ಕೊನೆಗೂ ಹೊಂಬಾಳೆ ಫಿಲಂಸ್ ವರಾಹರೂಪಂ ಹಾಡಿನ ಮೇಲೆ ನಡೆಯುತ್ತಿದ್ದ ಕೇಸ್ ಅನ್ನು ಗೆದ್ದಿದೆ. ಕೇರಳ ನ್ಯಾಯಾಲಯದಲ್ಲಿ ಕಾನೂನು ಹೋರಾಟದಲ್ಲಿ ಜಯಗಳಿಸಿದ ನಂತರ ನವೆಂಬರ್ 25 ರಂದು ಹಾಡಿನ ಮೇಲೆ ನಿಷೇಧವನ್ನು ತೆಗೆದುಹಾಕಲಾಗಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ರಿಷಭ್ ಶೆಟ್ಟಿ, “ದೈವಾನು ದೈವಗಳ ಆಶೀರ್ವಾದ ಹಾಗೂ ಜನರ ಅಭಿಮಾನದಿಂದ ವರಾಹರೂಪಂ ಕೇಸ್ ಗೆದ್ದಿದ್ದೇವೆ. ಜನರ ಕೋರಿಕೆಯನ್ನು ಪರಿಗಣಿಸಿ ಅತಿ ಶೀಘ್ರದಲ್ಲಿ ಒಟಿಟಿ ನಲ್ಲಿ ಹಾಡನ್ನು ಬದಲಾಯಿಸಲಿದ್ದೇವೆ” ಎಂದಿದ್ದಾರೆ.
ಅಂತೂ ಪ್ರೇಕ್ಷಕರ ಮೆಚ್ಚಿನ ವರಾಹರೂಪಂ ಹಾಡು ಮರಳಿ ಕಾಂತಾರವನ್ನು ಸೇರಿಕೊಂಡಿದೆ. ವರಾಹರೂಪಂ ಇಲ್ಲದ ಕಾಂತಾರವನ್ನು ಊಹಿಸಲು ಸಾಧ್ಯವಿಲ್ಲ ಎಂದು ಅಭಿಮಾನಿಗಳು ಅಲವತ್ತುಕೊಂಡಿದ್ದರು. ಈಗ ಅಭಿಮಾನಿಗಳ ಕೋರಿಕೆಯಂತೆ ವರಾಹರೂಪಂ ಹಾಡು ಒಟಿಟಿಗೆ ಶೀಘ್ರ ಬರಲಿದೆ ಎಂದು ಚಿತ್ರದ ನಿರ್ದೇಶಕ ಹೇಳಿಕೊಂಡಿದ್ದಾರೆ.
ಹಾಡಿನ ಮೂಲ ಗಾಯಕ ಸಾಯಿ ವಿಗ್ನೇಶ್ ಇಂಡಿಯಾ ಗ್ಲಿಟ್ಜ್ ತಮಿಳು ಮಾಧ್ಯಮಕ್ಕೆ ಸಂದರ್ಶನ ನೀಡಿರುವಾಗ ಹಾಡಿದ ಹಾಡಿನ ತುಣುಕು.
This song is a blessing✨❤️Sharing a snippet from my recent interview for @igtamil .
.
.
Do check out the full interview with this link : https://t.co/k7H1oLTwXu
.
.#VarahaRoopam #singersaivignesh #KantaraTheLegend #onlyvoice pic.twitter.com/4Ovx18JayI— Sai Vignesh (@saivigneshsings) November 30, 2022