ವಿದ್ಯಾಲಕ್ಷ್ಮೀ ಕಾಲೇಜಿನ ಪ್ರಾಂಶುಪಾಲೆ ಸೀಮಾ ಜಿ ಭಟ್ ಅವರಿಗೆ ಡಾಕ್ಟರೇಟ್ ಪದವಿ

ಬ್ರಹ್ಮಾವರ: ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಕಾಲೇಜಿನ ಪ್ರಾಂಶುಪಾಲೆ ಸೀಮಾ ಜಿ ಭಟ್ ಅವರು ಸುಳ್ಯ ಕೆ.ವಿ.ಜಿ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಮ್ಯಾನೇಜ್ ಮೆಂಟ್ ನ ಎಂಬಿಎ ವಿಭಾಗದ ಪ್ರೊಫೆಸರ್ ಹಾಗೂ ಮುಖ್ಯಸ್ಥೆ ಡಾ. ಸುರೇಖಾ ಪ್ರದೀಪ್ ಪ್ರಭು ಅವರ ಮಾರ್ಗದರ್ಶನದಲ್ಲಿ ಸಲ್ಲಿಸಿರುವ ಮಹಾಪ್ರಬಂಧಕ್ಕೆ ಬೆಳಗಾವಿ ವಿಶ್ವೇಶರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ದೊರೆತಿದೆ.

“ಆರ್ಗನೈಜೇಷನಲ್ ಎರ್ಗೊನೊಮೊಕ್ಸ್ ಎಂಡ್ ಎಂಪ್ಲಾಯೀ ಸಾಟಿಸಿಫ್ಯಾಕ್ಷನ್ ಇಶ್ಯೂಸ್, ಇನ್ ಫ್ಯ್ಲೂಯೆನ್ಸಸ್ ಎಂಡ್ ಇನ್ಸೈಟ್ಸ್- ಎ ಸ್ಟಡಿ ವಿಥ್ ರೆಫೆರೆನ್ಸ್ ಟು ದ ಸೆಲೆಕ್ಟೆಡ್ ಸರ್ವಿಸ್ ಆರ್ಗನೈಜೇಷನ್ಸ್ ಇನ್ ಉಡುಪಿ ಡಿಸ್ಟ್ರಿಕ್ಟ್” ಎಂಬ ವಿಷಯದ ಬಗ್ಗೆ ಸಂಶೋಧನೆ ನಡೆಸಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಈ ಡಾಕ್ಟರೇಟ್ ಪದವಿ ಲಭಿಸಿದೆ.

ಹಲವಾರು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಕಾರ್ಯಗಾರಗಳಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿರುವ ಇವರು ಎಂಬಿಎ, ಎಂ.ಎ ಎಕನಾಮಿಕ್ಸ್, ಎಂ.ಎಸ್.ಡಬ್ಲ್ಯೂ, ಮಾಸ್ಟರ್ ಇನ್ ಮಾರ್ಕೆಂಟಿಂಗ್ ಮ್ಯಾನೇಜ್ಮೆಂಟ್, ಎಂ.ಫಿಲ್ ಪದವಿಯನ್ನೂ ಪಡೆದಿದ್ದಾರೆ.

ವಿದ್ಯಾಲಕ್ಷ್ಮಿ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಸುಬ್ರಹ್ಮಣ್ಯ ಮತ್ತು ಸಂಸ್ಥೆಯ ನಿರ್ದೇಶಕಿ ಆಗಿರುವ ಮಮತಾ ಇವರು ಸಹಕಾರ, ಸಲಹೆ-ಸೂಚನೆಗಳನ್ನು ನೀಡಿದ್ದಾರೆ.

ಸುರತ್ಕಲ್ ನ ಎನ್.ಐ.ಟಿ.ಕೆಯಲ್ಲಿ ಸೂಪರ್ವೈಸರ್ ಆಗಿರುವ ಕೆ ಗಣಪತಿ ಭಟ್ ಅವರ ಪತ್ನಿ ಸೀಮಾ ಪ್ರಸ್ತುತ ಚಾಂತಾರು ಗ್ರಾಮದ ಅಶ್ವಿನಿ ನಿವಾಸದಲ್ಲಿ ವಾಸವಾಗಿದ್ದಾರೆ. ಮಗಳು ಪ್ರಿಯಾಂಕಾ ಭಟ್ ಅಮೆಜಾನ್ ಕಂಪನಿಯಲ್ಲಿ ಐಟಿ ಮ್ಯಾನೇಜರ್ ಆಗಿದ್ದಾರೆ.