ನೀಟ್ ಮರು ಪರೀಕ್ಷೆ ಜೂನ್ 21 ರಂದು, ಯಾವುದೇ ಲೋಪವಿಲ್ಲದಂತೆ ಪಾರದರ್ಶಕತೆಯಿಂದ ನಡೆಸಿ: ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ

ಉಡುಪಿ: ಜಿಲ್ಲೆಯಲ್ಲಿ ಜೂನ್ 21 ರಂದು ನಡೆಯಲಿರುವ ನೀಟ್ (ಯುಜಿ) ಮರು ಪರೀಕ್ಷೆಯಲ್ಲಿ ಯಾವುದೇ ಲೋಪದೋಷ ಉಂಟಾಗದoತೆ ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಅಗತ್ಯವಿರುವ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ನೀಟ್ ಮರು ಪರೀಕ್ಷೆಯನ್ನು ಸುವ್ಯವಸ್ಥಿತವಾಗಿ ನಡೆಸುವ ಸಂಬoಧ ಆಯೋಜಿಸಲಾದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ವತಿಯಿಂದ ನೀಟ್ ಮರು ಪರೀಕ್ಷೆಯು ಜೂನ್ […]

ಉಡುಪಿ ಲಯನ್ಸ್ ಶೇಖ‌ರ್ ಡಿ ಶೆಟ್ಟಿ ಅವರು ವಲಯಾಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ.

ಲಯನ್ಸ್ ಶೇಖ‌ರ್ ಡಿ ಶೆಟ್ಟಿ ಉಡುಪಿ ಪ್ರಕೃತಿ ಕ್ಲಬ್ಬಿನ ಪ್ರವರ್ತಕರಾದ ಇವರು ಲಯನ್ಸ್ ಡಿಸ್ಟ್ರಿಕ್ಟ್ 317(ಅ) ಇದರ ಪ್ರಾಂಡ್ನ 3ರ ವಲಯ 2ರ ವಲಯಾಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ. ಶ್ರೀಯುತರು ಲಯನ್ಸ್ ಸೇವೆ ಸಂಸ್ಥೆಯಲ್ಲಿ 22 ವರ್ಷಗಳಿಂದ ಸತತ ಲಯನ್ಸ್ ಕ್ಲಬ್‌ ಪ್ರಕೃತಿಯ ಚಾರ್ಟರ್ ಸದಸ್ಯರು, ಕಾರ್ಯದರ್ಶಿ ಅಧ್ಯಕ್ಷರಾಗಿ ಈ ಕ್ಲಬ್‌ನ್ನು ಜಿಲ್ಲೆಯಲ್ಲಿ ಒಂದು ಆತ್ಯುತ್ತಮ ಕ್ಲಬ್ ৬৭ ಪರಿವರ್ತಿಸಿದ್ದಾರೆ. ವಲಯಾಧ್ಯಕ್ಷಕರಾಗಿ ಇನ್ನೂ ಹೆಚ್ಚಿನ ಸೇವೆಯನ್ನು ಮಾಡುವಂತಾಗಲಿ.

ಫ್ರೀ ಓನರ್ ವೆಹಿಕಲ್ ಡೀಲರ್ಸ್ ಅಸೋಸಿಯೇಷನ್ ರಿ. ಉಡುಪಿ ವತಿಯಿಂದ ಸತತ ನಾಲ್ಕನೇ ವರ್ಷದ ಗಿಡ ವಿತರಣೆ ಕಾರ್ಯಕ್ರಮ.

