ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ತೀವ್ರವಾಗಿ ಅಸ್ವಸ್ಥರಾಗಿದ್ದಾರೆ ಎಂದು ಬ್ರಿಟನ್ ನ ಮಾಜಿ ಗೂಢಚಾರಿ ಕ್ರಿಸ್ಟೋಫರ್ ಸ್ಟೀಲ್ ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್ ಕುರಿತು ದಸ್ತಾವೇಜನ್ನು ಬರೆದಿದ್ದ ಮತ್ತು 2016 ರ ಅಮೇರಿಕಾ ಚುನಾವಣಾ ಪ್ರಚಾರದಲ್ಲಿ ರಷ್ಯಾದ ಹಸ್ತಕ್ಷೇಪವನ್ನು ಆರೋಪಿಸಿದ್ದ ಸ್ಟೀಲ್, ಸ್ಕೈ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ, “ನಿಸ್ಸಂಶಯವಾಗಿ, ರಷ್ಯಾ ಮತ್ತು ಬೇರೆಡೆಯ ಮೂಲಗಳಿಂದ ನಾವು ಕೇಳುತ್ತಿರುವ ಪ್ರಕಾರ, ಪುಟಿನ್ ವಾಸ್ತವವಾಗಿ ತೀವ್ರವಾಗಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ” ಎಂದಿದ್ದಾರೆ.
ಇವೆಲ್ಲದರ ನಡುವೆ, ರಷ್ಯಾದ ಮಿತ್ರ ಜನತಂತ್ರದ ಸದಸ್ಯರೊಬ್ಬರು ಪುತಿನ್ ಜೊತೆ ನಿಕಟ ಸಂಬಂಧವನ್ನು ಹೊಂದಿದ್ದು, ರಷ್ಯಾದ ನಾಯಕ “ರಕ್ತ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ” ಎಂದು ಹೇಳಿರುವ ಬಗ್ಗೆ ಆಡಿಯೊ ಸಂಭಾಷಣೆ ಬಹಿರಂಗವಾಗಿದೆ ಎನ್ನಲಾಗಿದೆ.
ಅನಾಮಿಕ ಸದಸ್ಯರೊಬ್ಬರು ಪಾಶ್ಚಿಮಾತ್ಯ ಸಾಹಸೋದ್ಯಮ ಬಂಡವಾಳಗಾರರೊಂದಿಗೆ ಚರ್ಚಿಸುತ್ತಿರುವ ಸಂದರ್ಭದಲ್ಲಿ ಪುತಿನ್ ಅವರ ಆರೋಗ್ಯದ ಬಗ್ಗೆ ಹೇಳಲಾಗಿರುವ ಮಾತುಗಳ ಆಡಿಯೋ ಸಂಭಾಷಣೆಯ ಸೋರಿಕೆಯಾದ ರೆಕಾರ್ಡಿಂಗ್ ಅಮೇರಿಕಾದ ನ್ಯೂ ಲೈನ್ಸ್ ಮ್ಯಾಗಜೀನ್ ಗೆ ಲಭ್ಯವಾಗಿದೆ ಎಂದು ಪುಕಾರು ಹಬ್ಬಿದೆ.
ಉಕ್ರೇನ್ ಆಕ್ರಮಣಕ್ಕೆ ಆದೇಶ ನೀಡುವ ಸ್ವಲ್ಪ ಸಮಯದ ಮೊದಲು ಪುತಿನ್ ಅವರಿಗೆ ಬೆನ್ನಿನ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ರಷ್ಯಾ ಅಧ್ಯಕ್ಷ “ಹುಚ್ಚ”ರಾಗಿದ್ದಾರೆ ಎಂದು ಅವರು ಹೇಳಿರುವ ಬಗ್ಗೆ ಟೇಪ್ ನಲ್ಲಿ ರೆಕಾರ್ಡ್ ಆಗಿದೆ ಎನ್ನಲಾಗಿದೆ. ಉಕ್ರೇನ್ ಯುದ್ಧದ ನಂತರ ರಷ್ಯಾದ ಅಧ್ಯಕ್ಷರ ಕ್ಷೀಣಿಸುತ್ತಿರುವ ಆರೋಗ್ಯದ ಬಗ್ಗೆ ತೀವ್ರವಾದ ಊಹಾಪೋಹಗಳಿವೆ. ಕಳೆದ ವಾರ ವಿಜಯ ದಿನಾಚರಣೆ ಸೇರಿದಂತೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪುತಿನ್ ನಿಶ್ಶಕ್ತರಾಗಿರುವಂತೆ ಕಂಡುಬರುತ್ತಿರುವುದು ಉಹಾಪೋಹಾಗಳಿಗೆ ಎಡೆ ಮಾಡಿಕೊಡುತ್ತಿದೆ.