ಉಪ್ಪೂರು: ಮಹತೋಭಾರ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ವಾರ್ಷಿಕ ಮಹಾರಥೋತ್ಸವವು ಫೆ.13 ರಿಂದ 17 ರವರೆಗೆ ಜರುಗಲಿದೆ.
ಫೆ.13 ರಂದು ಬೆಳಿಗ್ಗೆ ಧ್ವಜಾರೋಹಣ ಹಾಗೂ ರಾತ್ರಿ ರಂಗಪೂಜೆ. ಸಂಜೆ 6 ಗಂಟೆಗೆ ಧರ್ಮ ಸಭೆ ವಿದ್ವಾನ್ ಹರಿಪ್ರಸಾದ್ ಭಟ್ ಹೆರ್ಗ ಇವರಿಂದ ಧಾರ್ಮಿಕ ಉಪನ್ಯಾಸ.
ಸಂಜೆ 8 ಗಂಟೆಗೆ ನೃತ್ಯ ವೈವಿಧ್ಯ ಕಾರ್ಯಕ್ರಮ
ಫೆ.14 ರಂದು ಬೆಳಿಗ್ಗೆ 7 ರಿಂದ ಗಣಹೋಮ, ಕಲಶಾಭಿಷೇಕ, ಮಹಾಪೂಜೆ. ಸಂಜೆ 5 ರಿಂದ ಸಾರ್ವಜನಿಕರಿಂದ 1001 ತೆಂಗಿನಕಾಯಿ ಮೂಡುಗಣಪತಿ ಸೇವೆ, ಮಹಾರಂಗಪೂಜೆ
ಸಂಜೆ 7 ರಿಂದ ಸಾಂಸ್ಕೃತಿಕ ಕಾರ್ಯಕ್ರಮ
ಫೆ.15 ಬೆಳಿಗ್ಗೆ 11 ಗಂಟೆಗೆ ರಥಾರೋಹಣ, ಮಧ್ಯಾಹ್ನ 12.30 ಅನ್ನ ಸಂತರ್ಪಣೆ, ಸಂಜೆ 7.30 ರಿಂದ ಮಹಾ ರಥೋತ್ಸವ. ಸಂಜೆ 7 ರಿಂದ ತರಂಗ್ ಗ್ರೂಪ್ ಇವರಿಂದ ಭಕ್ತಿ ಸಂಗೀತ, ರಾತ್ರಿ 9.20 ರಿಂದ ಕುಣಿತ ಭಜನೆ.
ಫೆ.16 ಬೆಳಿಗ್ಗೆ 9 ರಿಂದ ತುಲಾಭಾರ ಸೇವೆ
ಸಂಜೆ 5 ರಿಂದ ಕಟ್ಟೆ ಪೂಜೆ, ಧ್ವಜಾವರೋಹಣ.
ಫೆ.17 ಬೆಳಿಗ್ಗೆ ಸಂಪ್ರೋಕ್ಷಣೆ