ಭಾರತೀಯ ಬೌಲರ್ ವಿನೂ ಮಂಕಡ್ ಅವರ ಮಾಂಕಡಿಂಗ್ ತಂತ್ರದಿಂದ ಪಂದ್ಯ ಮತ್ತು ಭಾರತೀಯರ ಹೃದಯ ಗೆದ್ದ ದೀಪ್ತಿ ಶರ್ಮಾ

ಕ್ರಿಕೆಟ್ ಕ್ರೀಡೆಯಲ್ಲಿ, ಬೌಲರ್ ಬೌಲ್ ಮಾಡುವ ಅಂತಿಮ ಹಂತದಲ್ಲಿದ್ದಾಗ ನಾನ್-ಸ್ಟ್ರೈಕಿಂಗ್ ಬ್ಯಾಟ್ಸ್‌ಮನ್ ಕ್ರೀಸ್ ತೊರೆದು ಬ್ಯಾಕ್ ಅಪ್ ಮಾಡಿದಲ್ಲಿ ಬೌಲರ್ ಅವರನ್ನು ರನ್ ಔಟ್ ಮಾಡುವ ಪ್ರಕ್ರಿಯೆಯನ್ನು ಮಾಂಕಡಿಂಗ್ ಎನ್ನುತ್ತಾರೆ. 1948 ರ ಸಿಡ್ನಿ ಟೆಸ್ಟ್‌ನಲ್ಲಿ ಇದೇ ರೀತಿ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಬಿಲ್ ಬ್ರೌನ್ ಅವರನ್ನು ರನೌಟ್ ಮಾಡಿದ ಭಾರತೀಯ ಬೌಲರ್ ವಿನೂ ಮಾಂಕಡ್ ಅವರ ತಂತ್ರವನ್ನು ಕ್ರಿಕೆಟ್ ಜಗತ್ತಿನಲ್ಲಿ ಅವರದೇ ಹೆಸರಿನಿಂದ ಗುರುತಿಸಲಾಗುವುದು ಭಾರತೀಯರಿಗೆ ಹೆಮ್ಮೆ. ಒಬ್ಬ ಭಾರತೀಯ ಕ್ರಿಕೆಟಿಗನ ಇದೇ ತಂತ್ರವನ್ನು ಬಳಸಿ ಇನ್ನೊಬ್ಬಾಕೆ […]

ಸ್ಥಳೀಯ ಉತ್ಪನ್ನಗಳನ್ನು ಖರೀದಿಸಿ ಎಲ್ಲಾ ದಾಖಲೆಗಳನ್ನು ಮುರಿಯಿರಿ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ ಕರೆ

ನವದೆಹಲಿ: ಈ ಬಾರಿ ಹಬ್ಬಗಳಲ್ಲಿ ಖಾದಿ, ಕೈಮಗ್ಗ ಅಥವಾ ಕರಕುಶಲ ಉತ್ಪನ್ನಗಳ ಖರೀದಿಸಿ, ಹಬ್ಬದ ಖರೀದಿಯ ಎಲ್ಲಾ ದಾಖಲೆಗಳನ್ನು ಮುರಿಯಿರಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಕರೆ ನೀಡಿದ್ದಾರೆ. ದೇಶದಲ್ಲಿ ಸಾಲು ಸಾಲು ಹಬ್ಬಗಳು ಬರಲಿದ್ದು, ದಸರಾ, ಧನ್ ತೇರಸ್ ಮತ್ತು ದೀಪಾವಳಿ ಹಬ್ಬಗಳಲ್ಲಿ, ವೋಕಲ್ ಫಾರ್ ಲೋಕಲ್ ಅಭಿಯಾನದ ಭಾಗವಾಗಿ, ಸ್ಥಳೀಯ ಉತ್ಪನ್ನಗಳನ್ನು ಅತಿ ಹೆಚ್ಚು ಖರೀದಿಸುವ ಮೂಲಕ ಸ್ಥಳೀಯ ಉತ್ಪನ್ನಗಳ ತಯಾರಕರು ಮತ್ತು ಅದರ ಮಾರಾಟಗಾರರು ಕೂಡಾ ಹಬ್ಬದ […]

ತ್ರಿಶಾ ಸಮೂಹ ಸಂಸ್ಥೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ವಿಕಸನ ಶಿಬಿರ

