ಯುಪಿಎಸ್‌ಸಿ ಅಧಿಸೂಚನೆ: 71 ಆಫೀಸರ್​ ಹುದ್ದೆಗಳ ನೇಮಕಾತಿ

ಒಟ್ಟು 71 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಕೇಂದ್ರ ಸರ್ಕಾರಿ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಕೇಂದ್ರ ಲೋಕ ಸೇವಾ ಆಯೋಗವು (ಯುಪಿಎಸ್‌ಸಿ) ಕಾಲಕಾಲಕ್ಕೆ ವಿವಿಧ ಅಧಿಕಾರಿಗಳ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸುತ್ತದೆ. ಇದೀಗ ಆಡಳಿತಾತ್ಮಕ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. . ವಿದ್ಯಾರ್ಹತೆ ಏನು? ಲೀಗಲ್​ ಆಫೀಸರ್​ ಹುದ್ದೆಗೆ ಕಾನೂನು ಪದವಿ. ಸೈಂಟಿಫಿಕ್​ ಆಫೀಸರ್​ ಹುದ್ದೆಗೆ ರಸಾಯನ ಶಾಸ್ತ್ರ, ಮೈಕ್ರೋಬಯೋಲಾಜಿಯಲ್ಲಿ ಸ್ನಾತಕೋತ್ತರ ಪದವಿ. ಡೆಪ್ಯೂಟಿ ಆರ್ಕಿಟೆಕ್ಟ್​​: ಆರ್ಕಿಟೆಕ್​ನಲ್ಲಿ ಪದವಿ ಸೈಂಟಿಸ್ಟ್​ ಬಿ (ಬ್ಯಾಲಿಸ್ಟಿಕ್ಸ್​): ಭೌತಶಾಸ್ತ್ರ, […]

ಅಕ್ಷಯ್​ ಕುಮಾರ್ ನಟನೆಯ ಓ ಮೈ ಗಾಡ್ 2 ಟೀಸರ್​ ಇಂದು ಅನಾವರಣ

ಭಾನುವಾರದಂದು ಸೂಪರ್​ ಸ್ಟಾರ್ ಅಕ್ಷಯ್ ಕುಮಾರ್ ಅವರು ಚಲನಚಿತ್ರಕ್ಕೆ ಸಂಬಂಧಿಸಿದ ಸಣ್ಣ ತುಣುಕನ್ನು ಹಂಚಿಕೊಂಡಿದ್ದರು. ಭಗವಾನ್ ಶಿವನ ಪಾತ್ರದ ತಮ್ಮ ನೋಟವನ್ನು ಅನಾವರಣಗೊಳಿಸಿದ್ದರು. ಟೀಸರ್ ಬಿಡುಗಡೆ ದಿನಾಂಕವನ್ನೂ ಸಹ ಈ ಸ್ಪೆಷಲ್​ ವಿಡಿಯೋದೊಂದಿಗೆ ಬಹಿರಂಗಪಡಿಸಿದ್ದರು.2011ರ ಸೂಪರ್​ ಹಿಟ್ ಚಿತ್ರ ‘ಓ ಮೈ ಗಾಡ್​​’ನ ಮುಂದುವರಿದ ಭಾಗ ಇದು. ಆಗಸ್ಟ್ ತಿಂಗಳಲ್ಲಿ ಚಿತ್ರಮಂದಿರಗಳಲ್ಲಿ ತೆರೆಗಪ್ಪಳಿಸಲು ಸಜ್ಜಾಗಿರುವ ಈ ಚಿತ್ರದ ಟೀಸರ್​ ಇಂದು ಅನಾವರಣಗೊಂಡಿದೆ.2023ರ ಬಹು ನಿರೀಕ್ಷಿತ ಚಿತ್ರಗಳ ಪೈಕಿ ‘OMG 2’ ಕೂಡ ಒಂದು. ಬಾಲಿವುಡ್​ ಕಿಲಾಡಿ ಅಕ್ಷಯ್​ […]

CSK, RCB ಫ್ರಾಂಚೈಸಿಗಳಿಗೆ ಹಣದ ಹೊಳೆ: $15 ಬಿಲಿಯನ್ ತಲುಪಿದ IPL ವ್ಯಾಪಾರ ಉದ್ಯಮ ಬೆಲೆ

ಬೆಂಗಳೂರು: ಐಪಿಎಲ್‌ನ ಮಾಧ್ಯಮ ಹಕ್ಕುಗಳು 2008 ರಿಂದ 2023 ರವರೆಗೆ 18 ಪ್ರತಿಶತದಷ್ಟು ಅಸಾಧಾರಣ ಸಿಎಜಿಆರ್‌ ಮಟ್ಟದ ಬೆಳವಣಿಗೆ ಕಂಡಿವೆ. ಆದರೆ 2017 ಮತ್ತು 2023 ರ ಚಕ್ರಗಳ ನಡುವಿನ absolute terms ನಲ್ಲಿ ಬೆಳವಣಿಗೆಯು 196 ಪ್ರತಿಶತವಾಗಿದೆ. ಐಪಿಎಲ್​​ನ ಪ್ರಸಾರ ಶುಲ್ಕವನ್ನು ಪ್ರತಿ ಪಂದ್ಯದ ಆಧಾರದ ಮೇಲೆ ವಿಶ್ವದ ಇತರ ವೃತ್ತಿಪರ ಲೀಗ್‌ಗಳೊಂದಿಗೆ ಹೋಲಿಸಿ ನೋಡಿದರೆ, ಈ ಶುಲ್ಕಗಳು ನ್ಯಾಷನಲ್ ಬ್ಯಾಸ್ಕೆಟ್‌ಬಾಲ್ ಅಸೋಸಿಯೇಷನ್ (NBA), ಇಂಗ್ಲಿಷ್ ಪ್ರೀಮಿಯರ್ ಲೀಗ್ (EPL) ಮತ್ತು ಬುಂಡೆಸ್ಲಿಗಾದಂತಹವುಗಳಿಗಿಂತ ಹೆಚ್ಚಾಗಿದೆ. ನ್ಯಾಷನಲ್ […]

