ಹಿರಿಯ ಗಮಕ ಕಲಾವಿದೆ ಗಂಗಮ್ಮ ಕೇಶವಮೂರ್ತಿ ಅವರಿಗೆ ‘ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ’ ಪ್ರದಾನ

ಉಡುಪಿ: ಉಡುಪಿ ರಾಷ್ಟ್ರಕವಿ ಗೋವಿಂದಪೈ ಸಂಶೋಧನ ಕೇಂದ್ರ, ಮಣಿಪಾಲದ ಉನ್ನತ ಶಿಕ್ಷಣ ಅಕಾಡೆಮಿ ಹಾಗೂ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ನಗರದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಗಮಕ ಕಲಾವಿದೆ ಗಂಗಮ್ಮ ಕೇಶವಮೂರ್ತಿ ಅವರಿಗೆ ‘ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಆ ಬಳಿಕ ಮಾತನಾಡಿದ ಗಂಗಮ್ಮ ಅವರು, ಆಂಗ್ಲ ಭಾಷೆಯ ಪ್ರಭಾವದಿಂದಾಗಿ ಇಂದಿನ ಯುವಕರಲ್ಲಿ ಕನ್ನಡ ಭಾಷೆಯ ಶುದ್ಧತೆ ಇಲ್ಲ. ಹಾಗಾಗಿ ಗಮಕ ಕಲೆ ಬೆಳೆಸುವುದು ತುಂಬಾ ಕಷ್ಟವಾಗಿದೆ. ಯುವಕರು ಗಮಕ […]

ಅಪ್ರಾಪ್ತ ಬುದ್ಧಿಮಾಂದ್ಯ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ: ಆರೋಪಿ ಅರುಣ್ ಆಚಾರಿ ದೋಷಿ

ಉಡುಪಿ: ಕಳೆದ ಮೂರು ವರ್ಷಗಳ ಹಿಂದೆ ಮಣಿಪಾಲದ ಪೆರಂಪಳ್ಳಿ ಎಂಬಲ್ಲಿ ನಡೆದ ಅಪ್ರಾಪ್ತ ಬುದ್ಧಿಮಾಂದ್ಯ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಜಿಲ್ಲಾ ವಿಶೇಷ ನ್ಯಾಯಾಲಯ ಆರೋಪಿ ಪೆರಂಪಳ್ಳಿ ನಿವಾಸಿ ಅರುಣ್‌ ಆಚಾರಿ(32) ಎಂಬಾತನನ್ನು ದೋಷಿ ಎಂದು ಬುಧವಾರ ತೀರ್ಪು ನೀಡಿದ್ದು, ಶಿಕ್ಷೆಯ ಪ್ರಮಾಣವನ್ನು ಏಪ್ರಿಲ್‌ 12ರಂದು ಪ್ರಕಟಿಸಲಿದೆ. ಆರೋಪಿ ಅರುಣ್ 2016ರ ಜುಲೈ 16ರಂದು ಬೆಳಿಗ್ಗೆ 9ಗಂಟೆ ಸುಮಾರಿಗೆ ಬಾಲಕಿ ಶಾಲೆಗೆ ಹೋಗುತ್ತಿರುವ ಸಂದರ್ಭದಲ್ಲಿ ಆಕೆಗೆ ಮದುವೆಯಾಗುತ್ತೇನೆಂದು ಆಸೆ ತೋರಿಸಿ ತನ್ನ ಬೈಕಿನಲ್ಲಿ ಕೂರಿಸಿಕೊಂಡು ಮಣಿಪಾಲದ ಎರಡು […]

ಸಂಸದೆ, ಶಾಸಕರು ನಮ್ಮೂರಿಗೆ ಏನೂ ಮಾಡಿಲ್ಲ, ಇವರ ಓಟಿನ ಭಿಕ್ಷೆಗೆ ನಮ್ಮದು ಬಹಿಷ್ಕಾರದ ಶಿಕ್ಷೆ: ನಾಡ್ಪಾಲು, ಮೇಗದ್ದೆ, ಕೂಡ್ಲು, ಅಜ್ಜೊಳ್ಳಿ ಪ್ರದೇಶದಲ್ಲಿ ಮತದಾನ ಬಹಿಷ್ಕಾರ