ಉಡುಪಿ: ಕಳೆದ ಇಪತ್ನಾಲ್ಕು ವರ್ಷಗಳಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆಗೈದಿರುವ ತ್ರಿಶಾ ಸಂಸ್ಥೆಯು ಈ ಬಾರಿ ವಿಶೇಷವಾಗಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ವಿಕಸನ ಎನ್ನುವ ಏಳು ದಿನಗಳ ಉಚಿತ ಶಿಬಿರವನ್ನು ಆಯೋಜಿಸಿದೆ. ಈ ಶಿಬಿರವು ಅಕ್ಟೋಬರ್ 6 ರಿಂದ 12 ರವರೆಗೆ ನಡೆಯಲಿದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯನ್ನು ಕೇಂದ್ರವಾಗಿರಿಸಿಕೊಂಡು ಆಯೋಜಿಸಿರುವ ಈ ಶಿಬಿರದಲ್ಲಿ ಆಧುನಿಕತೆಯಲ್ಲಿ ವಿಜ್ಞಾನದ ಪಾತ್ರ, ವಾಣಿಜ್ಯ ಕ್ಷೇತ್ರದಲ್ಲಿನ ಅಪೂರ್ವ ಸಾಧ್ಯತೆಗಳು, ಒತ್ತಡ ನಿರ್ವಹಣೆ, ಬದುಕಿನಲ್ಲಿ ಕಲಾ ವೈವಿಧ್ಯಗಳ ಕೊಡುಗೆ, ಸಂಗೀತ, ಯಕ್ಷಗಾನ ಇನ್ನೂ ಮುಂತಾದ […]

ನಗರಾಭಿವೃದ್ಧಿ ಪ್ರಾಧಿಕಾರದ ವಿಶೇಷ ಸಭೆ: ಶಾಸಕ ರಘುಪತಿ ಭಟ್ ಭಾಗಿ

ಉಡುಪಿ: ನಗರಾಭಿವೃದ್ಧಿ ಪ್ರಾಧಿಕಾರದ ವಿಶೇಷ ಸಭೆ ಸೆ 24 ರಂದು ನಡೆಯಿತು. ಸಭೆಯಲ್ಲಿ ಉಡುಪಿ ಶಾಸಕ ಕೆ. ರಘುಪತಿ ಭಟ್ ಅವರು ಪಾಲ್ಗೊಂಡು ವಿವಿಧ ಯೋಜನೆಗಳನ್ನು ಕಾರ್ಯಗತಗೊಳಿಸುವ ಬಗ್ಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ್ ಕಲ್ಮಾಡಿ, ಸದಸ್ಯರುಗಳಾದ ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ಕಿಶೋರ್ ಕುಮಾರ್, ಸುಮಾ ನಾಯ್ಕ್, ಮಾಲತಿ ಸುಧಾಕರ್, ಯೋಗೀಶ್ ಚಂದ್ರಾಧರ್, ಉಡುಪಿ ನಗರ ಸಭೆಯ ಪೌರಾಯುಕ್ತ ಉದಯ್ ಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತಗುರುಪ್ರಸಾದ್, ನಗರ ಯೋಜನಾ ಸದಸ್ಯ ನವೀನ್ ಕುಮಾರ್, […]

ಜಗತ್ತಿನ ನಿದ್ದೆಗೆಡಿಸಿದೆ ಚೀನಾದ ನಿಗೂಢ ನಡೆ: ಕ್ಸಿ ಜಿನ್‌ಪಿಂಗ್ ನಾಪತ್ತೆ; ಊಹಾಪೋಹಗಳಿಗೆ ಎಡೆ

ಬೀಜಿಂಗ್: ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಾಪತ್ತೆಯಾಗಿರುವುದು ಚೀನಾದಲ್ಲಿ ಕ್ಷಿಪ್ರ ಕ್ರಾಂತಿ ನಡೆಯುತ್ತಿದೆಯೆ ಎಂಬ ಅನುಮಾನವನ್ನು ಜಗತ್ತಿನಾದ್ಯಂತ ಹುಟ್ಟು ಹಾಕಿದೆ. ತನ್ನ ಯಾವುದೇ ನಡೆಯ ಗುಟ್ಟು ರಟ್ಟು ಮಾಡದ ಚೀನಾ ಕಮ್ಯುನಿಸ್ಟ್ ಸರಕಾರದ ಈ ಅನುಮಾನಾಸ್ಪದ ವರ್ತನೆಯು ಜಗತ್ತಿನ ನಾಯಕರ ನಿದ್ದೆಗೆಡಿಸಿದೆ. ಈ ಬಗ್ಗೆ ಚೀನಾ ಕಡೆಯಿಂದ ಯಾವುದೇ ಮಾಹಿತಿ ಲಭ್ಯವಿಲ್ಲವಾಗಿದ್ದು, ಮುಗುಮ್ಮಾಗಿ ಕುಳಿತಿರುವ ರಾಷ್ಟ್ರದ ನಡೆ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ. ದೇಶದ 59% ರಷ್ಟು ವಿಮಾನಗಳನ್ನು ರದ್ದು ಮಾಡಿದ ಮತ್ತು ಹಿರಿಯ ಅಧಿಕಾರಿಗಳನ್ನು ಜೈಲಿಗಟ್ಟಿದ ಬಳಿಕ ಮಿಲಿಟರಿ […]