ಉಡುಪಿ ಪರ್ಯಾಯ ಮಹೋತ್ಸವಕ್ಕೆ ಪುತ್ತಿಗೆ ಶ್ರೀಯವರ ಭವ್ಯ ಪುರಪ್ರವೇಶ, ಅದ್ದೂರಿಯ ಪೌರಸಮ್ಮಾನ ಸಮಾರಂಭ

ಉಡುಪಿ: ಶ್ರೀಕೃಷ್ಣ – ಮುಖ್ಯಪ್ರಾಣದೇವರಿಗೆ ಮುಂದಿನ ಎರಡು ವರುಷಗಳ ಕಾಲ ತಮ್ಮ ಕರಕಮಲಗಳಿಂದ ಪೂಜೆಯನ್ನು ನೆರವೇರಿಸಲಿರುವ ಶ್ರೀಪುತ್ತಿಗೆ ಮಠಾಧೀಶರಾದ ಶ್ರೀಸುಗುಣೇಂದ್ರ ತೀರ್ಥಶ್ರೀಪಾದರು ತಮ್ಮ ಶಿಷ್ಯರಾದ ಶ್ರೀಸುಶ್ರೀಂದ್ರ ತೀರ್ಥಪಾದರೊಂದಿಗೆ ಎಲ್ಲಾ ತೀರ್ಥಕ್ಷೇತ್ರ ಸಂದರ್ಶನ ಮುಗಿಸಿ ಇಂದು (ಸೋಮವಾರದಂದು) ಸಾಯಂಕಾಲ ಉಡುಪಿ ನಗರಕ್ಕೆ ಆಗಮಿಸುವುದರೊಂದಿಗೆ ಪುರಪ್ರವೇಶವನ್ನು ಗೈದರು. ಉಡುಪಿಗೆ ಆಗಮಿಸಿದ ಯತಿದ್ವಯರನ್ನು ಜಿಲ್ಲಾಧಿಕಾರಿಗಳು, ಪರ್ಯಾಯ ಸ್ವಾಗತ ಸಮಿತಿಯವರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸಚಿವರು, ಜನಪ್ರತಿನಿಧಿಗಳು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಸೇರಿದ ಗಣ್ಯರು, ಅಭಿಮಾನಿಗಳು ಹೂವಿನಹಾರ-ಫಲಪುಷ್ಪವನ್ನು ನೀಡಿ ಗೌರವಿಸಿದರು. ಜೋಡುಕಟ್ಟೆಯಲ್ಲಿ […]

ಕರಾವಳಿ ಜಂಕ್ಷನ್‌ನಿಂದ ಮಲ್ಪೆವರೆಗಿನ ಹೆದ್ದಾರಿ ಕಾಮಗಾರಿಯನ್ನು ಶೀಘ್ರದಲ್ಲಿಯೇ ಪ್ರಾರಂಭಿಸಿ: ಸಚಿವೆ ಶೋಭಾ ಕರಂದ್ಲಾಜೆ

ಉಡುಪಿ: ಕರಾವಳಿ ಜಂಕ್ಷನ್‌ನಿಂದ ಮಲ್ಪೆವರೆಗಿನ ಹೆದ್ದಾರಿ ಕಾಮಗಾರಿಗೆ ಅಗತ್ಯವಿರುವ ಭೂ ಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಿ, ರಸ್ತೆ ಕಾಮಗಾರಿಯನ್ನು ತ್ವರಿತವಾಗಿ ಪ್ರಾರಂಭಿಸಬೇಕು ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.     ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ 66, 169 ಹಾಗೂ 169 ಎ ಗೆ ಸಂಬಂಧಿಸಿದಂತೆ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.    ಮೀನುಗಾರಿಕೆ ಚಟುವಟಿಕೆ ವಾಹನಗಳು […]

ಹಿರಿಯಡಕ: ನಾಯಿ ಅಡ್ಡ ಬಂದು ಬೈಕ್ ಸವಾರ ಮೃತ್ಯು.

