ಪೆಲತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ‘ಬ್ರಹ್ಮಕಲಶೋತ್ಸ’ ಪ್ರಯುಕ್ತ ದೇಗುಲದಲ್ಲಿ ನಡೆದ ವಿವಿಧ ಹೋಮಗಳು

ಉಡುಪಿ: ಕಾರ್ಕಳ ತಾಲೂಕಿನ ಪೆಲತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಶ್ರೀ ಮಹಾಲಿಂಗೇಶ್ವರ ಶ್ರೀ ಮಹಾಗಣಪತಿ, ಶ್ರೀ ಭದ್ರಕಾಳಿ ದೇವರಿಗೆ ಮೇ.25 ರ ವರೆಗೆ ಬ್ರಹ್ಮಕಲಶೋತ್ಸವ ನಡೆಯಲ್ಲಿದ್ದು, ಮೇ.24 ರಂದು ಬ್ರಹ್ಮಕುಂಭಾಭಿಷೇಕ ನಡೆಯಲಿದೆ.

ಆ ಪ್ರಯುಕ್ತ ದೇಗುಲದಲ್ಲಿ ಮೇ 22ರ ಬೆಳಿಗ್ಗೆ ಗಂಟೆ 8.00ರಿಂದ ಗಣಪತಿ ಹೋಮ, ಶ್ರೀ ಭದ್ರಕಾಳಿ ದೇವಿಗೆ ಶಾಂತಿ ಪ್ರಾಯಶ್ಚಿತ್ತ ಹೋಮ, ಚಂಡಿಕಾ ಹೋಮ, 108 ಕಲಶ ಸಹಿತ ಮಹಾ ಮಂತ್ರ ಹೋಮ, ಕಲಶಾಭಿಷೇಕ, ಮಹಾಪೂಜೆ 9 ಆವರ್ತನ ಸಪ್ತಶತಿ ಪಾರಾಯಣ, 10,001 ಸಂಖ್ಯೆಯಲ್ಲಿ ನವ ಕ್ಷರಿ ಮಂತ್ರ ಜಪ ಹಾಗೂ ಮಧ್ಯಾಹ್ನ ಅನ್ನ ಸಂತರ್ಪಣೆ, ಸಂಜೆ ಗಂಟೆ 5:30 ರಿಂದ ಶ್ರೀ ದೇವರಿಗೆ ಶಾಂತಿ ಹೋಮ, ಪ್ರಾಯಶ್ಚಿತ ಹೋಮ ಹಾಗೂ ದಿಶಾ ಹೋಮಗಳು ಧಾರ್ಮಿಕ ಕಾರ್ಯಕ್ರಮ ವಿಧಿ ವಿಧಾನದ ಪ್ರಕಾರ ನಡೆಯಿತು.

ಹಾಗೂ ಊರ ಭಕ್ತರಿಂದ ನೃತ್ಯ ವೈಭವ ಕಾರ್ಯಕ್ರಮ, ನೃತ್ಯ ನಿಕೇತನ ಕೊಡವೂರು ಕಲಾವಿದರಿಂದ ನೃತ್ಯ ಸಿಂಚನ ಹಾಗೂ ಯಕ್ಷಗಾನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.