ಯುಪಿಎಸ್‌ಸಿ ಅಧಿಸೂಚನೆ: 71 ಆಫೀಸರ್​ ಹುದ್ದೆಗಳ ನೇಮಕಾತಿ

ಒಟ್ಟು 71 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಕೇಂದ್ರ ಸರ್ಕಾರಿ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು
ಕೇಂದ್ರ ಲೋಕ ಸೇವಾ ಆಯೋಗವು (ಯುಪಿಎಸ್‌ಸಿ) ಕಾಲಕಾಲಕ್ಕೆ ವಿವಿಧ ಅಧಿಕಾರಿಗಳ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸುತ್ತದೆ. ಇದೀಗ ಆಡಳಿತಾತ್ಮಕ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ.
.
ವಿದ್ಯಾರ್ಹತೆ ಏನು?

ಲೀಗಲ್​ ಆಫೀಸರ್​ ಹುದ್ದೆಗೆ ಕಾನೂನು ಪದವಿ.
ಸೈಂಟಿಫಿಕ್​ ಆಫೀಸರ್​ ಹುದ್ದೆಗೆ ರಸಾಯನ ಶಾಸ್ತ್ರ, ಮೈಕ್ರೋಬಯೋಲಾಜಿಯಲ್ಲಿ ಸ್ನಾತಕೋತ್ತರ ಪದವಿ.
ಡೆಪ್ಯೂಟಿ ಆರ್ಕಿಟೆಕ್ಟ್​​: ಆರ್ಕಿಟೆಕ್​ನಲ್ಲಿ ಪದವಿ
ಸೈಂಟಿಸ್ಟ್​ ಬಿ (ಬ್ಯಾಲಿಸ್ಟಿಕ್ಸ್​): ಭೌತಶಾಸ್ತ್ರ, ಗಣಿತ, ಅಪ್ಲೈಡ್​ ಮ್ಯಾಥಮ್ಯಾಟಿಕ್ಸ್​, ಫಾರೆನ್ಸಿಕ್​ ಸೈನ್ಸ್​ನಲ್ಲಿ ಸ್ನಾತಕೋತ್ತರ ಪದವಿ.
ಸೈಂಟಿಸ್ಟ್​​ ಬಿ (ದಾಖಲಾತಿ): ರಸಾಯನಶಾಸ್ತ್ರ, ಭೌತಶಾಸ್ತ್ರ, ಫಾರೆನ್ಸಿಕ್​ ಸೈನ್ಸ್​ನಲ್ಲಿ ಸ್ನಾತಕೋತ್ತರ ಪದವಿ
ಜ್ಯೂನಿಯರ್​ ಸೈಂಟಿಫಿಕ್​ ಅಧಿಕಾರಿ: ರಾಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ
ಗಣಿ ಸುರಕ್ಷಾ ಸಹಾಯಕ ನಿರ್ದೇಶಕರು: ಕಮ್ಯೂನಿಟಿ ಮೆಡಿಸಿನ್​, ಇಂಡಸ್ಟ್ರೀಯಲ್​ ಹೆಲ್ತ್​​, ಸಾರ್ವಜನಿಕ ಆರೋಗ್ಯದಲ್ಲಿ ಸ್ನಾತಕೋತ್ತರ ಪದವಿ
ಪ್ರಧಾನ ನಿರ್ದೇಶಕ: ಭೂವಿಜ್ಞಾನ, ಭೌಗೋಳಿಕ ಶಾಸ್ತ್ರ, ಅಪ್ಲೈಡ್​ ಫಿಸಿಕ್ಸ್​, ಜಿಯೋಫಿಸಿಕ್ಸ್​​ ಸ್ನಾತಕೋತ್ತರ ಪದವಿ
ಆಡಳಿತಾತ್ಮಕ ಅಧಿಕಾರಿಗಳು: ಯಾವುದೇ ವಿಷಯದಲ್ಲಿ ಪದವಿ
ವಯೋಮಿತಿ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗನುಸಾರವಾಗಿ ಗರಿಷ್ಠ 30ರಿಂದ 58 ವರ್ಷ ವಯೋಮಿತಿ ಹೊಂದಿರಬೇಕು. ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ, ಪ.ಜಾ, ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ವಿಶೇಷಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇದೆ.

ಹುದ್ದೆಗಳು ಯಾವುವು?, ಎಷ್ಟಿವೆ? : ಲೀಗಲ್​ ಆಫೀಸರ್​​ -2, ಸೈಂಟಿಫಿಕ್​ ಆಫೀಸರ್- 1​, ಡೆಪ್ಯೂಟಿ ಆರ್ಕಿಟೆಕ್ಟ್​​​- 53, ಸೈಂಟಿಸ್ಟ್​​ ಬಿ 1, ಸೈಂಟಿಸ್ಟ್​​ ಬಿ 6, ಜ್ಯೂನಿಯರ್​ ಸೈಂಟಿಫಿಕ್​ ಆಫೀಸರ್​- 2, ಗಣಿ ಸುರಕ್ಷತೆಯ ಸಹಾಯಕರ ನಿರ್ದೇಶಕರು- 2, ಪ್ರಧಾನ ನಿರ್ದೇಶಕರು-1, ಆಡಳಿತಾತ್ಮಕ ಅಧಿಕಾರಿಗಳು 3.

ಅರ್ಜಿ ಸಲ್ಲಿಕೆ, ಆಯ್ಕೆ ಹೇಗೆ? : ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯಿತಿ ನೀಡಲಾಗಿದೆ. ಸಾಮಾನ್ಯ, ಒಬಿಸಿ ಅಭ್ಯರ್ಥಿಗಳಿಗೆ 25 ರೂ ಶುಲ್ಕ ನಿಗದಿಪಡಿಸಲಾಗಿದ್ದು, ಆನ್​ಲೈನ್​ ಮೂಲಕವೇ ಶುಲ್ಕ ಪಾವತಿ ಮಾಡಬೇಕು. ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ನಡೆಯಲಿದೆ.

ಜುಲೈ 27 ಕಡೇಯ ದಿನಾಂಕ. ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು ಈ upsc.gov.in ಜಾಲತಾಣಕ್ಕೆ ಭೇಟಿ ನೀಡಿ.ಜುಲೈ 8ರಿಂದ ಅರ್ಜಿ ಸಲ್ಲಿಕೆ ಮಾಡಬಹುದು.