ಹೆಬ್ರಿ: ನಮ್ಮೂರಲ್ಲಿ ಅಭಿವೃದ್ದಿಯೇ ಆಗಿಲ್ಲ. ಮೂಲಭೂತ ಸೌಕರ್ಯಗಳೇ ಇಲ್ಲ ಇಲ್ಲಿ , ನಾವ್ಯಾಕ್ರೀ ಓಟ್ ಹಾಕ್ಬೇಕು? ಹೀಗೆಂದು ಜನಪ್ರತಿನಿಧಿಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿರುವುದು, ನಾಡ್ಪಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಗದ್ದೆ, ಕೂಡ್ಲು, ಅಜ್ಜೊಳ್ಳಿ ಪ್ರದೇಶದ ಜನರು. ಹೌದು, ಈ ಪ್ರದೇಶಗಳಲ್ಲಿ ರಸ್ತೆ, ಬಸ್ಸಿನ ವ್ಯವಸ್ಥೆ, ಶಾಲೆ, ದೂರವಾಣಿ ಸಂಪರ್ಕ, ತುರ್ತು ವೈದ್ಯಕೀಯ ಸೇವೆ ಒಳಗೊಂಡಂತೆ ಮೂಲಭೂತ ಸೌಕರ್ಯಗಳ ವ್ಯವಸ್ಥೆಯಿಲ್ಲ. ಹಾಗಾಗಿ ಇಲ್ಲಿನ ಜನರು ಬೇಸತ್ತಿದ್ದಾರೆ. ನಮ್ಮ ಪ್ರದೇಶ ಅಭಿವೃದ್ಧಿಯನ್ನೇ ಕಾಣದ ಮೇಲೆ ಯಾವ ಪುರುಷಾರ್ಥಕ್ಕೆ ನಾವು ಓಟ್ […]

ತೆಂಕನಿಡಿಯೂರು ಕಾಲೇಜು : ಮಾನಸಿಕ ಆರೋಗ್ಯ,ಒತ್ತಡ ನಿರ್ವಹಣೆ- ಉಪನ್ಯಾಸ

ಉಡುಪಿ : ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿನ ಆಪ್ತ ಸಲಹಾ ಸಮಿತಿ ಹಾಗೂ ಐಕ್ಯೂಎಸಿ ಘಟಕದ ವತಿಯಿಂದ ಮಂಗಳವಾರ “ಮಾನಸಿಕ ಆರೋಗ್ಯ ಮತ್ತು ಒತ್ತಡ ನಿರ್ವಹಣೆ” ಎನ್ನುವ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.  ಸಂಪನ್ಮೂಲ ವ್ಯಕ್ತಿಗಳಾಗಿ  ದೊಡ್ಡಣಗುಡ್ಡೆ ಡಾ. ಎ.ವಿ. ಬಾಳಿಗಾ ಆಸ್ಪತ್ರೆಯ ಕ್ಲಿನಿಕಲ್ ಸೈಕಾಲಜಿಸ್ಟ್ ಡಾ. ನಾಗರಾಜ ಮೂರ್ತಿ ,ವಿದ್ಯಾರ್ಥಿಗಳು ತಮ್ಮ ಕಲಿಕೆಯ ಸಂದರ್ಭದಲ್ಲಿ ಒತ್ತಡವನ್ನು ಹೇಗೆ ನಿರ್ವಹಿಸಬೇಕು ಎನ್ನುವ ಬಗ್ಗೆ ಮಾತನಾಡಿದರು. ದೈಹಿಕ […]

ಉಡುಪಿ : ಬಿ.ಜೆ.ಪಿ ನಾಯಕನ ಮೇ ಬಿ ಚೌಕಿದಾರ್ ಸ್ಟಿಕ್ಕರ್ ತೆರವುಗೊಳಿಸಿದ ಅಧಿಕಾರಿಗಳು

ಉಡುಪಿ : ಸಾರ್ವತ್ರಿಕ ಲೋಕಸಭಾ ಚುನಾವಣೆ 2019 ರ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗ ಉಡುಪಿ ವಿಧಾನಸಭಾ ವ್ಯಾಪ್ತಿಯಲ್ಲಿ ಬಿ.ಜೆ.ಪಿ ಯುವ ಮೋರ್ಚ ಅಧ್ಯಕ್ಷ ಪ್ರತಾಪ ಮತ್ತಿತರರ ವಾಹನದ ಹಿಂಬದಿಯಲ್ಲಿ ದಾಖಲಾದ ಮೇ ಬಿ ಚೌಕಿದಾರ ಸ್ಟಿಕ್ಕರ್‍ನ್ನು ಮಾದರಿ ನೀತಿ ಸಂಹಿತೆ ತಂಡದ ಜಿಲ್ಲಾ ನೋಡೆಲ್ ಅಧಿಕಾರಿ ಭಾಸ್ಕರ ಮತ್ತಿತರ ಚುನಾವಣಾ ಅಧಿಕಾರಿಯವರ ಸಹಯೋಗದಲ್ಲಿ ತೆರವು ಮಾಡಲಾಯಿತು ಎಂದು ಉಡುಪಿ ವಿಧಾನಸಭಾ ಕ್ಷೇತ್ರ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಎಮ್.ಸಿ.ಸಿ ತಾಲೂಕು ನೋಡೆಲ್ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.