ಉಡುಪಿ: ಕಳೆದ ಇಪತ್ನಾಲ್ಕು ವರ್ಷಗಳಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆಗೈದಿರುವ ತ್ರಿಶಾ ಸಂಸ್ಥೆಯು ಈ ಬಾರಿ ವಿಶೇಷವಾಗಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ವಿಕಸನ ಎನ್ನುವ ಏಳು ದಿನಗಳ ಉಚಿತ ಶಿಬಿರವನ್ನು ಆಯೋಜಿಸಿದೆ. ಈ ಶಿಬಿರವು ಅಕ್ಟೋಬರ್ 6 ರಿಂದ 12 ರವರೆಗೆ ನಡೆಯಲಿದೆ.
ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯನ್ನು ಕೇಂದ್ರವಾಗಿರಿಸಿಕೊಂಡು ಆಯೋಜಿಸಿರುವ ಈ ಶಿಬಿರದಲ್ಲಿ ಆಧುನಿಕತೆಯಲ್ಲಿ ವಿಜ್ಞಾನದ ಪಾತ್ರ, ವಾಣಿಜ್ಯ ಕ್ಷೇತ್ರದಲ್ಲಿನ ಅಪೂರ್ವ ಸಾಧ್ಯತೆಗಳು, ಒತ್ತಡ ನಿರ್ವಹಣೆ, ಬದುಕಿನಲ್ಲಿ ಕಲಾ ವೈವಿಧ್ಯಗಳ ಕೊಡುಗೆ, ಸಂಗೀತ, ಯಕ್ಷಗಾನ ಇನ್ನೂ ಮುಂತಾದ ಹಲವಾರು ವಿಚಾರಗಳ ಬಗ್ಗೆ ಆಯಾ ಕ್ಷೇತ್ರದಲ್ಲಿನ ನುರಿತ ತಜ್ಞರಿಂದ ಮಾಹಿತಿ ಕಾರ್ಯಗಾರ ನಡೆಯಲಿದೆ. ಅಲ್ಲದೆ ಥಿಯೇಟರ್ ಗೇಮ್ಸ್, ಒಂದು ದಿನದ ಇಂಡಸ್ಟ್ರಿಯಲ್ ವಿಸಿಟ್ ಹೀಗೆ ವಿವಿಧ ಮನೋರಂಜನಾ ಚಟುವಟಿಕೆಗಳು ಈ ಶಿಬಿರದಲ್ಲಿ ನಡೆಯಲಿವೆ.
ಶಿಬಿರದ ಪ್ರಮುಖಾಂಶಗಳು:
• ನುರಿತ ತಜ್ಞರಿಂದ ವಿವಿಧ ವಿಚಾರಗಳ ಕಾರ್ಯಗಾರ
• ಥಿಯೇಟರ್ ಗೇಮ್ಸ್, ಕ್ಯೂಬ್ ಗೇಮ್ಸ್ ಮೊದಲಾದ ಆಸಕ್ತಿದಾಯಕ ಚಟುವಟಿಕೆಗಳು
• ಒಂದು ದಿನದ ಇಂಡಸ್ಟ್ರಿಯಲ್ ವಿಸಿಟ್
• ಬೆಳಗ್ಗೆ 9 ರಿಂದ ಮಧ್ಯಾಹ್ನ 2 ರವರೆಗೆ
• ಉಚಿತ ಶಿಬಿರ
ಅಕ್ಟೋಬರ್ 6 ರಿಂದ ಈ ಶಿಬಿರವು ಆರಂಭವಾಗಲಿದ್ದು, ಹತ್ತನೇ ತರಗತಿಯ ಆಸಕ್ತ ವಿದ್ಯಾರ್ಥಿಗಳು ಉಡುಪಿಯಲ್ಲಿ ಇರುವ ಅನಂತ್ ಟವರ್ಸ್ ನ 4ನೇ ಮಹಡಿ ಯ ತ್ರಿಶಾ ಕ್ಲಾಸ್ಸಸ್ ಅನ್ನು ಸಂಪರ್ಕಿಸಿ ಈ ಶಿಬಿರದ ಸಂಪೂರ್ಣ ಲಾಭವನ್ನು ಪಡೆಯಬಹುದು.