ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳಲಿದ್ದಾರೆ ನಟಿ ಹರಿಪ್ರಿಯಾ

ನಟಿ ಹರಿಪ್ರಿಯಾ ಕೈನಲ್ಲಿ ಈಗ ಮೂರ್ನಾಕ್ಕು ಸಿನಿಮಾಗಳಿವೆ. ಭಿನ್ನ, ವಿಭಿನ್ನ ಪಾತ್ರಗಳನ್ನ ಮಾಡುತ್ತಿರುವ ಅವರ ಪಾಲಿಗೆ ಈಗ ಮತ್ತೊಂದು ಸಿನಿಮಾ ಬರುತ್ತಿದೆ.


ಇದೀಗ ಐತಿಹಾಸಿಕ ಚಿತ್ರದಲ್ಲಿ ಹರಿಪ್ರಿಯಾ ಕಾಣಿಸಿಕೊಳಲಿದ್ದಾರೆ. ಈ ಹಿಂದೆ ಕೆಲ ಸಂದರ್ಶನಗಳಲ್ಲಿ ಹರಿಪ್ರಿಯಾ ತಮಗೆ ಐತಿಹಾಸಿಕ ಸಿನಿಮಾ ಮಾಡುವ ಆಸೆ ಇದೆ ಎಂದು ಹೇಳಿಕೊಂಡಿದ್ದು, ಈಗ ಆ ಬಯಕೆ ಈಡೇರುವ ಸಮಯ ಬಂದಿದೆ. ಹರಿ ಸಂತೋಷ ನಿರ್ದೇಶನದ ಹೊಸ ಚಿತ್ರಕ್ಕೆ ಹರಿಪ್ರಿಯಾ ಆಯ್ಕೆಯಾಗುವ ಸಾಧ್ಯತೆ ಇದೆ 
ಎಂದು ಕೇಳಿ ಬರುತ್ತಿದೆ.

‘ವಿಕ್ಟರಿ 2’ ಬಳಿಯ ಹರಿ ಸಂತೋಷ್ ಒಂದು ಐತಿಹಾಸಿಕ ಸಿನಿಮಾ ಮಾಡುವ ಪ್ಲಾನ್ ಮಾಡಿದ್ದಾರೆ. ಬಿಎಲ್ ವೇಣು ಅವರ ‘ರಾಜಾ ಬಿಚ್ಚುಗತ್ತಿ ಭರಮಣ್ಣ ನಾಯಕ’ ಕಾದಂಬರಿ ಆಧಾರಿತ ಸಿನಿಮಾ ಮಾಡುವ ತಯಾರಿಯಲ್ಲಿ ಅವರಿದ್ದಾರೆ.