ಉಡುಪಿ : ಸಾರ್ವತ್ರಿಕ ಲೋಕಸಭಾ ಚುನಾವಣೆ 2019 ರ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗ ಉಡುಪಿ ವಿಧಾನಸಭಾ ವ್ಯಾಪ್ತಿಯಲ್ಲಿ ಬಿ.ಜೆ.ಪಿ ಯುವ ಮೋರ್ಚ ಅಧ್ಯಕ್ಷ ಪ್ರತಾಪ ಮತ್ತಿತರರ ವಾಹನದ ಹಿಂಬದಿಯಲ್ಲಿ ದಾಖಲಾದ ಮೇ ಬಿ ಚೌಕಿದಾರ ಸ್ಟಿಕ್ಕರ್ನ್ನು ಮಾದರಿ ನೀತಿ ಸಂಹಿತೆ ತಂಡದ ಜಿಲ್ಲಾ ನೋಡೆಲ್ ಅಧಿಕಾರಿ ಭಾಸ್ಕರ ಮತ್ತಿತರ ಚುನಾವಣಾ ಅಧಿಕಾರಿಯವರ ಸಹಯೋಗದಲ್ಲಿ ತೆರವು ಮಾಡಲಾಯಿತು ಎಂದು ಉಡುಪಿ ವಿಧಾನಸಭಾ ಕ್ಷೇತ್ರ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಎಮ್.ಸಿ.ಸಿ ತಾಲೂಕು ನೋಡೆಲ್ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.