ಲಸಿಕೆ ತಗೊಂಡ ಮೇಲೆ ಸಣ್ಣಗೆ ಜ್ವರ ಮೈ ಕೈ ನೋವು ಬಂದಿದ್ದರೆ ಈ ತರಕಾರಿ ತಿನ್ನಿ!

ಲಸಿಕೆ ಹಾಕಿಸಿಕೊಂಡ ನಂತರ ಜ್ವರ ಬರುವುದು, ದೇಹದಲ್ಲಿ ನೋವು ಕಾಣಿಸಿಕೊಳ್ಳುತ್ತದೆ ಎನ್ನುವುದು ಬಹುತೇಕ ಮಂದಿಯ  ಸ್ವಂತ ಅಭಿಪ್ರಾಯ. ಈ ಎಲ್ಲ ಅಡ್ಡಪರಿಣಾಮಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಇಲ್ಲಿದೆ ಕೆಲವು ಟಿಪ್ಸ್. ತಜ್ಞರು  ಈ ಸಂದರ್ಭದಲ್ಲಿ ನೀವು ತಿನ್ನಲೇಬೇಕಾದ ತರಕಾರಿಗಳ ಮಾಹಿತಿ ನೀಡಿದ್ದಾರೆ ಅವ್ಯಾವುದೆಂದು ನೋಡಿ

ಹಸಿರು ತರಕಾರಿಗಳು : ನಮ್ಮ ಆಹಾರದಲ್ಲಿ ಹಸಿರು ಸೊಪ್ಪು ತರಕಾರಿಗಳನ್ನು ಸೇವಿಸಬೇಕು ಇದರಲ್ಲಿ ಹೆಚ್ಚಿನ ಪ್ರಮಾಣದ ಆಂಟಿ-ಆಕ್ಸಿಡೆಂಟ್ ಕಂಡುಬರುತ್ತದೆ, ಇದು ದೇಹದಲ್ಲಿನ ಸೋಂಕನ್ನು ಕಡಿಮೆ ಮಾಡುತ್ತದೆ.

ಹಸಿರು ತರಕಾರಿಗಳ ಸೂಪ್ : ಹಸಿರು ತರಕಾರಿಗಳ ಸೂಪ್ ತಯಾರಿಸಿ ಸೇವಿಸುವುದರಿಂದ ದೇಹಕ್ಕೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದಲ್ಲದೆ, ಈ ಸೂಪ್‌ಗಳಲ್ಲಿ ವಿವಿಧ ಮಸಾಲೆ ಪದಾರ್ಥಗಳನ್ನು ಸಹ ಬಳಸಲಾಗುತ್ತದೆ, ಈ ಕಾರಣದಿಂದಾಗಿ ಈ ಸೂಪ್‌ಗಳನ್ನು ಸೇವಿಸುವ ಮೂಲಕ ಸೋಂಕಿನ ವಿರುದ್ಧ ಹೋರಾಡಲು ಸಹ ಸಹಾಯವಾಗುತ್ತದೆ.

ಈರುಳ್ಳಿ ಮತ್ತು ಬೆಳ್ಳುಳ್ಳಿ : ಪ್ರೋಬಯಾಟಿಕ್‌ಗಳು ಈರುಳ್ಳಿ ಮತ್ತು ಬೆಳ್ಳುಳ್ಳಿಯಲ್ಲಿ ಕಂಡುಬರುತ್ತವೆ, ಇದನ್ನು ಆಡು ಭಾಷೆಯಲ್ಲಿ ಉತ್ತಮ ಬ್ಯಾಕ್ಟೀರಿಯಾ ಎಂದೂ ಕರೆಯುತ್ತಾರೆ. ಇವು ನಮ್ಮ ದೇಹಕ್ಕೆ ಅತ್ಯಂತ ಪ್ರಯೋಜನಕಾರಿ. ಆದ್ದರಿಂದ ನೀವು ಸೇವಿಸುವ ಆಹಾರದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಬಳಸಿ.

ಅರಿಶಿನ : ಅರಿಶಿನವು ಸೋಂಕು ನಿರೋಧಕ ಮತ್ತು ಒತ್ತಡ ನಿರೋಧಕ ಗುಣಗಳನ್ನು ಹೊಂದಿದೆ. ಈ ಸಹಾಯದಿಂದ ಇದು ದೇಹಕ್ಕೆ ತುಂಬಾ ಸಹಾಯಕಾರಿಯಾಗಿದೆ.

ಬೆರಿ ಹಣ್ಣು : ಉರಿಯೂತದ ಸಮಸ್ಯೆಗಳಿಗೆ ನೀಲಿ ಬೆರಿ ಹಣ್ಣು ಬಹಳ ಉತ್ತಮವಾಗಿದೆ. ಇದು ದೇಹವನ್ನು ಸೋಂಕಿನಿಂದ ರಕ್ಷಿಸುತ್ತದೆ. ನೀಲಿ ಬೆರಿಯಲ್ಲಿ ಆಂಟಿ-ಆಕ್ಸಿಡೆಂಟ್ ಅಂಶ ಕಂಡುಬರುತ್ತದೆ ಮತ್ತು ದೇಹದಲ್ಲಿ ಸಿರೊಟೋನಿನ್ ಮಟ್ಟವನ್ನು ಹೆಚ್ಚಿಸುತ್ತದೆ.

ಈ ಮೇಲಿನ ಐದು ಆಹಾರಗಳನ್ನು ನಿಮ್ಮ ಊಟದಲ್ಲಿ ಸೇವಿಸುವುದರಿಂದ. ನಿಮ್ಮ ದೇಹವು ಕೊರೋನಾ ಲಸಿಕೆಯ ಅಡ್ಡಪರಿಣಾಮಗಳ ವಿರುದ್ಧ ಹೋರಾಡುತ್ತದೆ. ವಿಶೇಷವೆಂದರೆ, ಮೇಲೆ ತಿಳಿಸಿದ ಎಲ್ಲಾ ಆಹಾರಗಳು ನಮ್ಮ ಅಡುಗೆಮನೆಯಲ್ಲಿ ಸುಲಭವಾಗಿ ಸಿಗುತ್ತವೆ. ಆದ್ದರಿಂದ, ಇಂದಿನಿಂದಲೇ ನಿಮ್ಮ ಆಹಾರದಲ್ಲಿ ಮೇಲಿನವುಗಳನ್ನು ಸೇವಿಸಿ.