ಫ್ರೀ ಓನರ್ ವೆಹಿಕಲ್ ಡೀಲರ್ಸ್ ಅಸೋಸಿಯೇಷನ್ ರಿ. ಉಡುಪಿ ವತಿಯಿಂದ ಸತತ ನಾಲ್ಕನೇ ವರ್ಷದ ಗಿಡ ವಿತರಣೆ ಹಾಗೂ ನೆಡುವ ಕಾರ್ಯಕ್ರಮವು ಇದೇ 22/6/ 2026 ಸೋಮವಾರ ,ಸ್ಥಳ ಯುಸಿ ಸಿಟಿ ಹಿರಿಯಡ್ಕ, ಸಮಯ ಬೆಳಿಗ್ಗೆ 9:00 ಗಂಟೆಗೆ ಹಿರಿಯಡ್ಕದಲ್ಲಿ ಯುಸಿ ಡೆವಲಪರ್ಸ್ ಇವರ ಸಹಭಾಗಿತ್ವದಲ್ಲಿ ನಡೆಯಲಿದೆ .ಇದರ ಉಪಯೋಗವನ್ನು ಸಾರ್ವಜನಿಕರು ಎಲ್ಲರೂ ಪಡೆದುಕೊಳ್ಳಬೇಕೆಂದುಡೀಲರ್ ಅಧ್ಯಕ್ಷರಾದ ಮೊಹಮ್ಮದ್ ಅಶ್ರಫ್ ಹಾಗೂ ಸಂಘದ ಎಲ್ಲಾ ಕಾರ್ಯಕರ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸುವ ನಕಲಿ ಏಜೆಂಟ್ ಗಳ ಬಗ್ಗೆ ಎಚ್ಚರಿಕೆ ವಹಿಸಿ ಎಂದ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ

ಮಂಗಳೂರು: ವಿದೇಶದಲ್ಲಿ ಉದ್ಯೋಗ ಪಡೆಯುವ ಕನಸು ಹೊಂದಿರುವವರು ನಕಲಿ ಏಜೆಂಟ್‌ಗಳ ಮೋಸಕ್ಕೆ ಒಳಗಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದೇಶದಲ್ಲಿ ಉದ್ಯೋಗ ಕಲ್ಪಿಸುವ ಎಲ್ಲಾ ನೇಮಕಾತಿ ಏಜೆನ್ಸಿಗಳು ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ಅಡಿಯಲ್ಲಿ ಕಡ್ಡಾಯವಾಗಿ ನೋಂದಾಯಿಸಿರಬೇಕು ಎಂದು ತಿಳಿಸಿದರು. ನಗರದಲ್ಲಿ ಸುಮಾರು 25ರಿಂದ 30 ಏಜೆನ್ಸಿಗಳು ಕಾನೂನುಬದ್ಧವಾಗಿ ನೋಂದಾಯಿಸಿಕೊಂಡು ಕಾರ್ಯನಿರ್ವಹಿಸುತ್ತಿವೆ ಎಂದರು. ನೋಂದಾಯಿತ ಏಜೆನ್ಸಿಗಳನ್ನು ಸಂಪರ್ಕಿಸದೆ ನಕಲಿ […]

ಬದಲಾಯ್ತು ಸೋನು ನಿಗಂ ಮೋಹಕ ಧ್ವನಿ: ಅಷ್ಟಕ್ಕೂ ಮಳೆ ಹಾಡಿನ ಈ ಮೆಲೊಡಿ ಗಾಯಕನಿಗೆ ಕಾಡುತ್ತಿರುವ ಸಮಸ್ಯೆ ಏನು?

ನವದೆಹಲಿ: ಕನ್ನಡ ಸೇರಿದಂತೆ ಹಲವು ಭಾಷೆಗಳ ಸಿನಿಮಾ ಹಾಡುಗಳ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿರುವ ಖ್ಯಾತ ಗಾಯಕ ಸೋನು ನಿಗಂ ತಮ್ಮ ಆರೋಗ್ಯದ ಕುರಿತು ಆತಂಕಕಾರಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ನರಗಳಿಗೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿರುವುದಾಗಿ, ಈ ಸಮಸ್ಯೆಯಿಂದ ಸ್ವರವೂ ಬದಲಾಗಿರುವುದಾಗಿ ಅವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಮೂಲಕ ತಿಳಿಸಿದ್ದು, ಅಭಿಮಾನಿಗಳಲ್ಲಿ ಕಳವಳ ಮೂಡಿಸಿದೆ. ಕಳೆದ ಒಂದು ವಾರದಿಂದ ತಾವು ತೀವ್ರವಾದ ನರ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದು, ಎಂಆರ್‌ಐ (MRI) ಹಾಗೂ ಸಿಟಿ ಸ್ಕ್ಯಾನ್ (CT Scan) ಸೇರಿದಂತೆ […]