₹10 ಲಕ್ಷ ವೆಚ್ಚದಲ್ಲಿ ಅಪ್ಪು ಅಭಿಮಾನಿಯಿಂದ ಗ್ರಂಥಾಲಯ ನಿರ್ಮಾಣ

ಮೈಸೂರು : ಅಪ್ಪು (ಪುನೀತ್ ರಾಜ್‌ಕುಮಾರ್) ಅಭಿಮಾನಿಯೊಬ್ಬರು ಮೈಸೂರಿನಲ್ಲಿ ಗ್ರಂಥಾಲಯವನ್ನು ನಿರ್ಮಿಸಿದ್ದಾರೆ. ದಿ. ಪುನೀತ್​ ರಾಜ್‌ಕುಮಾರ್​ ಅವರು ಇಹಲೋಕ ತ್ಯಜಿಸಿ ಒಂದೂವರೆ ವರ್ಷ ಕಳೆಯುತ್ತಿದೆ. ನಟನ ಅಭಿಮಾನಿಗಳು ಒಂದಲ್ಲೊಂದು ರೀತಿಯ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುತ್ತಾರೆ. ಈ ಮೂಲಕ ಅಪ್ಪು ಅಮರ ಎಂದು ಜಗತ್ತಿಗೆ ಸಾರುತ್ತಿದ್ದಾರೆ. ಟಿ. ನರಸೀಪುರ ಬಳಿಯ ಮೇದಿನಿ ಗ್ರಾಮದ ಎಂ.ಎನ್.ಕುಮಾರ್ ಎಂಬವರು ಗ್ರಂಥಾಲಯ ನಿರ್ಮಿಸಿ ಬಡ ವಿದ್ಯಾರ್ಥಿಗಳಿಗೆ ನೆರವಾಗಿದ್ದಾರೆ. ಅಪ್ಪುವಿನ ಅಪ್ಪಟ ಅಭಿಮಾನಿಯಾಗಿರುವ ಇವರು ಅವರ ನೆನಪಿಗೋಸ್ಕರ 10 ಲಕ್ಷ ರೂಪಾಯಿ ಖರ್ಚಿನಲ್ಲಿ ಗ್ರಂಥಾಲಯ […]

ಅದೃಷ್ಟ ಪರೀಕ್ಷೆಗಿಳಿದ ತುಳುನಾಡಿನ ನಟ ರೂಪೇಶ್ ಶೆಟ್ಟಿ ‘ಸರ್ಕಸ್’ ಮೂಲಕ ಪ್ರೇಕ್ಷಕರ ಮುಂದೆ

ಮಂಗಳೂರು (ದಕ್ಷಿಣ ಕನ್ನಡ): ಕನ್ನಡ ಬಿಗ್ ಬಾಸ್ ಮೂಲಕ ಅಪಾರ ಪ್ರೇಕ್ಷಕರ ಮನಸ್ಸು ಗೆದ್ದಿರುವ ನಟ ರೂಪೇಶ್ ಶೆಟ್ಟಿ ಇದೀಗ ತಮ್ಮ ಹೊಸ ಸಿನಿಮಾ ‘ಸರ್ಕಸ್’ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.ಕರಾವಳಿಯ ನಟ ರೂಪೇಶ್ ಶೆಟ್ಟಿ ಅಭಿನಯದ ಸರ್ಕಸ್ ಸಿನಿಮಾ ಇದೇ ಜೂನ್ 23ರಂದು ವಿಶ್ವಾದ್ಯಂತ ತೆರೆಕಾಣಲಿದೆ ರೂಪೇಶ್ ಶೆಟ್ಟಿ ಪ್ರತಿಕ್ರಿಯೆ ಸರ್ಕಸ್’ ತುಳು ಸಿನಿಮಾ. ಈಗಾಗಲೇ ಕೆಲವು ತುಳು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿರುವ ಇವರು ಸರ್ಕಸ್ ಸಿನಿಮಾದಲ್ಲಿಯೂ ನಾಯಕ ನಟ. ಬಿಗ್ ಬಾಸ್ ವಿನ್ನರ್​​ ಆದ […]

