ದೇಶಾದ್ಯಂತ ಭಾರೀ ಯಶಸ್ಸು ಕಂಡ ಪ್ರಧಾನಮಂತ್ರಿ ನರೇಂದ್ರ ಮೋದಿಯವ ಮಹತ್ವಾಕಾಂಕ್ಷೆಯ ಯೋಜನೆಯಾದ “ಉಜ್ವಲ” ಯೋಜನೆಯಡಿಯಲ್ಲಿ ಉಡುಪಿ ಜಿಲ್ಲೆಯ ಒಟ್ಟು 2000 ಫಲಾನುಭವಿಗಳಿಗೆ ಗ್ಯಾಸ್ ಸೌಲಭ್ಯ ಈಗಾಗಲೇ ಸಿಕ್ಕಿದ್ದು ಇಂದು 400 ಜನರಿಗೆ ಗ್ಯಾಸ್ ವಿತರಣೆಯನ್ನು ಶಾಸಕರಾದ ಶ್ರೀ ರಘುಪತಿ ಭಟ್ ಅವರು ಮಾಡಿದ್ದಾರೆ.
ಕೊಕ್ಕರ್ಣೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ರಘುಪತಿ ಭಟ್, ಕೇಂದ್ರ ಸರಕಾರ ಜನಸಾಮಾನ್ಯರ ಕಣ್ಣೊರೆಸುವ ಕೆಲಸ ಮಾಡುತ್ತಿದೆ, ಒಲೆಯ ಮುಂದೆ ಕೂತು ಕಣ್ಣೀರುಡುತ್ತಿದ್ದ ತಾಯಂದಿರ ಮುಖದಲ್ಲಿ ಇಂದು ಮಂದಹಾಸ ಕಾಣುತ್ತಿದೆ, ಯಾಕೆಂದರೆ ಒಲೆಯ ಮುಂದೆ ಹೊಗೆಯ ಜೊತೆಗೆ ಕೂರುತ್ತಿದ್ದ ಕುಟುಂಬ ಇಂದು ಗ್ಯಾಸ್ ಸೌಲಭ್ಯ ಪಡೆದು ಸಂತೋಷವಾಗಿದೆ ಎಂದರು. ಈ ವೇಳೆ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪ್ರತಾಪ್ ಹೆಗ್ಡೆ, ಚೇರ್ಕಾಡಿ ಪಂಚಾಯತ್ ಅಧ್ಯಕ್ಷರಾದ ಹರೀಶ್ ಶೆಟ್ಟಿ, ಕೊಕ್ಕರ್ಣೆ ಪಂಚಾಯತ್ ಅಧ್ಯಕ್ಷರಾದ ಆಶಾಲತಾ, ಉದ್ಯಮಿಗಳಾದ ಬಾಲಕೃಷ್ಣ ಹೆಗ್ಡೆ, ತಾಲೂಕು ಪಂಚಾಯತ್ ಸದಸ್ಯರಾದ ವಿಜಯ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.