ಉಜಿರೆ ಎಸ್ ಡಿಎಂ ಕಾಲೇಜಿನ ಹಳೆ ವಿದ್ಯಾರ್ಥಿನಿ ಶ್ರೇಯಾ ರೈ ಕೋವಿಡ್ ಗೆ ಬಲಿ

ದುಬೈ: ದುಬೈನಲ್ಲಿ ನೆಲೆಸಿರುವ ಚಿಕ್ಕಮಗಳೂರು ಕಳಸದ ಏಳು ತಿಂಗಳ ಗರ್ಭಿಣಿ ಶ್ರೇಯಾ ರೈ (ಸೌಮ್ಯ ರೈ) ಶುಕ್ರವಾರ ಕೋವಿಡ್–19 ಹಾಗೂ ನ್ಯುಮೋನಿಯಾದಿಂದಾಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಶ್ರೇಯಾ ಅವರಿಗೆ ಕೆಲ ದಿನಗಳ ಹಿಂದೆ ಕೊರೊನಾ ಸೋಂಕು ದೃಢಪಟ್ಟಿತ್ತು. ಹಾಗಾಗಿ ಅವರನ್ನು ದುಬೈಯ ಪ್ರಸಿದ್ಧ ಆಸ್ಪತ್ರೆಯೊಂದರಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಅವರ ಆರೋಗ್ಯ ದಿನ ಕಳೆದಂತೆ ಬಿಗಡಾಯಿಸಿದ್ದು, ಇಂದು ಬೆಳಗ್ಗಿನ ಜಾವ ಕೊನೆಯುಸಿರೆಳೆದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಮೂಲತಃ ಚಿಕ್ಕಮಗಳೂರು ಕಳಸದವರಾಗಿದ್ದ ಶ್ರೇಯಾ, ತಮ್ಮ ಪದವಿ ಮತ್ತು ಸ್ನಾತಕೋತ್ತರ ಪದವಿ ಶಿಕ್ಷಣವನ್ನು ಉಜಿರೆಯ ಎಸ್ ಡಿಎಂ ಕಾಲೇಜಿನಲ್ಲಿ ಪೂರೈಸಿದ್ದರು. ಬಳಿಕ ಪಡುಬಿದ್ರಿಯ ಪವನ್ ಶೆಟ್ಟಿ ಎಂಬವರ ಜೊತೆ ವಿವಾಹವಾಗಿ ದುಬೈಯಲ್ಲಿ ನೆಲೆಸಿದ್ದರು.