ನವದೆಹಲಿ: ಕೊರೊನಾ ಲಸಿಕೆ ನೀತಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.
2021ರ ಅಂತ್ಯಕ್ಕೆ ಎಲ್ಲರಿಗೂ ಲಸಿಕೆ ನೀಡುವ ಕೇಂದ್ರದ ಘೋಷಣೆಗೆ ತಕ್ಕಂತೆ ಯಾವುದೇ ಪೂರಕ ತಯಾರಿ ಇಲ್ಲ ಎಂದು ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಕೋವಿನ್ ಆ್ಯಪ್ ಸಮಸ್ಯೆ, ಲಸಿಕೆ ದರದಲ್ಲಿ ತಾರತಮ್ಯ, ಲಸಿಕೆ ಕೊರತೆ ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಿದ ನ್ಯಾಯಾಲಯ ಸಮಸ್ಯೆಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವಂತೆ ಖಡಕ್ ಸೂಚನೆಕೊಟ್ಟಿದೆ.
ಇನ್ನು ಲಸಿಕೆಗಳಿಗೆ ಏಕರೂಪದ ಬೆಲೆ ನಿಗದಿಪಡಿಸುವಂತೆ ಸೂಚಿಸಿದ್ದು, ಲಸಿಕೆ ಖರೀದಿ ನೀತಿ ಕುರಿತು ಪ್ರತಿಕ್ರಿಯೆ ನೀಡುವಂತೆಯೂ ತಿಳಿಸಿದೆ.