಲ್ ಕ್ಯಾಥ್ಕಾರ್ಟ್ ಹೇಳಿದ್ದಾರೆ. ಆದರೆ, ಜಾಹೀರಾತುಗಳು ಮೇನ್ ಚಾಟ್ನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಅವರು ತಿಳಿಸಿದ್ದಾರೆ.ವಾಟ್ಸ್ಆಯಪ್ನಲ್ಲಿ ಮತ್ತೆ ಏನು ಹೊಸ ಫೀಚರ್ಗಳು ಬರುತ್ತಿವೆ ಎಂಬುದನ್ನು ತಿಳಿಸಲು ಸಹ ವಾಟ್ಸ್ಆಯಪ್ ತನ್ನದೇ ಆದ ಚಾನೆಲ್ ಆರಂಭಿಸಿದೆ. ವಾಟ್ಸ್ಆಯಪ್ ಚಾನೆಲ್ಗಳು ಏಕಮುಖ ಸಂವಹನದ ಸಾಧನವಾಗಿದ್ದು, ಅಪ್ಲಿಕೇಶನ್ ಒಳಗಡೆ ಬಳಕೆದಾರರಿಗೆ ಹಾಗೂ ಅವರಿಗೆ ಮುಖ್ಯವಾದ ಜನ ಮತ್ತು ಸಂಸ್ಥೆಗಳಿಂದ ಅಪ್ಡೇಟ್ ಮಾಹಿತಿಗಳನ್ನು ಖಾಸಗಿಯಾಗಿ ಪಡೆಯಲು ಮಾರ್ಗವನ್ನು ಒದಗಿಸುತ್ತವೆ.ಚಾನೆಲ್ಗಳು ನಿಮ್ಮ ಖಾಸಗಿ ಚಾಟ್ಗಳಿಗಿಂತ ಬೇರೆಯಾಗಿದ್ದು, ನೀವು ಯಾರನ್ನು ಫಾಲೋ ಮಾಡುತ್ತೀರಿ ಎಂಬುದು ಇತರ ಫಾಲೋವರ್ಗಳಿಗೆ ಗೊತ್ತಾಗುವುದಿಲ್ಲ. “ಮೊದಲ 7 ವಾರಗಳಲ್ಲಿ ವಾಟ್ಸ್ಆಯಪ್ ಚಾನೆಲ್ಗಳಲ್ಲಿ 500 ಮಿಲಿಯನ್ ಮಾಸಿಕ ಸಕ್ರಿಯ ಬಳಕೆದಾರರು! ವಾಟ್ಸ್ಆಯಪ್ ಸಮುದಾಯವು ಚಾನೆಲ್ಗಳಲ್ಲಿ ಇಷ್ಟು ತೊಡಗಿಸಿಕೊಂಡಿರುವುದನ್ನು ನೋಡಲು ಸಂತೋಷವಾಗಿದೆ” ಎಂದು ಜುಕರ್ಬರ್ಗ್ ತಮ್ಮ ವಾಟ್ಸ್ಆಯಪ್ ಚಾನೆಲ್ನಲ್ಲಿಯೇ ಘೋಷಿಸಿದ್ದು ವಿಶಿಷ್ಟ