ಕುಂದಾಪುರ: ಹೊಳೆಯಲ್ಲಿ ಮುಳುಗಿ ಯುವಕ ಮೃತ್ಯು

ಉಡುಪಿ: ಜಡ್ಕಲ್ ಗ್ರಾಮದ ಹಯ್ಯಂಗಾರು ಹೊಳೆಗೆ ಈಜಲು ಹೋದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸಂಭವಿಸಿದೆ.ಮೃತ ಯುವಕನನ್ನು ಗೋಳಿಹೊಳೆ ಗ್ರಾಮದ ಅರೆಶಿರೂರು ನಿವಾಸಿ ರಿಕ್ಷಾ ಚಾಲಕ ಸಂದೀಪ್ ನಾಯ್ಕ (32) ಎಂದು ಗುರುತಿಸಲಾಗಿದೆ.ಗೋಳಿಹೊಳೆಯ ಹೊಟೇಲ್ ಉದ್ಯಮಿ ಬಾಬಣ್ಣ ಅವರ ಪುತ್ರರಾಗಿರುವ ಸಂದೀಪ್ ಅವರು ಮಾ.22ರಂದು ಸ್ನೇಹಿತರೊಂದಿಗೆ ಈಜಲು ತೆರಳಿದ್ದರು. ಈ ವೇಳೆ ನೀರಿನಲ್ಲಿ ಮುಳುಗಿ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಮೃತರು ಅವಿವಾಹಿತರಾಗಿದ್ದು, ತಂದೆ-ತಾಯಿ, ಇಬ್ಬರು ಸಹೋದರರನ್ನು ಅಗಲಿದ್ದಾರೆ.
ಉಡುಪಿ: ಕ್ರಿಕೆಟಿಗ, ಸಂಘಟಕ ಮುಹಮ್ಮದ್ ಸಮೀರ್ ಶರೀಫ್ ನಿಧನ.

ಉಡುಪಿ: ಕ್ರಿಕೆಟಿಗ, ಸಂಘಟಕ ಉದ್ಯಾವರ ಪಾಂದೆ ನಿವಾಸಿ ಮುಹಮ್ಮದ್ ಸಮೀರ್ ಶರೀಫ್ (43) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ರವಿವಾರ ತಡರಾತ್ರಿ ನಿಧನರಾಗಿದ್ದಾರೆ.ಯುಎಇಯಲ್ಲಿದ್ದ ಅವರು ಅಸೌಖ್ಯದ ಹಿನ್ನೆಲೆಯಲ್ಲಿ ಕೆಲವು ಸಮಯಗಳ ಹಿಂದೆ ಊರಿಗೆ ಮರಳಿ ಚಿಕಿತ್ಸೆ ಪಡೆಯುತ್ತಿದ್ದರು. ಹಲವಾರು ವರ್ಷಗಳಿಂದ ಯುಎಇಯ ಶಾರ್ಜಾದಲ್ಲಿ ನೆಲೆಸಿದ್ದ ಸಮೀರ್ ಶರೀಫ್, ಯುಎಇ ಸಾಹೇಬಾನ್, ದುಬೈ ಕರ್ನಾಟಕ ಸಂಘ, ಕನ್ನಡಿಗಾಸ್ ಹೆಲ್ಪ್ ಲೈನ್, ಕನ್ನಡಿಗ ಫೆಡರೇಷನ್ ಸೇರಿದಂತೆ ಹಲವಾರು ಕನ್ನಡಪರ ಹಾಗು ಇನ್ನಿತರ ಸಂಘ-ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದರು.ಸಮೀರ್ ಶರೀಫ್ ಉದ್ಯಾವರ ಫ್ರೆಂಡ್ಸ್ […]
ಮಣಿಪಾಲ MSDC ಯಲ್ಲಿದೆ ಅದ್ಬುತ ಉದ್ಯೋಗವಕಾಶ: ಏನೆನೆಲ್ಲಾ ಅರ್ಹತೆಗಳಿರಬೇಕು? ಯಾರು ಅರ್ಜಿ ಸಲ್ಲಿಸಬಹುದು?