ವಿಜಯ ರಾಘವೇಂದ್ರ – ಧರ್ಮ ಕೀರ್ತಿ ಆಕ್ಟಿಂಗ್​ ತ್ರಿಕೋನ ಪ್ರೇಮಕಥೆಯ ಓ ಮನಸೇ ಚಿತ್ರ

ವಿಜಯ ರಾಘವೇಂದ್ರ, ಧರ್ಮ ಕೀರ್ತಿರಾಜ್, ಸಂಚಿತಾ ಪಡುಕೋಣೆ ಅಲ್ಲದೇ ಹರೀಶ್ ರಾಯ್, ಸಾಧುಕೋಕಿಲ, ಶೋಭ್ ರಾಜ್, ಕಿಲ್ಲರ್ ವೆಂಕಟೇಶ್, ವಾಣಿಶ್ರೀ, ಜಯರಾಮ್, ರುಶಿಕಾ(ಟಗರು ಸರೋಜ) ಮುಂತಾದವರು ಈ ಚಿತ್ರದ ತಾರಾ ಬಳಗದಲ್ಲಿದ್ದಾರೆ. ಚಿತ್ರದ ಮಾರ್ಗದರ್ಶಕರಾದ ಹಿರಿಯ ನಿರ್ಮಾಪಕ ಅಣಜಿ ನಾಗರಾಜ್, ಸಾಯಿಕೃಷ್ಣ ಈ ಸಿನಿಮಾಗೆ ಸಂಭಾಷಣೆ ಬರೆದಿದ್ದಾರೆ. ‌ರಮೇಶ್ ಅದರಂಗಿ ಕಥೆ ಬರೆದಿರುವ ಈ ಚಿತ್ರಕ್ಕೆ ಎಂ. ಆರ್ ಸೀನು ಛಾಯಾಗ್ರಹಣ, ಶ್ರೀನಿವಾಸ್ ಪಿ‌ ಬಾಬು ಸಂಕಲನ ಹಾಗೂ ಥ್ರಿಲ್ಲರ್ ಮಂಜು, ಡಿಫರೆಂಟ್ ಡ್ಯಾನಿ, ಬಂಡೆ ಚಂದ್ರು […]

ಮೌಂಟ್ ಎವರೆಸ್ಟ್ ಬಳಿ ಐವರ ದುರ್ಮರಣ: ಹೆಲಿಕಾಪ್ಟರ್ ಪತನ..

ಕಠ್ಮಂಡು(ನೇಪಾಳ):ಹೆಲಿಕಾಪ್ಟರ್ ಪೂರ್ವ ನೇಪಾಳದ ಲಮ್ಜುರಾ ಪ್ರದೇಶದಲ್ಲಿ ಪತನಗೊಂಡಿದ್ದು, ಐವರ ಮೃತದೇಹಗಳು ಪತ್ತೆಯಾಗಿವೆ ಎಂದು ಸರ್ಕಾರಿ ಆಡಳಿತಾಧಿಕಾರಿ ಬಸಂತ ಭಟ್ಟರಾಯ್ ತಿಳಿಸಿದ್ದಾರೆ. ನೇಪಾಳದ ಮೌಂಟ್ ಎವರೆಸ್ಟ್ ಬಳಿ ಮನಂಗ್ ಏರ್‌ನ ಹೆಲಿಕಾಪ್ಟರ್ ಇಂದು ಬೆಳಗ್ಗೆ ನಾಪತ್ತೆಯಾಗಿತ್ತು. ಹೆಲಿಕಾಪ್ಟರ್‌ನಲ್ಲಿ ಆರು ಮಂದಿ (ಐವರು ಪ್ರಯಾಣಿಕರು + ಕ್ಯಾಪ್ಟನ್) ಇದ್ದರು. ವಿದೇಶಿ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಖಾಸಗಿ ವಾಣಿಜ್ಯ ಹೆಲಿಕಾಪ್ಟರ್ ಇಂದು ನೇಪಾಳದ ಮೌಂಟ್ ಎವರೆಸ್ಟ್ ಬಳಿ ಅಪಘಾತಕ್ಕೀಡಾಗಿ ಕನಿಷ್ಠ ಐವರು ಸಾವನ್ನಪ್ಪಿದ್ದಾರೆ. ಮೌಂಟ್ ಎವರೆಸ್ಟ್ ಪರ್ವತದ ಸಮೀಪ ಮಂಗಳವಾರ ಬೆಳಗ್ಗೆ ಸಂಭವಿಸಿದ […]