ಉಡುಪಿಯ ಯುವಕ ನಟಿಸಿರುವ “ಮೀಸೆ ಮತ್ತು ಜಡೆ” ವಿಡಿಯೋ ಸಖತ್ ವೈರಲ್

ಉಡುಪಿ ಜಿಲ್ಲೆಯ ಪೆರ್ಡೂರು ದೂಪದಕಟ್ಟೆ ಮೂಲದ ಯುವಕ ಪ್ರತೀಕ್ ನಟಿಸಿರುವ “ಮೀಸೆ ಮತ್ತು ಜಡೆ” ಎನ್ನುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದಿಲ್ಲದೆನೇ ಸುದ್ದಿಮಾಡುತ್ತಿದೆ. ಈಗಿನ ಯಂಗ್ ಜಮಾನಕ್ಕೆ ಹೇಳಿಮಾಡಿಸಿದ, ಇಷ್ಟವಾಗುವ ದೃಶ್ಯ ಹಾಗೂ ಡೈಲಾಗ್ ಗಳುಳ್ಳ ಈ ವಿಡಿಯೋ ಯುವಜನರ ಸರ್ಕಲ್ ನಲ್ಲಿ ಸಖತ್ ಟ್ರೆಂಡ್ ಆಗುತ್ತದೆ.
ನಿರ್ದೇಶಕ ಜ್ಯೋತಿರಾವ್ ಮೋಹಿತ್ ಎನ್ನುವವರು ತಮ್ಮ ಹೊಸ ಸಿನಿಮಾ ಮಾಡಲು ನಿರ್ಮಾಪಕರ ಹುಡುಕಾಟದಲ್ಲಿದ್ದರು. ಈ ಸಂದರ್ಭದಲ್ಲಿ ತಮ್ಮ ಹಾಗೂ ತಂಡದ ಪ್ರತಿಭೆ ತೋರಿಸುವ ಉದ್ದೇಶದಿಂದ “ಮೀಸೆ ಮತ್ತು ಜಡೆ” ಅನ್ನುವ ಕಾಮಿಡಿ ವಿಡಿಯೋ ಮಾಡಿ ಅದನ್ನು ಯುಟ್ಯೂಬ್ ಗೆ ಬಿಟ್ಟಿದ್ದರು. ಕೆಲವೇ ಕ್ಷಣಗಳಲ್ಲಿ ಆ ವಿಡಿಯೋ ವೈರಲ್ ಆಗಿ ಯುವಜನರ ಫೆವರೇಟ್ ಆಗಿದೆ.


ಮಿಂಚಿದ ಪೆರ್ಡೂರು ಹುಡುಗ:
ಈ ವಿಡಿಯೋದಲ್ಲಿ ಉಡುಪಿ ಪೆರ್ಡೂರು ಮೂಲದ ಯುವಕ ಪ್ರತೀಕ್ ಕೂಡ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಪ್ರತೀಕ್ ಗೆ ಸಿನಿಮಾ ಬಗ್ಗೆ ಕೊಂಚ ಪ್ರೀತಿ ಜಾಸ್ತಿ, ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರೂ ಬಿಡುವಿನ ವೇಳೆ ನೃತ್ಯ ಹಾಗೂ ಸಿನಿಮಾ ಕುರಿತು ಯೋಚಿಸುತ್ತಾರೆ. ಇದೀಗ “ಮೀಸೆ ಮತ್ತು ಜಡೆ” ವಿಡಿಯೋದಲ್ಲೂ ಮಿಂಚಿದ್ದಾರೆ.