ಭಾರತಕ್ಕೂ ಎಂಟ್ರಿ ಕೊಟ್ಟಿತು ವಾಟ್ಸಪ್, ಇನ್ಸ್ಟಾಗ್ರಾಮ್, ಫೇಸ್ಬುಕ್‌ ‘ಪ್ಲಸ್’: ಕಾಸು ಕೊಟ್ರೆ ಮಾತ್ರ ಸಿಗುತ್ತೆ ಈ ವಿಶೇಷ ಸೇವೆ

ಹೊಸ ಫೀಚರ್‌ಗಳನ್ನು ಪಡೆಯಲು ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್ ಮೂಲಕ ತಮ್ಮ ಆಪ್‌ಗಳನ್ನು ಅಪ್‌ಡೇಟ್ ಮಾಡಿಕೊಳ್ಳಬೇಕಾಗಿದೆ.

ಪ್ಲಾನ್‌ಗಳ ಬೆಲೆ

  • ವಾಟ್ಸಪ್ ಪ್ಲಸ್: ತಿಂಗಳಿಗೆ 79 ರೂ. (ಒಂದು ತಿಂಗಳ ಉಚಿತ ಟ್ರಯಲ್; ಆರಂಭದಲ್ಲಿ ಐಒಎಸ್ ಬಳಕೆದಾರರಿಗೆ ಲಭ್ಯ)
  • ಇನ್ಸ್ಟಾಗ್ರಾಮ್ ಪ್ಲಸ್: ತಿಂಗಳಿಗೆ 99 ರೂ.
  • ಫೇಸ್ಬುಕ್ ಪ್ಲಸ್: ತಿಂಗಳಿಗೆ 99 ರೂ.

ವಾಟ್ಸಪ್ ಪ್ಲಸ್‌ನಲ್ಲಿ ಏನಿದೆ?
20 ಚಾಟ್‌ಗಳವರೆಗೆ ಪಿನ್ ಮಾಡುವ ಅವಕಾಶ, ಹೊಸ ಆ್ಯಪ್ ಐಕಾನ್‌ಗಳು ಹಾಗೂ ಬಣ್ಣಗಳ ಆಯ್ಕೆ, ಪ್ರೀಮಿಯಂ ಅನಿಮೇಟೆಡ್ ಸ್ಟಿಕ್ಕರ್‌ಗಳು, ಪ್ರತ್ಯೇಕ ಸಂಪರ್ಕಗಳಿಗೆ ಕಸ್ಟಮ್ ರಿಂಗ್‌ಟೋನ್ ಹಾಗೂ ನೋಟಿಫಿಕೇಶನ್ ಧ್ವನಿಗಳನ್ನು ಹೊಂದಿಸುವ ಸೌಲಭ್ಯ ಸೇರಿದಂತೆ ಹಲವು ಹೆಚ್ಚುವರಿ ಆಯ್ಕೆಗಳು ಲಭ್ಯವಾಗಲಿವೆ.

ಇನ್ಸ್ಟಾಗ್ರಾಮ್ ಪ್ಲಸ್ ವಿಶೇಷತೆಗಳು
ಬೇರೆಯವರ ಸ್ಟೋರಿಗಳನ್ನು ಅನಾಮಧೇಯವಾಗಿ ವೀಕ್ಷಿಸುವ ಅವಕಾಶ, 48 ಗಂಟೆಗಳ ಸ್ಟೋರಿ ಅವಧಿ, ಸ್ಟೋರಿಯನ್ನು ಯಾರು ಎಷ್ಟು ಬಾರಿ ವೀಕ್ಷಿಸಿದ್ದಾರೆ ಎಂಬ ಮಾಹಿತಿ, ಫಾಲೋವರ್‌ಗಳ ಮುಖ್ಯ ಫೀಡ್‌ಗೆ ಹೋಗದಂತೆ ನೇರವಾಗಿ ಪ್ರೊಫೈಲ್ ಗ್ರಿಡ್‌ನಲ್ಲಿ ಪೋಸ್ಟ್ ಪ್ರಕಟಿಸುವ ‘ಸ್ಟೀಲ್ತ್ ಪೋಸ್ಟಿಂಗ್’ ಹಾಗೂ ಹೆಚ್ಚುವರಿ ಪ್ರೊಫೈಲ್ ಕಸ್ಟಮೈಸೇಶನ್ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.

ಫೇಸ್ಬುಕ್ ಪ್ಲಸ್‌ನಲ್ಲಿ ಏನು ಸಿಗಲಿದೆ?
ಇನ್ಸ್ಟಾಗ್ರಾಮ್‌ನಂತೆಯೇ ಸುಧಾರಿತ ಸ್ಟೋರಿ ಫೀಚರ್‌ಗಳು, ಕಸ್ಟಮ್ ಐಕಾನ್‌ಗಳು, ಹೊಸ ಬಯೋ ಫಾಂಟ್‌ಗಳು, ಹೆಚ್ಚುವರಿ ಪ್ರೊಫೈಲ್ ಪಿನ್ ಆಯ್ಕೆಗಳು ಹಾಗೂ ಪೇಜ್ ನಿರ್ವಾಹಕರಿಗೆ ಸುಧಾರಿತ ಆಡಿಯನ್ಸ್ ಇನ್‌ಸೈಟ್ಸ್, ಕಂಟೆಂಟ್ ಮಾನಿಟರಿಂಗ್ ಮತ್ತು ಮಾಡರೇಶನ್ ಸೌಲಭ್ಯಗಳು ಲಭ್ಯವಾಗಲಿವೆ.

ಮೆಟಾ ಸಂಸ್ಥೆಯು ಉಚಿತ ಸೇವೆಗಳನ್ನು ಮುಂದುವರಿಸುವುದಾಗಿ ಸ್ಪಷ್ಟಪಡಿಸಿದ್ದು, ಈ ಪ್ಲಸ್ ಚಂದಾದಾರಿಕೆಗಳು ಹೆಚ್ಚುವರಿ ಫೀಚರ್‌ಗಳನ್ನು ಬಯಸುವ ಬಳಕೆದಾರರಿಗೆ ಮಾತ್ರ ಐಚ್ಛಿಕವಾಗಿರಲಿವೆ.