ಮಂಗಳೂರು: ಸೈನ್ಸ್ ಒಲಿಂಪಿಯಾಡ್ ಫೌಂಡೇಶನ್ ವತಿಯಿಂದ 2026ರ ಫೆಬ್ರವರಿಯಲ್ಲಿ ನಡೆದ ವಿವಿಧ ಒಲಿಂಪಿಯಾಡ್‍ಗಳ ದ್ವಿತೀಯ ಹಂತದ ಪರೀಕ್ಷೆಗಳಲ್ಲಿ ನಗರದ ಎಕ್ಸ್‍ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಭೂತ ಪೂರ್ವ ಸಾಧನೆ ಮಾಡಿ ಗಮನಸೆಳೆದಿದ್ದಾರೆ.
ನ್ಯಾಷನಲ್ ಸೈನ್ಸ್ ಒಲಿಂಪಿಯಾಡ್‍ನಲ್ಲಿ ದ್ವಿತೀಯ ಪಿಯುಸಿ ವಿಭಾಗದಲ್ಲಿ ಸಮರ್ಥ್ ಸುರೇಶ್ ಹಕ್ಕಂಡಿ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ 32ನೇ ರ್ಯಾಂಕ್ ಪಡೆದು ವಲಯವಾರು ಪ್ರಥಮ ಸ್ಥಾನ ಗಳಿಸಿದ್ದಾರೆ. ಅದೇ ವಿಭಾಗದಲ್ಲಿ ಕೃತಿಕಾ ಮಲ್ಲಿಕಾರ್ಜುನ ಪಾಟೀಲ್ ಅವರು 59ನೇ ರ್ಯಾಂಕ್ (ವಲಯವಾರು ದ್ವಿತೀಯ), ಹಾಗೂ ಬಂಟ್ವಾಳ್ ಅಭಿನಂದ ಬಾಳಿಗಾ ಅವರು 85ನೇ ರ್ಯಾಂಕ್ (ವಲಯವಾರು ಮೂರನೇ) ಪಡೆದು ಸಾಧನೆ ಮಾಡಿದ್ದಾರೆ.
ಇಂಟರ್‍ನ್ಯಾಷನಲ್ ಮ್ಯಾಥಮ್ಯಾಟಿಕ್ಸ್ ಒಲಿಂಪಿಯಾಡ್‍ನಲ್ಲಿ ಪ್ರಖ್ಯಾತ್ ತಿರುಪತಿರೆಡ್ಡಿ ನೀಲನ್ನವರ್ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ 37ನೇ ರ್ಯಾಂಕ್ ಪಡೆದು ವಲಯವಾರು ಪ್ರಥಮ ಸ್ಥಾನ, ಅಭಿಷೇಕ್ ಆರ್.ಎಚ್. ಅವರು 80ನೇ ರ್ಯಾಂಕ್ (ವಲಯವಾರು 3ನೇ) ಪಡೆದಿದ್ದಾರೆ.
ಇಂಟರ್‍ನ್ಯಾಷನಲ್ ಇಂಗ್ಲಿಷ್ ಒಲಿಂಪಿಯಾಡ್‍ನಲ್ಲಿ ಹಾಗೂ ಭವೀಶ್ ಬೆನಕಾ ಕೆ.ಎಸ್. ಅವರು 211ನೇ ರ್ಯಾಂಕ್ (ವಲಯವಾರು 3ನೇ) ಪಡೆದು ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ನ್ಯಾಷನಲ್ ಸೈನ್ಸ್ ಒಲಿಂಪಿಯಾಡ್‍ನಲ್ಲಿ ಪ್ರಥಮ ಪಿಯುಸಿ ವಿಭಾಗದಲ್ಲಿ ಪ್ರಣವ್ ಹೊಸಹಿತ್ಲು ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ 103ನೇ ರ್ಯಾಂಕ್ (ವಲಯವಾರು ಪ್ರಥಮ), ವಿವಾನ್ ಎ. ಗುಡದಿನ್ನಿ ಅವರು 135ನೇ ರ್ಯಾಂಕ್ (ವಲಯವಾರು ದ್ವಿತೀಯ) ಪಡೆದು ಸಾಧನೆ ಮಾಡಿದ್ದಾರೆ.

















