ಉಡುಪಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಉಪಯೋಜನೆ ಅಡಿ ಯುವ ಜನರನ್ನು ಸ್ವಾವಲಂಬಿಯನ್ನಾಗಿಸಲು ಜನವರಿ 24 ರಿಂದ ಫೆಬ್ರವರಿ 7 ರವರೆಗೆ ಈ ಕೆಳಗಿನಂತೆ ವಿವಿಧ ತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದ್ದು, ಅರ್ಹ ಆಸಕ್ತ ಯುವಕ ಹಾಗೂ ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.
15 ರಿಂದ 29 ವರ್ಷ ಒಳಗಿನ ಪದವಿ ಮತ್ತು ಜರ್ನಲಿಸಂ ವಿದ್ಯಾರ್ಹತೆ ಹೊಂದಿರುವ ಯುವಕ-ಯುವತಿಯರಿಗೆ ಜನವರಿ 31 ರಿಂದ ಫೆಬ್ರವರಿ 7 ರ ವರೆಗೆ ನಿರೂಪಣಾ ಮತ್ತು ವಾರ್ತಾವಾಚಕರ ತರಬೇತಿ, ದ್ವಿತೀಯ ಪಿ.ಯು.ಸಿ ವಿದ್ಯಾರ್ಹತೆ ಹೊಂದಿರುವವರಿಗೆ ಜ. 27 ರಿಂದ ಫೆ. 7 ರ ವರೆಗೆ ವಿಡಿಯೋಗ್ರಾಫೀ ತರಬೇತಿ ಮತ್ತು ಎಸ್.ಎಸ್.ಎಲ್.ಸಿ (ಪಾಸ್ ಅಥವಾ ಫೇಲ್) ವಿದ್ಯಾರ್ಹತೆ ಹೊಂದಿರುವ ಯುವಕ-ಯುವತಿಯರಿಗೆ ಜ. 26 ರಿಂದ ಫೆ. 7 ರ ವರೆಗೆ ಬ್ಯೂಟಿಷನ್ ತರಬೇತಿ ಹಾಗೂ 16 ರಿಂದ 30 ವರ್ಷದೊಳಗಿನ ದ್ವಿತೀಯ ಪಿ.ಯು.ಸಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಜ. 24 ರಿಂದ ಫೆ. 7 ರ ವರೆಗೆ ಜಿಮ್ ಮತ್ತು ಫಿಟ್ನೆಸ್ ತರಬೇತಿಯನ್ನು ನೀಡಲಾಗುವುದು.
ಅರ್ಜಿ ಸಲ್ಲಿಸಲು ಜನವರಿ 20 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಅಜ್ಜರಕಾಡು, ಉಡುಪಿ ದೂ.ಸಂಖ್ಯೆ: 0820-2521324 ಮೊ.ಸಂಖ್ಯೆ:9480886467 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಚೇರಿ ಪ್ರಕಟಣೆ ತಿಳಿಸಿದೆ.