ವಿಧಾನಸೌಧದ ಮುಂಭಾಗ ಯೋಗ ಪ್ರದರ್ಶನಕ್ಕೆ ಚಾಲನೆ ನೀಡಿದ ರಾಜ್ಯಪಾಲರು

ಬೆಂಗಳೂರು : 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಆಯುಷ್ಯ ಇಲಾಖೆಯಿಂದ ಇಂದು ವಿಧಾನಸೌಧದ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗಿದ್ದ “ಯೋಗ-ವಸುದೈವ ಕುಟುಂಬಕ್ಕಾಗಿ” ಕಾರ್ಯಕ್ರಮವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉದ್ಘಾಟಿಸಿದರು. ವಸುದೈವ ಕುಟುಂಬಕ್ಕಾಗಿ ಎಂಬ ಘೋಷವಾಕ್ಯದೊಂದಿಗೆ ವಿಧಾನಸೌಧದ ಮುಂಭಾಗ ಹಮ್ಮಿಕೊಂಡಿದ್ದ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಚಾಲನೆ ನೀಡಿದರು. ಉದ್ಘಾಟನಾ ಕಾರ್ಯಕ್ರಮದ ಬಳಿಕ ಮಾತನಾಡಿದ ರಾಜ್ಯಪಾಲರು ಯೋಗದ ಮಹತ್ವವನ್ನ ತಿಳಿಸಿದರು. ” ನಮ್ಮ ಸಂಸ್ಕೃತಿಯಲ್ಲಿ ಯೋಗಕ್ಕೆ ತನ್ನದೇ ಆದ ಹೆಸರಿದೆ. ಯೋಗದ ಮಹತ್ವ ಕುರಿತು […]

2023ರ ACC ಮಹಿಳಾ ಉದಯೋನ್ಮುಖ ಟೀಮ್ ಕಪ್ ವುಮೆನ್ಸ್​​​​​​ ಇಂಡಿಯಾ ಎ ಟೀಂ ಮಡಿಲಿಗೆ

ಮೊಂಗ್ ಕಾಕ್: ಹಾಂಕಾಂಗ್‌ನಲ್ಲಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಆಯೋಜಿಸಿದ್ದ ಮಹಿಳಾ ಉದಯೋನ್ಮುಖ ತಂಡಗಳ ಫೈನಲ್ ಪಂದ್ಯದಲ್ಲಿ ಭಾರತ ‘ಎ’ ತಂಡವು ಬಾಂಗ್ಲಾದೇಶ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಭಾರತೀಯ ಮಹಿಳಾ ಎ ತಂಡ ಪ್ರಶಸ್ತಿಗೆ ಭಾಜನವಾಗಿದೆ. ಮೊದಲಿಗೆ ಬ್ಯಾಟ್​ ಬೀಸಿದ ಭಾರತದ ಮಹಿಳೆಯರ ಎ ಟೀಮ್​, 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 127 ರನ್ ಗಳಿಸಿತು. ಈ ಮೂಲಕ ಎದುರಾಳಿ ಬಾಂಗ್ಲಾದೇಶ ‘ಎ’ ತಂಡಕ್ಕೆ 128 ರನ್​ಗಳ ಗೆಲುವಿನ ಗುರಿ ನೀಡಿತ್ತು. ಈ […]

ಕ್ಯಾಬಿನ್​ ಕ್ರೂ ಹುದ್ದೆಗೆ ನಾಳೆ ಬೆಂಗಳೂರಿನಲ್ಲೇ ನಡೆಯಲಿದೆ ವಾಕ್​-ಇನ್​- ಇಂಟರ್​ವ್ಯೂ

ಪಿಯುಸಿ ಆದಾಕ್ಷಣ ಉದ್ಯೋಗದ ದಾರಿ ಹುಡುಕುತ್ತಿರುವ ಯುವತಿಯರಿಗೆ ಪ್ರತಿಷ್ಠಿತ ವಿಮಾನಯಾನ ಸಂಸ್ಥೆ ಭರ್ಜರಿ ಅವಕಾಶ ನೀಡಿದೆ. ಏರ್​ ಇಂಡಿಯಾದ ಸಂಸ್ಥೆಯಲ್ಲಿ (Air India Limited) ಖಾಲಿ ಇರುವ ಕ್ಯಾಬಿನ್​ ಕ್ರೂ ಹುದ್ದೆ ಭರ್ತಿಗೆ ಸಂಸ್ಥೆ ಅಧಿಸೂಚನೆ ಪ್ರಕಟಿಸಿದೆ.ಭಾರತದಲ್ಲಿ ಅತಿ ಹೆಚ್ಚಿನ ವೇತನ ಹೊಂದಿರುವ ಹುದ್ದೆಗಳಲ್ಲಿ ಒಂದಾಗಿರುವ ಕ್ಯಾಬಿನ್​ ಕ್ರೂ ಹುದ್ದೆ ನೇಮಕಾತಿ ಇದಾಗಿದೆ ವಾಕ್​ ಇನ್​ ಮೂಲಕ ಈ ಹುದ್ದೆ ಆಯ್ಕೆ ನಡೆಯಲಿದೆ. ಬೆಂಗಳೂರಿನಲ್ಲಿ ನಡೆಯಲಿರುವ ಸಂದರ್ಶನಕ್ಕೆ ಅಭ್ಯರ್ಥಿಗಳು ಹಾಜರಾಗಬಹುದು. ಈ ಹುದ್ದೆಗಳು ಕೇವಲ ಮಹಿಳಾ ಅಭ್ಯರ್ಥಿಗಳಿಗೆ […]