ಹಿರಿಯಡಕ: ಉಡುಪಿ ಜಿಲ್ಲೆಯ ಹಿರಿಯಡಕ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರು ಬೈಕ್ ನಲ್ಲಿ ಹೋಗುತ್ತಿರುವಾಗ ನಾಯಿ ಅಡ್ಡ ಬಂದ ಕಾರಣ ರಸ್ತೆಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟವರು ಮಂಜುನಾಥ್ ಎಂದು ತಿಳಿದು ಬಂದಿದೆ. ಈ ಘಟನೆ ಸ್ಥಳಕ್ಕೆ ಹಿರಿಯಡಕ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ವಿವರ: ದಿನಾಂಕ: 07/01/2024 ರಂದು ಸಂಜೆ 6:15 ಗಂಟೆ ಸಮಯಕ್ಕೆ ಶ್ರೀಮತಿ ಸವಿತಾ ರವರ ಗಂಡ ಮಂಜುನಾಥ್ (41 ವರ್ಷ) ಕಣಜಾರು ಗ್ರಾಮದ ಸಾಗು ಗುಡ್ಡೆಅಂಗಡಿ-ಕಣಜಾರು ರಸ್ತೆಯಲ್ಲಿ ಗುಡ್ಡೆಅಂಗಡಿಯಿಂದ […]

ಉಡುಪಿ ಪರ್ಯಾಯ ಮಹೋತ್ಸವಕ್ಕೆ ತಡೆ ಕೋರಿ ಸಲ್ಲಿಸಿದ್ದ ಪಿಐಎಲ್ ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್

ಬೆಂಗಳೂರು: ಉಡುಪಿಯ ಅಷ್ಟ ಮಠಗಳ ಪರ್ಯಾಯ ಮಹೋತ್ಸವಕ್ಕೆ (Udupi Sri Krishna Matha) ತಡೆ ನೀಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ. ಈ ಬಾರಿಯ ಪರ್ಯಾಯ ಪೀಠವನ್ನು ಪುತ್ತಿಗೆ ಶ್ರೀಗಳು ನಿರ್ವಹಿಸಲಿದ್ದಾರೆ. ಅವರು ಸಮುದ್ರೋಲ್ಲಂಘನೆ ಮಾಡಿ ವಿದೇಶಕ್ಕೆ ಪ್ರಯಾಣಿಸಿ ಸಂಪ್ರದಾಯ ಉಲ್ಲಂಘಿಸಿದ ಕಾರಣ ಅವರಿಗೆ ಪರ್ಯಾಯ ನೀಡದಂತೆ ಕೋರಿ ಗುರುರಾಜ ಜೀವನರಾವ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ಕುರಿತು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ […]

ಪುತ್ತಿಗೆ ಪರ್ಯಾಯ: ಪುತ್ತಿಗೆ ಸ್ವಾಮೀಜಿಗಳ ಪುರಪ್ರವೇಶಕ್ಕೆ ಕ್ಷಣಗಣನೆ; ಮಂಗಳೂರಿನಲ್ಲಿ ಪೌರ ಸನ್ಮಾನ ಸಂಪನ್ನ

ಉಡುಪಿ: ಶ್ರೀಕೃಷ್ಣ ಮಠದ ಭಾವೀ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳು ಶಿಷ್ಯ ಶ್ರೀ ಸುಶ್ರೀಂದ್ರತೀರ್ಥ ಸ್ವಾಮೀಜಿಗಳ ಜತೆಗೂಡಿ ಇಂದು ಪುರಪ್ರವೇಶ ಮಾಡುವರು. ಜೋಡುಕಟ್ಟೆಯಿಂದ ಕೃಷ್ಣಮಠದವರೆಗೆ ಸಾಂಪ್ರದಾಯಿಕ ಮೆರವಣಿಗೆ ಮೂಲಕ ಶ್ರೀಪಾದರನ್ನು ಬರಮಾಡಿಕೊಳ್ಳಲಾಗುತ್ತದೆ. ರಾತ್ರಿ 7ಕ್ಕೆ ರಥಬೀದಿ ಅನಂದತೀರ್ಥ ಮಂಟಪದಲ್ಲಿ ಶ್ರೀಪಾದರಿಗೆ ಪೌರಸಮ್ಮಾನ ಜರಗಲಿದೆ. ಇದೇ ವೇದಿಕೆಯಲ್ಲಿ ಸಂಜೆ 4ರಿಂದ 7ರ ವರೆಗೆ ಮಾರುತಿ ಅರ್ಜುನ್‌ ಗಣಾಚಾರಿ ಮತ್ತು ಬಳಗದಿಂದ ಭಜನೆ, ಅಣ್ಣು ದೇವಾಡಿಗ, ಧರ್ಮಸ್ಥಳ ಮತ್ತು ಬಳಗ ನಾದಸ್ವರ ವಾದನ ನಡೆಯಲಿದೆ. ಮಂಗಳೂರಿನಲ್ಲಿ […]