ಆಫ್ರಿಕಾದಿಂದ ಭಾರತದಕ್ಕೆ ಬಂದ ಚಿರತೆಗಳಿಂದ ಮೊದಲನೆ ಬೇಟೆ

ಭೋಪಾಲ್: ನಮೀಬಿಯಾದಿಂದ ಭಾರತಕ್ಕೆ ಬಂದ 51 ದಿನಗಳ ನಂತರ, ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದೊಳಗೆ ವಿಶೇಷ ಬೇಟೆಯ ಆವರಣದಲ್ಲಿ ಬಿಡುಗಡೆಯಾದ ಎರಡು ದಿನಗಳ ಬಳಿಕ ಎರಡು ಚಿರತೆಗಳು ನವೆಂಬರ್ 6-7 ರ ಮಧ್ಯರಾತ್ರಿಯಲ್ಲಿ ತಮ್ಮ ಮೊದಲ ಬೇಟೆಯನ್ನು ಮಾಡುವ ಮೂಲಕ ಇತಿಹಾಸವನ್ನು ನಿರ್ಮಿಸಿದವು. ಶಿಯೋಪುರದ ಕುನೋ ರಾಷ್ಟ್ರೀಯ ಉದ್ಯಾನವನದ ದೊಡ್ಡ ಆವರಣಕ್ಕೆ ಬಿಡುಗಡೆಯಾದ 24 ಗಂಟೆಗಳಲ್ಲಿ ಎರಡು ಚಿರತೆಗಳು ತಮ್ಮ ಮೊದಲ ಬೇಟೆಯನ್ನು ಮಾಡಿವೆ ಎಂದು ಡಿಎಫ್‌ಒ ಪ್ರಕಾಶ್ ಕುಮಾರ್ ವರ್ಮಾ ಹೇಳಿದ್ದಾರೆ. WATCH | Two […]

ಭಾರತೀಯ ಚಿತ್ರರಂಗದ ಮಹಿಳಾ ಸೂಪರ್ ಸ್ಟಾರ್ ಬಾಹುಬಲಿಯ ದೇವಸೇನೆಗೆ ಹುಟ್ಟುಹಬ್ಬದ ಸಂಭ್ರಮ

ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟಿ, ಮಹಿಳಾ ಸೂಪರ್ ಸ್ಟಾರ್ ಎಂದೇ ಕರೆಯಲ್ಪಡುವ ಬಾಹುಬಲಿಯ ದೇವಸೇನೆ ಪಾತ್ರಧಾರಿ ಅನುಷ್ಕಾ ಶೆಟ್ಟಿಗೆ ಇಂದು 41 ನೇ ಹುಟ್ಟುಹಬ್ಬದ ಸಂಭ್ರಮ. ಅತಿ ಹೆಚ್ಚು ಸಂಭಾವನೆ ಪಡೆಯುವ ದಕ್ಷಿಣ ಭಾರತದ ನಟಿಯರಲ್ಲಿ ಒಬ್ಬರಾಗಿರುವ ಅನುಷ್ಕಾ ಪ್ರತಿ ಚಲನಚಿತ್ರಕ್ಕೆ 2 ರಿಂದ 3 ಕೋಟಿ ರೂ ಸಂಭಾವನೆ ಪಡೆಯುತ್ತಾರೆ ಎನ್ನಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬೆಳ್ಳಿಪಾಡಿ ಗ್ರಾಮದ ತುಳುವ ಬಂಟ ಕುಟುಂಬದ ಪ್ರಫುಲ್ಲ ಶೆಟ್ಟಿ ಮತ್ತು ಎ.ಎನ್.ವಿಟ್ಟಲ್ ಶೆಟ್ಟಿಯವರ ಮೂರು ಮಕ್ಕಳಲ್ಲಿ […]

ನಾಡಿನ ಜನತೆಯ ಸಮಗ್ರ ಅಭಿವೃದ್ಧಿಗಾಗಿ ಡಬಲ್ ಇಂಜಿನ್ ಸರ್ಕಾರ ನಿರಂತರವಾಗಿ ಕೆಲ‌ಸ ಮಾಡುತ್ತಿದೆ: ಮುಖ್ಯಮಂತ್ರಿ ಬೊಮ್ಮಾಯಿ