ಮಣಿಪಾಲ: ಮಣಿಪಾಲದ MSDC ಯಲ್ಲಿ ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವವರಿಗೆ ಕಂಟೆಂಟ್ ಕ್ರಿಯೇಟರ್ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.ಫ್ರೀಲಾನ್ಸ್ ಆಧಾರದಲ್ಲಿ ಕೆಲಸ ಮಾಡುವ ಈ ಅವಕಾಶದಲ್ಲಿ ತಿಂಗಳಿಗೆ 8ರಿಂದ 10 ವಿಡಿಯೋಗಳನ್ನು ರಚಿಸಬೇಕಾಗುತ್ತದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆತ್ಮವಿಶ್ವಾಸ ಹೊಂದಿರಬೇಕು ಹಾಗೂ ಕ್ಯಾಮೆರಾ ಮುಂದೆ ಸಹಜವಾಗಿ ಕಾಣುವ ಸಾಮರ್ಥ್ಯ ಹೊಂದಿರಬೇಕು. ಉತ್ತಮ ಇಂಗ್ಲಿಷ್ ಸಂವಹನ ಕೌಶಲ್ಯ ಮತ್ತು ವ್ಯಕ್ತಿತ್ವವೂ ಅಗತ್ಯವಾಗಿದ್ದು, Gen-Z ಸಾಮಾಜಿಕ ಮಾಧ್ಯಮ ಟ್ರೆಂಡ್‌ಗಳ ಬಗ್ಗೆ ತಿಳುವಳಿಕೆ ಇರಬೇಕು ಎಂದು ತಿಳಿಸಲಾಗಿದೆ. Instagram, YouTube ಸೇರಿದಂತೆ ವಿವಿಧ […]
ಎಸ್‍ಒಎಫ್ ಒಲಿಂಪಿಯಾಡ್‍ನಲ್ಲಿ ಎಕ್ಸ್‍ಪರ್ಟ್ ಕಾಲೇಜು ವಿದ್ಯಾರ್ಥಿಗಳ ಅಭೂತಪೂರ್ವ ಸಾಧನೆ

ಮಂಗಳೂರು: ಸೈನ್ಸ್ ಒಲಿಂಪಿಯಾಡ್ ಫೌಂಡೇಶನ್ ವತಿಯಿಂದ 2026ರ ಫೆಬ್ರವರಿಯಲ್ಲಿ ನಡೆದ ವಿವಿಧ ಒಲಿಂಪಿಯಾಡ್‍ಗಳ ದ್ವಿತೀಯ ಹಂತದ ಪರೀಕ್ಷೆಗಳಲ್ಲಿ ನಗರದ ಎಕ್ಸ್‍ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಭೂತ ಪೂರ್ವ ಸಾಧನೆ ಮಾಡಿ ಗಮನಸೆಳೆದಿದ್ದಾರೆ.ನ್ಯಾಷನಲ್ ಸೈನ್ಸ್ ಒಲಿಂಪಿಯಾಡ್‍ನಲ್ಲಿ ದ್ವಿತೀಯ ಪಿಯುಸಿ ವಿಭಾಗದಲ್ಲಿ ಸಮರ್ಥ್ ಸುರೇಶ್ ಹಕ್ಕಂಡಿ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ 32ನೇ ರ್ಯಾಂಕ್ ಪಡೆದು ವಲಯವಾರು ಪ್ರಥಮ ಸ್ಥಾನ ಗಳಿಸಿದ್ದಾರೆ. ಅದೇ ವಿಭಾಗದಲ್ಲಿ ಕೃತಿಕಾ ಮಲ್ಲಿಕಾರ್ಜುನ ಪಾಟೀಲ್ ಅವರು 59ನೇ ರ್ಯಾಂಕ್ (ವಲಯವಾರು ದ್ವಿತೀಯ), ಹಾಗೂ ಬಂಟ್ವಾಳ್ ಅಭಿನಂದ […]
ಉಡುಪಿ: ಆತ್ರಾಡಿ ಕಬ್ಯಾಡಿಯಲ್ಲಿ ಟೆಂಪೋ- ಬೈಕ್ ಮಧ್ಯೆ ಭೀಕರ ಅಪಘಾತ- ಸವಾರ ಮೃತ್ಯು

ಉಡುಪಿ: ಟೆಂಪೋ ಹಾಗೂ ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಆತ್ರಾಡಿ ಕಬ್ಯಾಡಿಯ ಅರ್ಮನ್ ರಟ್ ಫ್ಯಾಕ್ಟರಿ ಬಳಿ ಇಂದು ಮಧ್ಯಾಹ್ನ ಸಂಭವಿಸಿದೆ.ಮೃತರನ್ನು ಹೆರ್ಗಾ ಗ್ರಾಮದ ಭಾಸ್ಕರ್ ನಾಯಕ್ (70) ಎಂದು ಗುರುತಿಸಲಾಗಿದೆ. ಟೆಂಪೋ ಆತ್ರಾಡಿಯಿಂದ ಮೂಡುಬೆಳ್ಳೆ ಕಡೆಗೆ ತೆರಳುತ್ತಿದ್ದು, ಈ ಸಂದರ್ಭದಲ್ಲಿ ದುರ್ಘಟನೆ ನಡೆದಿದೆ. ಬೈಕ್ ನ ಹಿಂಬದಿ ಸವಾರನಿಗೆ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.