ವಂಡ್ಸೆ ಬ್ಲಾಕ್ ಕಾಂಗ್ರೆಸ್ ಸಮಿತಿ: ಅಧ್ಯಕ್ಷರಾಗಿ ಕಾವ್ರಾಡಿ ಪ್ರದೀಪ್‍ಕುಮಾರ ಶೆಟ್ಟಿ.

ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರದ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ನಿಯುಕ್ತರಾಗಿರುವ ಕಾವ್ರಾಡಿ ಪ್ರದೀಪ್ ಕುಮಾರ ಶೆಟ್ಟಿ ಅವರು ಬುಧವಾರ ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜನಾರ್ಧನ್ ತೋನ್ಸೆ ಅವರಿಂದ ಅಧಿಕಾರ ಸ್ವೀಕರಿಸಿದ್ದಾರೆ.

ಬೈಂದೂರು ಕ್ಷೇತ್ರದ ಮಾಜಿ ಶಾಸಕರಾದ ಕೆ.ಗೋಪಾಲ ಪೂಜಾರಿ ಅವರ ಶಿಫಾರಾಸಿನನ್ವಯ ಈ ನೇಮಕಾತಿ ನಡೆದಿದೆ. ಹಿಂದೆ ತಾಲ್ಲೂಕು ಪಂಚಾಯಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಪ್ರದೀಪ್‍ಶೆಟ್ಟಿ ರಾಜಕೀಯ ಕ್ಷೇತ್ರವಲ್ಲದೆ, ಸಹಕಾರಿ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿಯೂ ಸಕ್ರೀಯರಾಗಿದ್ದಾರೆ.

ಅಧಿಕಾರ ಸ್ವೀಕಾರ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಸ್.ರಾಜು ಪೂಜಾರಿ, ಕೆಪಿಸಿಸಿ ಸದಸ್ಯ ಬಿ.ರಘುರಾಮ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳಾದ ನರಸಿಂಹಮೂರ್ತಿ, ದೇವಾನಂದ ಶೆಟ್ಟಿ ಹಳ್ನಾಡು, ಸಂತೋಷ್ ಶೆಟ್ಟಿ ಹಕ್ಲಾಡಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನ್ ಕುಮಾರ ಉಪ್ಪುಂದ, ತಾಲ್ಲೂಕು ಪಂಚಾಯಿತಿ ಸದಸ್ಯ ವಾಸುದೇವ ಪೈ ಸಿದ್ದಾಪುರ, ವಾಸುದೇವ ಯಡಿಯಾಳ, ಚಂದ್ರಶೇಖರ ಪೂಜಾರಿ ಆರಾಟೆ, ವಿಜಯ್‍ಎಸ್‍ಪುತ್ರನ್, ಉದಯ್‍ಕುಮಾರ ಶೆಟ್ಟಿ ವಂಡ್ಸೆ, ಸದಾಶಿವ ಶೆಟ್ಟಿ ಶಂಕರನಾರಾಯಣ, ಸುಧಾಕರ ಶೆಟ್ಟಿ ಸಿದ್ದಾಪುರ, ಸತೀಶ್‍ಶೆಟ್ಟಿ ಕಡ್ರಿ ಇದ್ದರು.