ಉಡುಪಿ: ಕನ್ನಡ ನಾಡಿನ ಜನತೆಯ ಸಮಗ್ರ ಅಭಿವೃದ್ಧಿಗಾಗಿ ಡಬಲ್ ಇಂಜಿನ್ ಸರ್ಕಾರ ನಿರಂತರವಾಗಿ ಕೆಲ‌ಸ ಮಾಡುತ್ತಿದೆ. ಮೀನುಗಾರರಿಗೆ ಅಗತ್ಯವಿರುವ ಹೆಚ್ಚುವರಿ ಸೀಮೆಎಣ್ಣೆ ಒದಗಿಸಲು ನಮ್ಮ ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಹಾಗೂ ಮೀನುಗಾರರಿಗೆ ಸುಸಜ್ಜಿತ ಮನೆ ನಿರ್ಮಿಸಿಕೊಡುವ ಕಾರ್ಯ ಈಗಾಗಲೇ ಪ್ರಗತಿಯಲ್ಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಅವರು ಸೋಮವಾರದಂದು ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಲಾಗಿದ್ದ ಜನಸಂಕಲ್ಪ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕರಾವಳಿ ಪ್ರದೇಶದ ಅಭಿವೃದ್ಧಿಗೆ ನರೇಂದ್ರ ಮೋದಿಯವರ ಸರ್ಕಾರ ಬಹಳಷ್ಟು […]

ವಾಯ್ಸ್ ಆಫ್ ಚಾಣಕ್ಯ 2022 ಜಿಲ್ಲಾ ಮಟ್ಟದ ಟ್ರ್ಯಾಕ್ ಸಂಗೀತ ಸ್ಪರ್ಧೆ ಉದ್ಘಾಟನೆ

ಉಡುಪಿ: ಯಾವುದೇ ಒಂದು ಪ್ರತಿಭೆ ಹೊರಹೊಮ್ಮಲು ಅದಕ್ಕೆ ಸೂಕ್ತ ವೇದಿಕೆ ಅಗತ್ಯ. ಈ ನಿಟ್ಟಿನಲ್ಲಿ ಹೆಬ್ರಿಯ ಚಾಣಕ್ಯ ಸಂಸ್ಥೆ ಕಳೆದ 7 ವಷ೯ಗಳಿಂದ ಸಂಗೀತ ಪ್ರತಿಭೆಗಳನ್ನು ಗುರುತಿಸಿ ವೇದಿಕೆ ಕಲ್ಪಿಸುತ್ತಿರುವುದು ಶ್ಲಾಘನೀಯ ಎಂದು ಉಡುಪಿ ಜಿಲ್ಲಾ ಕಾಯ೯ನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ನಜೀರ್ ಪೊಲ್ಯ ಹೇಳಿದರು. ನ.6 ರಂದು ಉಡುಪಿ ಸೃಷ್ಟಿ ಸಂಗೀತ ತರಬೇತಿ ಕೇಂದ್ರದಲ್ಲಿ ಚಾಣಕ್ಯ ಇನ್ಸಿಟ್ಯೂಟ್ ಆಫ್ ಮ್ಯೂಸಿಕ್ ಹೆಬ್ರಿ ಇದರ ನೇತೃತ್ವದಲ್ಲಿ ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ನಡೆಯಲಿರುವ […]

ವಿದ್ಯಾ ಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಮಾನವ ಹಕ್ಕು, ಸೈಬರ್ ಕ್ರೈಂ ಹಾಗೂ ಸಂಚಾರಿ ನಿಯಮಗಳ ಕುರಿತು ಮಾಹಿತಿ ಶಿಬಿರ

ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಮಾನವ ಹಕ್ಕುಗಳು ಹಾಗೂ ಸೈಬರ್ ಕ್ರೈಂ ಜಾಗೃತಿ ಹಾಗೂ ಸಂಚಾರಿ ನಿಯಮಗಳ ಕುರಿತು ಕಾರ್ಯಕ್ರಮವನ್ನು ನಡೆಸಲಾಯತು. ವಕೀಲರಾದ ಪ್ರೀತಿ ವೈ ಕುಂದಾಪುರ ಇವರು ಮಾನವ ಹಕ್ಕುಗಳ ಕುರಿತು ಸೂಕ್ತ ಮಾಹಿತಿಯನ್ನು ನೀಡಿದರು. ಬಿ ಚಂದ್ರ ಅಮೀನ್ ಮಾನವ ಹಕ್ಕುಗಳ ಕುರಿತಾಗಿ, ಸರ್ಕಲ್ ಇನ್ಸ್ಪೆಕ್ಟರ್ ಮಂಜುನಾಥ್ ಸೈಬರ್ ಕ್ರೈಂ ನ ಕುರಿತಾಗಿ, ವಕೀಲೆ ಬಿಂದು ತಂಗಪ್ಪ ಹಾಗೂ ದಯಾನಂದ ಶೆಟ್ಟಿ ಟ್ರಾಫಿಕ್ ನಿಯಮದ ಕುರಿತು ಮತ್ತು ಇತರೆ ಹತ್ತು ಹಲವು ವಿಷಯಗಳ ಕುರಿತು […]