ಆಗಸ್ಟ್ -ಸೆಪ್ಟಂಬರ್ ಮಾಹೆಯ ಪಡಿತರ ಒಂದೇ ಬಾರಿಗೆ ವಿತರಣೆ: ಪ್ರತ್ಯೇಕ ಬಯೋಮೆಟ್ರಿಕ್ ಕಡ್ಡಾಯ

ಉಡುಪಿ: ಸರ್ಕಾರದ ಆದೇಶದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳ ಅಂತ್ಯೋದಯ ಮತ್ತು ಆದ್ಯತಾ (ಬಿ.ಪಿ.ಎಲ್.) ಪಡಿತರ ಚೀಟಿದಾರರಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಡಿ ಪ್ರಸ್ತುತ ಆಗಸ್ಟ್ – 2026 ರ ಮಾಹೆಯಲ್ಲಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಪಡಿತರವನ್ನು ಒಂದೇ ಬಾರಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಿಸಲಾಗುವುದು. ಪಡಿತರ ಚೀಟಿದಾರರು ಎರಡು ತಿಂಗಳ ಧಾನ್ಯವನ್ನು ಪಡೆಯಲು ತಾಂತ್ರಿಕ ದಾಖಲೀಕರಣಕ್ಕಾಗಿ 2 ಬಾರಿ ಪ್ರತ್ಯೇಕವಾಗಿ ಬಯೋ ಮೆಟ್ರಿಕ್ ನೀಡುವುದು ಕಡ್ಡಾಯವಾಗಿರುತ್ತದೆ. ಈ ಸಂಬoಧ ಅಂತ್ಯೋದಯ ಪ್ರತಿ ಪಡಿತರ ಚೀಟಿಗೆ 35 […]
ಉಡುಪಿ: ಯುವತಿ ನೇಣಿಗೆ ಶರಣು- ಕಾರಣ ನಿಗೂಢ

ಉಡುಪಿ: ಮಲ್ಪೆ ಕಲ್ಮಾಡಿಯ ಯುವತಿಯೊರ್ವಳು ನೇಣಿಗೆ ಶರಣಾದ ಘಟನೆ ಬುಧವಾರ ನಡೆದಿದೆ. ಹೊಟೇಲ್‌ನ ಉದ್ಯೋಗಿ, ಮಾಡೆಲಿಂಗ್‌ನಲ್ಲಿ ಆಸಕ್ತಿ ಹೊಂದಿದ್ದ ಕೃತಿ ಬಂಗೇರ(27) ಆತ್ಮಹತ್ಯೆ ಮಾಡಿಕೊಂಡ ಯುವತಿ. ತನ್ನ ತಾಯಿ ಮತ್ತು ಸಹೋದರಿಯೊಂದಿಗೆ ಕಲ್ಮಾಡಿಯ ಮನೆಯಲ್ಲಿ ವಾಸವಾಗಿದ್ದ ಕೃತಿ ಇಂದು ಮನೆಯ ಕೊಠಡಿಯಲ್ಲಿ ಚೂಡಿದಾರದ ಶಾಲಿನಲ್ಲಿ ಕುತ್ತಿಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಕೆ ಕಳೆದ ಕೆಲವು ದಿನಗಳಲ್ಲಿ ಒತ್ತಡ ರೀತಿಯಲ್ಲಿ ವರ್ತಿಸುತ್ತಿದ್ದಳು ಎಂದು ಮನೆಯವರು ತಿಳಿಸಿದ್ದಾರೆ. ಸಹೋದರಿ ನೀಡಿದ ದೂರಿನಂತೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಜಪಾನೀಸ್ ಭಾಷಾ ಕಲಿಕೆಗೆ ಮಣಿಪಾಲದ MSDC ಯಲ್ಲಿದೆ ಭರ್ಜರಿ ಅವಕಾಶ

