ಬೆಂಗಳೂರು: ಇಲ್ಲಿನ ಕ್ರೈಸ್ಟ್ ಯುನಿವರ್ಸಿಟಿಯ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಕರಾವಳಿಯ ಅಭಿಜಾತ ಕಲಾವಿದ ವಿಲಾಸ್ ನಾಯಕ್ ಕುಂಚದಲ್ಲಿ ಮೂಡಿರುವ ಕಾಂತಾರದ ಪಂಜುರ್ಲಿ ದೈವ ನೋಡುಗರ ಮನವನ್ನು ಸೂರೆಗೈದಿದೆ.
Exhilarating experience to create Kantara Live Art in front of a massive college audience! @shetty_rishab @hombalefilms #Kantara #Liveart #Bhootakola #Mangalore #Karnataka #India #Culture #Movies #Rishabshetty #Hombale #VilasNayak #Painting #ChristCollege #ChristUniversity pic.twitter.com/Ve0epb8U5y
— Vilas Nayak (@VilasNayak) November 6, 2022
ವಿಲಾಸ್ ಸ್ವಯಂ-ಭೂ ಕಲಾವಿದರಾಗಿದ್ದು, ತಮ್ಮ 3 ನೇ ವಯಸ್ಸಿನಲ್ಲಿಯೆ ಚಿತ್ರಕಲೆಯನ್ನು ಪ್ರಾರಂಭಿಸಿದ್ದಾರೆ. 2011 ರಲ್ಲಿ ತಮ್ಮ ಲಾಭದಾಯಕ ಕಾರ್ಪೊರೇಟ್ ಉದ್ಯೋಗವನ್ನು ತೊರೆದು ಕಲೆಯ ಮೇಲಿನ ಉತ್ಸಾಹವನ್ನು ಮುಂದುವರಿಸುವ ಮೊದಲು, ಅವರು ಮಾನವ ಸಂಪನ್ಮೂಲ ಅಧಿಕಾರಿಯಾಗಿ ಸುಮಾರು 6 ವರ್ಷಗಳ ಕಾಲ ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ಇಂಡಿಯಾಸ್ ಗಾಟ್ ಟ್ಯಾಲೆಂಟ್ ಸೀಸನ್ 3 ಅಂತಿಮ ಸ್ಪರ್ಧಿ ಮತ್ತು ‘ಇಸಿ ಲೈವ್ ಕೋಶಂಟ್ ಮೋಸ್ಟ್ ಇನ್ನೋವೇಟಿವ್ ಆಕ್ಟ್ ಅವಾರ್ಡ್’ 2012 ರ ವಿಜೇತರಾಗಿರುವ ಇವರು ಪ್ರಸ್ತುತ ಜಗತ್ತಿನಲ್ಲಿ ಅತಿ ಹೆಚ್ಚು ಬೇಡಿಕೆಯಿರುವ ಸ್ಪೀಡ್ ಪೇಂಟಿಂಗ್ ಕಲಾವಿದರಲ್ಲಿ ಒಬ್ಬರಾಗಿದ್ದಾರೆ.
ವಾರಣಾಸಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೋ ಅಬೆ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ, ಭಾರತೀಯ ಸಶಸ್ತ್ರ ಪಡೆಗಳು, ಇಸ್ರೋ, ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಸಂಯುಕ್ತ ಸಂಸ್ಥಾನ ಗಳ ಸಾಮಾನ್ಯ ಸಭೆ, ಏಷ್ಯಾಸ್ ಗಾಟ್ ಟ್ಯಾಲೆಂಟ್ ಮುಂತಾದ ದೊಡ್ಡ ದೊಡ್ಡ ವೇದಿಕೆಗಳಲ್ಲಿ ತಮ್ಮ ಕಲಾಪ್ರದರ್ಶನವನ್ನು ನೀಡಿ ರಸಿಕರ ಕಣ್ಮನ ತಣಿಸಿದ್ದಾರೆ. ಮೂಲತಃ ಮಂಗಳೂರಿನ ಉಜಿರೆಯವರಾದ ಇವರು ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಕೃಪೆ: ವಿಲಾಸ್ ನಾಯಕ್ ಪೇಜ್