ಪಿಯುಸಿ ಆದಾಕ್ಷಣ ಉದ್ಯೋಗದ ದಾರಿ ಹುಡುಕುತ್ತಿರುವ ಯುವತಿಯರಿಗೆ ಪ್ರತಿಷ್ಠಿತ ವಿಮಾನಯಾನ ಸಂಸ್ಥೆ ಭರ್ಜರಿ ಅವಕಾಶ ನೀಡಿದೆ.
ಏರ್ ಇಂಡಿಯಾದ ಸಂಸ್ಥೆಯಲ್ಲಿ (Air India Limited) ಖಾಲಿ ಇರುವ ಕ್ಯಾಬಿನ್ ಕ್ರೂ ಹುದ್ದೆ ಭರ್ತಿಗೆ ಸಂಸ್ಥೆ ಅಧಿಸೂಚನೆ ಪ್ರಕಟಿಸಿದೆ.ಭಾರತದಲ್ಲಿ ಅತಿ ಹೆಚ್ಚಿನ ವೇತನ ಹೊಂದಿರುವ ಹುದ್ದೆಗಳಲ್ಲಿ ಒಂದಾಗಿರುವ ಕ್ಯಾಬಿನ್ ಕ್ರೂ ಹುದ್ದೆ ನೇಮಕಾತಿ ಇದಾಗಿದೆ
ವಾಕ್ ಇನ್ ಮೂಲಕ ಈ ಹುದ್ದೆ ಆಯ್ಕೆ ನಡೆಯಲಿದೆ. ಬೆಂಗಳೂರಿನಲ್ಲಿ ನಡೆಯಲಿರುವ ಸಂದರ್ಶನಕ್ಕೆ ಅಭ್ಯರ್ಥಿಗಳು ಹಾಜರಾಗಬಹುದು. ಈ ಹುದ್ದೆಗಳು ಕೇವಲ ಮಹಿಳಾ ಅಭ್ಯರ್ಥಿಗಳಿಗೆ ಮಾತ್ರ ಸೀಮಿತವಾಗಿದೆ.
ಈ ಹುದ್ದೆ ಅನೇಕ ಯುವತಿಯರ ಕನಸಾಗಿದ್ದು, ಅದಕ್ಕೆ ಇದೀಗ ವೇದಿಕೆ ಸಿಕ್ಕಿದೆ. ಅತ್ಯುತ್ತಮ ಸಂಬಳ ಹೊಂದಿರುವ ಈ ಹುದ್ದೆ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ..
ಭಾರತದಲ್ಲಿ ಅತಿ ಹೆಚ್ಚಿನ ವೇತನ ಹೊಂದಿರುವ ಹುದ್ದೆಗಳಲ್ಲಿ ಒಂದಾಗಿರುವ ಕ್ಯಾಬಿನ್ ಕ್ರೂ ಹುದ್ದೆ ನೇಮಕಾತಿ ಇದಾಗಿದೆ. ಆಗಸದಲ್ಲಿ ಹಾರುವ ಜೊತೆಗೆ ವಿವಿಧ ರಾಜ್ಯ, ದೇಶದ ಅತಿಥಿಗಳೊಂದಿಗೆ ಉತ್ತಮ ಸಂಭಾಷಣೆ, ಅತಿಥ್ಯವನ್ನು ಬೇಡುವ ಹುದ್ದೆ ಇದಾಗಿದೆ.
ಹುದ್ದೆ ವಿವರ: ವಿಮಾನದ ಪ್ರಯಾಣಿಕರ ಸುರಕ್ಷತೆ ಮತ್ತು ಭದ್ರತಾ ಸೇವೆ ಒದಗಿಸುವುದು ಕ್ಯಾಬಿನ್ ಕ್ರೂ ಹುದ್ದೆಯಾಗಿದೆ. ನಿಗದಿತ ಹುದ್ದೆಗಳ ಸಂಖ್ಯೆಯನ್ನು ಸ್ಪಷ್ಟಪಡಿಸಿಲ್ಲ.
