ಉಡುಪಿ: ಉಡುಪಿಯಲ್ಲಿ ನಡೆದ ಲವ್ ಜಿಹಾದ್ ಜನಸಾಮಾನ್ಯರಲ್ಲಿ ಭಯ ಮೂಡಿಸಿದೆ. ಈ ಜಿಹಾದ್ ಎನ್ನುವುದು ಕೊರೋನಾ ವೈರಸ್ ಗಿಂತಲೂ ಭೀಕರವಾಗಿದೆ ಎಂದು ಉಡುಪಿ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ವೀಣಾ ಎಸ್. ಶೆಟ್ಟಿ ಹೇಳಿದ್ದಾರೆ.
ಹಿಂದೂ ಹೆಣ್ಣುಮಕ್ಕಳನ್ನು ಗುರಿಯಾಗಿಸಿ ಪ್ರೀತಿಯ ನಾಟಕವಾಡಿ ಮತಾಂತರ ಮಾಡುತ್ತಾರೆ. ಅಲ್ಲದೇ ಅವರ ಬದುಕನ್ನು ಛಿಧ್ರಗೊಳಿಸುವ, ಹಿಂದೂ ಸಮಾಜವನ್ನು ಅಸ್ಥಿರವಾಗಿಸುವ ಸಂಚು ರೂಪಿಸುತ್ತಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ.
ನಮ್ಮ ದೇಶದ ಸಂಸ್ಕೃತಿಯನ್ನು ನಾಶ ಮಾಡಲು ಕೆಲವು ಮತಾಂಧರ ವ್ಯವಸ್ಥಿತ ಸಂಚು ಈ ಲವ್ ಜಿಹಾದ್. ಮನೆಯೇ ಮೊದಲ ಪಾಠಶಾಲೆ ಎನ್ನುವುದನ್ನು ನೆನಪಿಟ್ಟುಕೊಂಡು ಪೋಷಕರು ಕೂಡ ತಮ್ಮ ಮಕ್ಕಳ ಮೇಲೆ ಸೂಕ್ತ ಗಮನ ಹರಿಸಬೇಕು.
ಜಿಲ್ಲೆಯಲ್ಲಿ ಇನ್ನು ಮುಂದೆ ಲವ್ ಜಿಹಾದ್ ನಂತಹ ಪ್ರಕರಣಗಳು ಕಂಡುಬಂದರೆ ಇದಕ್ಕೆ ಕಾರಣರಾದ ಮತಾಂಧರ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು.
ಮಲ್ಪೆ ಪ್ರಕರಣವನ್ನು ಸೂಕ್ತ ತನಿಖೆ ನಡೆಸಿ ಆರೋಪಿಯ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವೀಣಾ ಎಸ್. ಶೆಟ್ಟಿ ಆಗ್ರಹಿಸಿದ್ದಾರೆ.