ಅಂಬಲಪಾಡಿ ಬಿಲ್ಲವ ಸೇವಾ ಸಂಘವು ಆಯೋಜಿಸಿದ್ದ ‘ಆಟಿಡೊಂಜಿ ಕೂಟ’ ಕಾರ್ಯಕ್ರಮವು ಗ್ರಾಮೀಣ ಜೀವನಶೈಲಿ ಮತ್ತು ಆಷಾಢ ಮಾಸದ (ಆಟಿ ತಿಂಗಳು) ಅನನ್ಯ ಸಂಸ್ಕೃತಿಯನ್ನು ಕಣ್ಮುಂದೆ ಅನಾವರಣಗೊಳಿಸಿತು. ಸಂಘದ ಮಹಿಳಾ ಘಟಕವು ಮುಂಚೂಣಿಯಲ್ಲಿ ನಿಂತು ರೂಪಿಸಿದ ಈ ಕಾರ್ಯಕ್ರಮ, ಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ನೆರೆದಿದ್ದ ಎಲ್ಲರ ಗಮನ ಸೆಳೆಯಿತು.
ಸಂಘದ ಅಧ್ಯಕ್ಷರಾದ ಶಿವದಾಸ್ ಪಿ ಯವರು ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಾಶಿರ್ವಾದಗೈದರು.
ಸಂಘದ ನಿಕಟಪೂರ್ವ ಅಧ್ಯಕ್ಷರಾದ ಶಿವಕುಮಾರ್ ಅಂಬಲಪಾಡಿ ಅವರು ಮಾತನಾಡಿ, “ಆಟಿಡೊಂಜಿ ಕೂಟದಂತಹ ಕಾರ್ಯಕ್ರಮಗಳು ಇಂದಿನ ಯುವ ಪೀಳಿಗೆಗೆ ನಮ್ಮ ಹಿರಿಯರ ಆಹಾರ ಪದ್ಧತಿ ಹಾಗೂ ಬದುಕಿನ ಶೈಲಿಯನ್ನು ಪರಿಚಯಿಸುವ ಉತ್ತಮ ವೇದಿಕೆಗಳು” ಎಂದು ಹೇಳಿದರು.
ಸಂಘದ ಮಹಿಳಾ ಘಟಕದ ಗೌರವ ಸಂಚಾಲಕರಾದ ಶ್ರೀಮತಿ ವಿಜಯಾ ಜಿ ಬಂಗೇರ ಮಾತನಾಡಿ ಆಟಿ ತಿಂಗಳು ಕೇವಲ ಮಳೆಗಾಲದ ಸಂಕಷ್ಟಗಳನ್ನು ಸೂಚಿಸುವುದಿಲ್ಲ, ನಮ್ಮವರು ಹಿಂದಿಲ್ಲಾ ಪಡುತ್ತಿದ್ದ ಬವಣೆಗಳನ್ನು ಬಿಂಬಿಸುತ್ತದೆ. ನಮ್ಮ ಹಿರಿಯರು ಪ್ರಕೃತಿಯಿಂದ ದೊರೆಯುವ ಔಷಧೀಯ ಗುಣಗಳಿರುವ ಸೊಪ್ಪುಗಳು, ಗೆಡ್ಡೆ ಗೆಣಸುಗಳು ಮತ್ತು ಸ್ಥಳೀಯ
ತರಕಾರಿಗಳನ್ನು ಆಹಾರವಾಗಿ ಬಳಸಿಕೊಂಡು ಆರೋಗ್ಯ ಕಾಪಾಡಿಕೊಳ್ಳುವ ಜ್ಞಾನವನ್ನು ಹೊಂದಿದ್ದರು, ಇಂದಿನ ಮಕ್ಕಳನ್ನು ಇಂತಹ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರೇರೆಪಿಸಿ ಆ ಮೂಲಕ ನಮ್ಮ ಭವ್ಯ ಪರಂಪರೆಯನ್ನು ಸಂರಕ್ಷಿಸುವಲ್ಲಿ ಕಾರ್ಯಕ್ರಮ ಆಯೋಜಕರೊಂದಿಗೆ ನಾವೆಲ್ಲರೂ ಜತೆಯಾಗಬೇಕೆಂದು ಕರೆ ನೀಡಿದರು.
‘ಆಟಿಡೊಂಜಿ ಕೂಟ’ದ ಈ ಕಾರ್ಯಕ್ರಮದಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಬ್ರಹ್ಮಾವರ ಘಟಕದಿಂದ 2026 ಸಾಲಿನಲ್ಲಿ ತಾಲೂಕು ಅನುಪಮ ಸೇವಾ ಪುರಸ್ಕಾರ ಪಡೆದ ನಮ್ಮ ಮಹಿಳಾ ಘಟಕದ ಸಹ ಸಂಚಾಲಕಿ ಹೆಮ್ಮೆಯ ಶ್ರೀಮತಿ ವಿಜಯಲಕ್ಷ್ಮೀ ಕೃಷ್ಣ ಕೋಟ್ಯಾನ್ ಇವರನ್ನು ಸಂಘ ಮತ್ತು ಮಹಿಳಾ ಘಟಕದ ಪರವಾಗಿ ವಿಶೇಷವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಗೌರವಾದ್ಯಕ್ಷರಾದ ಗೋಪಾಲ್ ಸಿ ಬಂಗೇರ, ಉಪಾಧ್ಯಕ್ಷ ಎ. ಮುದ್ದಣ್ಣ ಪೂಜಾರಿ, ಪ್ರಧಾನ ಕಾರ್ಯದರ್ಶಿ ರಾಜೇಶ್, ಕೋಶಾಧಿಕಾರಿ ದಯಾನಂದ ಎ.,