ಜೂನ್ 22 ರಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ 12:30ರವರೆಗೆ ಈ ನೇರ ಸಂದರ್ಶನ ನಡೆಯಲಿದೆ. ಈ ಹುದ್ದೆಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ನೇರ ಸಂದರ್ಶನದಲ್ಲಿ ಅಭ್ಯರ್ಥಿಗಳ ಸಾಮರ್ಥ್ಯದ ಮೂಲಕ ಆಯ್ಕೆ ನಡೆಸಲಾಗುವುದು.
ಪಿಯುಸಿಯಲ್ಲಿ ಕನಿಷ್ಠ 50 ಅಂಕ ಪಡೆದ ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಹರಾಗಿದ್ದಾರೆ.
ಯುವತಿಯರ ಎತ್ತರ 155 ಸೆಂ.ಮೀ ಇರಬೇಕು.
18 ರಿಂದ 27 ವರ್ಷದ ಯುವತಿಯರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
ಯುವತಿಯರು ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಉತ್ತಮ ಹಿಡಿತವನ್ನು ಹೊಂದಿರಬೇಕು.
ಭಾರತೀಯ ಪ್ರಜೆಯಾಗಿದ್ದು, ಭಾರತೀಯ ಪಾಸ್ಪೋರ್ಟ್, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಹೊಂದಿರಬೇಕು
ಎಲ್ಲಿ- ಯಾವಾಗ ನಡೆಯಲಿದೆ ಸಂದರ್ಶನ:
ಸಂದರ್ಶನದ ಸ್ಥಳ: ಐಟಿಸಿ ಫಾರ್ಚೂನ್ ಪಾರ್ಕ್, ಜೆಪಿ ಸೆಲೆಸ್ಟಿಯಲ್, 5, 43, ರೇಸ್ ಕೋರ್ಸ್ ರೋಡ್, ಆನಂದ್ ರಾವ್ ಸರ್ಕಲ್, ರೇಸ್ ಕೋರ್ಸ್, ಗಾಂಧಿ ನಗರ, ಬೆಂಗಳೂರು- 650009.
.
ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಸೇರಿದಂತೆ ಅಧಿಕೃತ ಅಧಿಸೂಚನೆ ವೀಕ್ಷಣೆಗೆ airindia.in ಈ ಅಧಿಕೃತ ಜಾಲತಾಣಕ್ಕೆ ಅಭ್ಯರ್ಥಿಗಳು ಭೇಟಿ ನೀಡಬಹುದಾಗಿದೆ.
ಈ ದಾಖಲೆ ಅವಶ್ಯ: ಈ ಹುದ್ದೆಗೆ ಹಾಜರಾಗುವ ಇಚ್ಛೆಯನ್ನು ಹೊಂದಿರುವ ಅಭ್ಯರ್ಥಿಗಳು ಜೂನ್ 22ರಂದು ನಡೆಯುವ ಈ ಸಂದರ್ಶನದಲ್ಲಿ ತಮ್ಮ ಶೈಕ್ಷಣಿಕ ದಾಖಲಾತಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಕೊಂಡೊಯ್ಯುವುದು ಅತಿ ಮುಖ್ಯ. ಜೊತೆಗೆ ಹೊಸ ಅಪ್ಡೇಟ್ ರೆಸ್ಯೂಮ್ ಅನ್ನು ಜೊತೆಗೆ ಎಸ್ಇಪಿ ಕಾರ್ಡ್ ಅನ್ನು ಹೊಂದಿರಬೇಕು. ಅಭ್ಯರ್ಥಿಗಳು ವೆಸ್ಟರ್ನ್ ಫಾರ್ಮಲ್ ಧಿರಿಸಿನಲ್ಲಿ ಸಂದರ್ಶನಕ್ಕೆ ಹಾಜರಾಗಬೇಕಿದೆ