ಮಣಿಪಾಲ: ವಿದೇಶಿ ಭಾಷೆಗಳ ಅಧ್ಯಯನಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಮಣಿಪಾಲ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ (MSDC) ಜಪಾನೀಸ್ ಭಾಷೆಯ N5 ಮಟ್ಟದ ಕೋರ್ಸ್ಗೆ ವಿಶೇಷ ಎರ್ಲಿ ಬರ್ಡ್ ಆಫರ್ ಘೋಷಿಸಿದೆ. ಈ ಆಫರ್ನಡಿ ಆಯ್ದ ವರ್ಗದ ಅಭ್ಯರ್ಥಿಗಳಿಗೆ ಕೋರ್ಸ್ ಶುಲ್ಕದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಸಾಮಾನ್ಯವಾಗಿ ₹20,000 ಇರುವ ಕೋರ್ಸ್ ಶುಲ್ಕವು ರಿಯಾಯಿತಿಯೊಂದಿಗೆ ₹10,000ಕ್ಕೆ ಲಭ್ಯವಾಗಲಿದೆ. MSDC ಸಿಬ್ಬಂದಿ, ಡಾ. ಟಿ.ಎಂ.ಎ. ಪೈ ಪಾಲಿಟೆಕ್ನಿಕ್ ಸಿಬ್ಬಂದಿ, MAHE ಸಿಬ್ಬಂದಿ, ಡಾ. ಟಿ.ಎಂ.ಎ. ಪೈ ಫೌಂಡೇಶನ್ ಶಾಲೆಗಳ ವಿದ್ಯಾರ್ಥಿಗಳು […]
ಮಣಿಪಾಲದ MSDCಯಲ್ಲಿ PCB Design & Fabrication ತರಬೇತಿ: ಈ ತಿಂಗಳಿನಿಂದಲೇ ಹೊಸ ಬ್ಯಾಚ್ ಶುರು, ಈ ಅವಕಾಶ ಮಿಸ್ ಮಾಡಿಕೊಳ್ಬೇಡಿ

ಮಣಿಪಾಲ: ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳನ್ನು ವಿಸ್ತರಿಸುವ ಉದ್ದೇಶದಿಂದ ಮಣಿಪಾಲ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ (MSDC) ವತಿಯಿಂದ PCB Design & Fabrication Training ಕೋರ್ಸ್ಗೆ ಪ್ರವೇಶಾತಿ ಆರಂಭಗೊಂಡಿದೆ. ಎರಡು ವಾರಗಳ (20 ಗಂಟೆಗಳ) ಅವಧಿಯ ಈ ತರಬೇತಿ ಕಾರ್ಯಕ್ರಮವು KiCad, FlatCAM ಹಾಗೂ CNC ತಂತ್ರಜ್ಞಾನ ಬಳಸಿಕೊಂಡು PCB ವಿನ್ಯಾಸದಿಂದ ತಯಾರಿಕೆವರೆಗೆ ಸಂಪೂರ್ಣ ಪ್ರಾಯೋಗಿಕ ತರಬೇತಿಯನ್ನು ನೀಡಲಿದೆ. ಆಗಸ್ಟ್ 2026ರಿಂದ ಹೊಸ ಬ್ಯಾಚ್ ಆರಂಭವಾಗಲಿದ್ದು, ಸೀಮಿತ ಸೀಟುಗಳಿರುವುದರಿಂದ ಆಸಕ್ತ ಅಭ್ಯರ್ಥಿಗಳು ಶೀಘ್ರದಲ್ಲೇ ನೋಂದಣಿ ಮಾಡಿಕೊಳ್ಳುವಂತೆ ಸಂಸ್ಥೆ ತಿಳಿಸಿದೆ. […]
ಎಸ್.ಕೆ. ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ: ಆ.9ರಂದು ವಿದ್ಯಾರ್ಥಿ ವೇತನ ವಿತರಣೆ, ಪ್ರತಿಭಾ ಪುರಸ್ಕಾರ ಸಮಾರಂಭ

ಮಂಗಳೂರು: ಮಹಾನಗರ ಎಸ್.ಕೆ. ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ, ಪ್ರತಿಭಾ ಪುರಸ್ಕಾರ ಸಮಾರಂಭ ಆ. 9ರಂದು ಬೆಳಗ್ಗೆ 10.30ಕ್ಕೆ ಶ್ರೀ ರಾಧಾಕೃಷ್ಣ ಹಾಲ್ (ಬಾಳಂ ಭಟ್ ಹಾಲ್)ನಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಒಡಿಯೂರು ಮಠದ ಶ್ರೀಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಎಸ್.ಕೆ.ಜಿ.ಐ. ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಪಿ.ಉಪೇಂದ್ರ ಆಚಾರ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಜ್ಞಾನಸುಧಾ ಸಮೂಹ ಶಿಕ್ಷಣ ಸಂಸ್ಥೆಗಳು, ಕಾರ್ಕಳ ಇದರ ಪ್ರವರ್ತಕ ಡಾ| ಸುಧಾಕರ ಶೆಟ್ಟಿ, ಶಾಸಕ ಡಾ| ವೈ. ಭರತ್ […]